Advertisement

ಹಕ್ಕು ಚಲಾವಣೆಗೆ ಬೇಡ ಹಿಂಜರಿಕೆ

10:55 AM Apr 10, 2019 | Naveen |

ಬೀದರ: ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದ ಅದೆಷ್ಟೋ ಜನ ಯಾರಿಗೆ ಮತ ಹಾಕಿದರೆ ಏನೂ ಪ್ರಯೋಜನ ಎಂಬ ಧೋರಣೆ ತೋರುತ್ತಿರುವ ಮಧ್ಯದಲ್ಲಿ 1.49 ಲಕ್ಷ ಹೊಸ ಮತದಾರರು ಮಾತ್ರ ತಮ್ಮ ಹಕ್ಕು ಚಲಾವಣೆಗೆ ಉತ್ಸುಕರಾಗಿದ್ದಾರೆ.

Advertisement

ಕಾಲ ಕಳೆದಂತೆ ಚುನಾವಣೆಯ ಪದ್ಧತಿಗಳು, ನಿಯಮಗಳು ಬದಲಾಗುತ್ತಿವೆ. ಆಧುನಿಕ ಯುಗಕ್ಕೆ ಅನುಸಾರ ಚುನಾವಣಾ ಆಯೋಗ ಮತದಾನ ಪ್ರಕ್ರಿಯೆಗಳನ್ನು ಮಾರ್ಪಡು ಮಾಡಿ ಅನೇಕ
ರೀತಿಯ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವ ಕಾರ್ಯ ಮಾಡುತ್ತಿದೆ. ವಿವಿಧೆಡೆ ಮತದಾನ ಕುರಿತು ಜನ ಜಾಗೃತಿ ಮೂಡಿಸುತ್ತಿರುವ ಜಿಲ್ಲಾಡಳಿತ, ಚುನಾವಣಾಧಿಕಾರಿಗಳು ಈ ಬಾರಿ ಚುನಾವಣೆಯಲ್ಲಿ
ಹೆಚ್ಚು ಮತ ಚಲಾವಣೆ ಮಾಡಿಸಬೇಕು ಎಂಬ ನೀರಿಕ್ಷೆ ಹೊಂದಿದ್ದಾರೆ.

ಯಾಕೆ ಮತ ಚಲಾಯಿಸಬೇಕು?: ಬಹುತೇಕ ಜನರು ಮತ ಚಲಾವಣೆ ಮಾಡುವುದರಿಂದ ನಮಗಾಗುವ ಪ್ರಯೋಜನ ಏನು? ಎಂದು ಪ್ರಶ್ನಿಸುವವರಿದ್ದಾರೆ. ಆಡಳಿತ ವ್ಯವಸ್ಥೆ ಸರಿಯಿಲ್ಲ. ಕೆಲಸ ಕಾರ್ಯದಲ್ಲಿ ಭ್ರಷ್ಟಾಚಾರ ಜಾಸ್ತಿ. ನಗರ, ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಕಂಡಿಲ್ಲ. ಜನರ ಸಮಸ್ಯೆಗೆ ರಾಜಕಾರಣಿಗಳು ಸ್ಪಂದಿಸುತ್ತಿಲ್ಲ.

ರಾಜಕಾರಣಿಗಳು ಮತ ಪಡೆದ ಮೇಲೆ ಗರ್ವ, ಅಹಂಕಾರ ಹೆಚ್ಚಾಗುತ್ತಿದೆ ಎಂದು ಹೇಳುವ ಜನರ ಸಂಖ್ಯೆ ಹೆಚ್ಚುತ್ತಿದೆ. ಈ ಎಲ್ಲಾ ವ್ಯವಸ್ಥೆಗಳನ್ನು ಸರಿ ಮಾಡಬೇಕಾದರೆ ಪ್ರತಿಯೊಬ್ಬರು ತಮ್ಮ ಹಕ್ಕು ಚಲಾವಣೆ ಮಾಡಬೇಕಾಗಿದೆ. ಸಕ್ರಿಯವಾಗಿ ಶ್ರೇಷ್ಠವಾದ ಅಭ್ಯರ್ಥಿಗಳು ಯಾರು ಎಂದು ಗುರುತಿಸಿ ಆಯ್ಕೆ ಮಾಡಿದಲ್ಲಿ ಮಾತ್ರ ಹತ್ತಾರು ಪ್ರಶ್ನೆಗಳಿಗೆ ಉತ್ತರ ದೊರೆಯಬಹುದು ಎಂದು ಅಧಿಕಾರಿಗಳು ವಿವಿಧ ಜಾಗೃತಿ ಕಾರ್ಯಕ್ರಮಗಳಲ್ಲಿ
ವಿವರಿಸುತ್ತಿದ್ದಾರೆ.

ಬದಲಾವಣೆ ಆಗಬಹುದೆ?: ಪ್ರತಿ ಐದು ವರ್ಷಕ್ಕೆ ಒಂದು ಬಾರಿ ಬರುವ ಚುನಾವಣೆಯಲ್ಲಿ ಮತ ಚಲಾವಣೆ ಮಾಡುವುದರಿಂದ ಏನು ಭಾರೀ ಬದಲಾವಣೆ ಬರುತ್ತದೆ ಎಂದು ಪ್ರಶ್ನಿಸುವವರು ಇದ್ದಾರೆ. ಆದರೆ, ಚುನಾವಣೆ ಸಂದರ್ಭದಲ್ಲಿ ಯಾರು ಸೂಕ್ತ ಅಭ್ಯರ್ಥಿ ಎಂಬುದನ್ನು ತಿಳಿದುಕೊಂಡು ಅವರನ್ನು ಆಯ್ಕೆ ಮಾಡಿ ಅಧಿಕಾರ ಕೊಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ.

Advertisement

ಮತ ಚಲಾವಣೆ ಒಂದು ದಿನದ ಕೆಲಸ ಅಷ್ಟೆ. ಆದರೆ, ಅದು ಮುಂದಿನ ಐದು ವರ್ಷಗಳು ಮಾತ್ರ ಅಲ್ಲ. ಮಕ್ಕಳ ಭವಿಷ್ಯ, ಮುಂದಿನ ಪೀಳಿಗೆಯ ಭವಿಷ್ಯ ಕೂಡ ಆ ಒಂದು ದಿನದ ಮೇಲೆ ನಿರ್ಧಾರ ಆಗುತ್ತದೆ. ಈ ನಿಟ್ಟಿನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜನರು ಮತ ಚಲಾವಣೆ ಮಾಡಬೇಕು. ತಮ್ಮಗೆ ಸೂಕ್ತ ಎನ್ನಿಸಿದ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂಬುದು ರಾಜಕೀಯ ವಿಶ್ಲೇಷಕರ ಮಾತು.

ಪರೀಕ್ಷೆ ಸುಲಭ ಅಲ್ಲ: ಐದು ವರ್ಷಕ್ಕೆ ಒಂದು ಬಾರಿ ಬರುವ ಚುನಾವಣೆಗಳು ರಾಜಕಾರಣಿಗಳಿಗೆ ಒಂದು ಪರೀಕ್ಷೆಯಾಗಿದೆ. ಜನರೊಂದಿಗೆ ಅವರ ವರ್ತನೆ, ಜನರು ಅವರ ಮೇಲೆ ಇರಿಸಿರುವ ನಂಬಿಕೆ, ನೀಡಿದ ಭರವಸೆಗಳು ಸೇರಿದಂತೆ ಹತ್ತಾರು ವಿಷಯಗಳಲ್ಲಿ
ಅವರ ಪರೀಕ್ಷೆ ನಡೆಯುತ್ತದೆ. ಮತದಾರರು ಮತ ಚಾಲಾಯಿಸುವ ಮುನ್ನ ಅಭ್ಯರ್ಥಿಗಳ ಕುರಿತು ಹಾಗೂ ಅವರ ಪಕ್ಷಗಳ ಸಿದ್ಧಾಂತಗಳ ಕುರಿತು ತಿಳಿದುಕೊಂಡು ಮತ ನೀಡುತ್ತಾರೆ ಹೊರೆತು. ಸುಳ್ಳು
ಪ್ರಚಾರಗಳ ಮೂಲಕ ನಾನೇ ಇಂದ್ರ, ನಾನೇ ಚಂದ್ರ ಎಂದು ಯಾರು ಹೇಳಿಕೊಳ್ಳುತ್ತಾರೊ ಅವರಿಗೆ ತಕ್ಕ ಉತ್ತರ ನೀಡುವ ಅವಕಾಶ ಮತದಾರರಿಗೆ ಇದೆ ಎಂಬುದು ಅನೇಕ ಅನುಭವಸ್ಥರ
ಅಭಿಪ್ರಾಯವಾಗಿದೆ.

ಅಕ್ರಮ ತಡೆಗೆ ಆ್ಯಪ್‌: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಕ್ರಮ ಚಟುವಟಿಕೆಗಳು ನಡೆಯದಂತೆ ಸಾರ್ವಜನಿಕರು ಕೂಡ ನಿಗಾ ವಹಿಸಿ ಅ ಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಬೇಕು ಎಂಬ ನಿಟ್ಟಿನಲ್ಲಿ ಚುನಾವಣಾ ಆಯೋಗ ಈ ಬಾರಿ ಹೊಸ್‌ ಆ್ಯಪ್‌ ತಯಾರಿಸಿದೆ. ಸಿ-ವಿಜಿಲ್‌ ಆ್ಯಪ್‌ ಬಳಸಿಕೊಂಡು ಚುನಾವಣಾ ಅಕ್ರಮಗಳ ಕುರಿತು ದೂರು ಸಲ್ಲಿಸಬಹುದಾಗಿದೆ. ಅಲ್ಲದೆ, ಪಾರದರ್ಶಕ ಚುನಾವಣೆ ನಡೆಸಲು ಸಾರ್ವಜನಿಕರು ಕೂಡ ಮುಂದಾಗಬಹುದಾಗಿದೆ. ಸಾರ್ವಜನಿಕರು ಸಲ್ಲಿಸುವ ದೂರುಗಳ ಆಧಾರದಲ್ಲಿ ಅಧಿ ಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲ್ಲಿದೆ. ಅಲ್ಲದೆ, 1950 ಉಚಿತ ಕರೆ ವ್ಯವಸ್ಥೆ ಕೂಡ ಮಾಡಲಾಗಿದ್ದು, ಜನರು ದೂರವಾಣಿ ಹಾಗೂ ಮೊಬೈಲ್‌ ಮೂಲಕ ದೂರು ನೀಡಬಹುದಾಗಿದೆ. ದೂರು ನೀಡುವ ವ್ಯಕ್ತಿಗಳ
ಕುರಿತು ಗೌಪ್ಯತೆ ಕಾಪಾಡುವುದಾಗಿ ಈಗಾಗಲೇ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಚುನಾವಣೆ ಕಾರ್ಯಕ್ಕೆ 15 ಅಧಿಕಾರಿಗಳ ತಂಡ: ಅಕ್ರಮ ತಡೆದು, ಪಾದರ್ಶಕ ಚುನಾವಣೆ ನಡೆಯಬೇಕು ಎಂಬ ನಿಟ್ಟಿನಲ್ಲಿ ಚುನಾವಣಾ ಧಿಕಾರಿಗಳು 15 ವಿವಿಧ ತಂಡಗಳನ್ನು ರಚಿಸಿದ್ದಾರೆ. 148 ವಲಯ ಅಧಿಕಾರಿಗಳ ತಂಡ, 33 ಕ್ಷಿಪ್ರ ಪಡೆ ತಂಡ, 27 ಸ್ಥರ ಕಣ್ಗಾವಲು ತಂಡ, 6 ವೀಡಿಯೊ ವೀಕ್ಷಣೆ ತಂಡ, 6 ವೀಡಿಯೊ ಮೇಲ್ವಿಚಾರಣೆ ತಂಡ, 5 ಮಿಡಿಯಾ ಪ್ರಮಾಣೀಕರಣ ಮತ್ತು ಮಾನಿಟರಿಂಗ್‌ ತಂಡ, 6 ಮಾದರಿ ನೀರಿ ಸಂಹಿತೆ ತಂಡ, 4 ವೆಚ್ಚ ಮೇಲ್ವಿಚಾರಣೆ ತಂಡ, 2 ದೂರು ಮೇಲ್ವಿಚಾರಣೆ ತಂಡ, 3 ವೆಚ್ಚ ಮೇಲ್ವಾರಣೆ ಸಮಿತಿ, 3 ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಸೇಲ್‌, 23 ಮಾಧ್ಯಮ ಮೇಲ್ವಿಚಾರಣೆ ಸಮಿತಿ (ಮಾದರಿ ನೀತಿ ಸಂಹಿತೆ), 6 ಜಿಲ್ಲಾಮಟ್ಟದ ಅಬಕಾರಿ ತಂಡ, 2 ನಗದು ವಶಪಡಿಸಿಕೊಳ್ಳುವ ಅಧಿ ಕಾರಿಗಳ ತಂಡ, 1 ಲೆಕ್ಕಪರಿಶೋಧಕ ಅಧಿ ಕಾರಿಗಳ ತಂಡ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.

„ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next