Advertisement
ಮೇ 9ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರಗಳನ್ನು ಸಲ್ಲಿಸಲು ಮೇ 16 ಕೊನೆಯ ದಿನಾಂಕವಾಗಿದೆ. ಮೇ 17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಮೇ 20 ಕೊನೆಯ ದಿನವಾಗಿದೆ. ಮೇ 29ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯ ವರೆಗೆ ಮತದಾನ ನಡೆಯಲಿದೆ. ಮರುಮತದಾನ ಇದ್ದಲ್ಲಿ ಮೇ 30ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆ ವರೆಗೆ ನಡೆಸಲಾಗುತ್ತದೆ. ಮತಗಳ ಎಣಿಕೆಯು ಮೇ 31ರಂದು ಬೆಳಗ್ಗೆ 8 ಗಂಟೆಯಿಂದ ತಾಲೂಕಿನ ಕೇಂದ್ರ ಸ್ಥಳಗಳಲ್ಲಿ ನಡೆಯಲಿದೆ.
Related Articles
Advertisement
ಚಿಟ್ಟಗುಪ್ಪ: ಪುರಸಭೆಯ ಒಟ್ಟು 23 ವಾರ್ಡ್‌ಗಳ ಚುನಾವಣೆ ನಡೆಯಲಿದೆ. ವಾರ್ಡ್ 1ರಿಂದ 8ರ ವರೆಗೆ ಎನ್‌ಎಚ್-9 ಹುಮನಾಬಾದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರಕಾಶ ಮಠಪತಿ ಚುನಾವಣಾಧಿಕಾರಿಯಾಗಿದ್ದು, ಚಿಟಗುಪ್ಪಾ ಪುರಸಭೆ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಬಹುದು. ವಾರ್ಡ್ 9ರಿಂದ 16ರ ವರೆಗೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಾಮನ್‌ರಾವ್ ಚುನಾವಣಾಧಿಕಾರಿಯಾಗಿದ್ದು, ಚಿಟಗುಪ್ಪ ಪುರಸಭೆ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಬಹುದು. ವಾರ್ಡ್ 17ರಿಂದ 23ರ ವರೆಗೆ ಪಿಡಬ್ಲೂಡಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಚೀಂದ್ರ ಚುನಾವಣಾಧಿಕಾರಿಯಾಗಿದ್ದು, ಚಿಟ್ಟಗುಪ್ಪ ವಿಶೇಷ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದು.
ಭಾಲ್ಕಿ: ಪುರಸಭೆಯ ಒಟ್ಟು 27 ವಾರ್ಡ್‌ಗಳ ಚುನಾವಣೆ ನಡೆಯಲಿದೆ. ವಾರ್ಡ್ 1ರಿಂದ 9ರ ವರೆಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ ಚುನಾವಣಾಧಿಕಾರಿಯಾಗಿದ್ದು, ಭಾಲ್ಕಿ ತಾಲೂಕು ಪಂಚಾಯತ್ ಸಮಿತಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದು. ವಾರ್ಡ್ 10ರಿಂದ 18ರ ವರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ನಾ ಸ್ವಾಮಿ ರುದನೂರ್ ಚುನಾವಣಾಧಿಕಾರಿಯಾಗಿದ್ದು, ಭಾಲ್ಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಬಹುದು.
ವಾರ್ಡ್ 19ರಿಂದ 27ರ ವರೆಗೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮುರಗೆಪ್ಪಾ ಸ್ವಾಮಿ ಚುನಾವಣಾಧಿಕಾರಿಯಾಗಿದ್ದು, ಭಾಲ್ಕಿ ಪಿಆರ್‌ಇ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯಲ್ಲಿ ನಾಮಪತ್ರಗಳನ್ನು ಸಲ್ಲಿಸಬಹುದು.
ಔರಾದ (ಬಿ): ಪಟ್ಟಣ ಪಂಚಾಯತ್‌ನ ಒಟ್ಟು 20 ವಾರ್ಡ್‌ಗಳ ಚುನಾವಣೆ ನಡೆಯಲ್ಲಿದೆ. ವಾರ್ಡ್ 1ರಿಂದ 7ರ ವರೆಗೆ ತಾಲೂಕು ಪಂಚಾಯತ್ ಸಮಿತಿ ಔರಾದ (ಬಿ) ಕಾರ್ಯನಿರ್ವಾಹಣಾಧಿಕಾರಿ ಪ್ರಭು ಸಿ.ಮಾನೆ ಚುನಾವಣಾಧಿಕಾರಿಯಾಗಿದ್ದು, ಔರಾದ (ಬಿ) ತಾಲೂಕು ಪಂಚಾಯತ್ ಸಮಿತಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದು. ವಾರ್ಡ್ 8ರಿಂದ 14ರ ವರೆಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಬ್ದುಲ್ ಮಾಜೀದ್ ಅವರು ಚುನಾವಣಾಧಿಕಾರಿಯಾಗಿದ್ದು, ಔರಾದ (ಬಿ) ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದು. ವಾರ್ಡ್ 15 ರಿಂದ 20ರ ವರೆಗೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸುಭಾಶ ನಾಗೂರೆ ಚುನಾವಣಾಆಧಿಕಾರಿಯಾಗಿದ್ದು, ಔರಾದ (ಬಿ) ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.