Advertisement

ಜಿಲ್ಲೆಯಲ್ಲಿ ಖೂಬಾ ಅಭಿವೃದ್ಧಿ ಕಾರ್ಯ ಶೂನ್ಯ: ಈಶ್ವರ ಖಂಡ್ರೆ

01:10 PM Apr 15, 2019 | Naveen |

ಔರಾದ: ಐದು ವರ್ಷದ ಆಡಳಿತಾವ ಧಿಯಲ್ಲಿ ಬೀದರ ಜಿಲ್ಲೆಯಲ್ಲಿ ಸಂಸದ ಭಗವಂತ ಖೂಬಾ ಅವರ ಅಭಿವೃದ್ಧಿ ಕೆಲಸ ಶೂನ್ಯವಾಗಿದೆ. ಅಭಿವೃದ್ಧಿಯ ಬಗ್ಗೆ ನಿರ್ಲಕ್ಷ್ಯ ತೋರುವ ಸಂಸದರನ್ನು ಶಾಶ್ವತವಾಗಿ ಅಧಿ ಕಾರದಿಂದ ದೂರವಿಟ್ಟು ಉತ್ತಮ ಆಡಳಿತಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿ ಎಂದು ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಹೇಳಿದರು.

Advertisement

ಪಟ್ಟಣದಲ್ಲಿ ತಾಲೂಕು ಕಾಂಗ್ರೆಸ್‌ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಬೀದರ ಸಂಸದರು
ಔರಾದ ಪಟ್ಟಣದ ನಿವಾಸಿಯಾಗಿದ್ದಾರೆ. ಪಟ್ಟಣದಲ್ಲಿ ಒಂದು ಹೇಳಿಕೊಳ್ಳುವಂತಹ ಕೆಲಸ ಮಾಡಿಲ್ಲ. ಹೀಗಾಗಿ ಅಭಿವೃದ್ಧಿ
ಮಾಡದ ವ್ಯಕ್ತಿಯನ್ನು ಮತದಾರರು ತಮ್ಮ ಮತಗಳಿಂದ ದೂರವಿಟ್ಟು ತಕ್ಕ ಪಾಠ ಕಲಿಸಲು ಮುಂದಾಗಬೇಕು ಎಂದರು.

ಕಾಂಗ್ರೆಸ್‌ ಪಕ್ಷದ ಮುಖಂಡರು ಸರ್ವಧರ್ಮಿಯರನ್ನು ಸಮಾನತೆ ದೃಷ್ಟಿಯಿಂದ ನೋಡಿಕೊಂಡು ಪ್ರತಿಯೊಬ್ಬರ ಕಲ್ಯಾಣಕ್ಕಾಗಿ
ಹಲವು ದಶಕಗಳಿಂದ ಶ್ರಮಿಸುತ್ತಿದ್ದಾರೆ. ಆದರೆ ಬಿಜೆಪಿ ಮುಖಂಡರು ದೇಶದ ಹೆಸರಿನಲ್ಲಿ, ಜಾತಿಗಳ ಹೆಸರಿನಲ್ಲಿ, ಧರ್ಮಗಳ ಹೆಸರಿನಲ್ಲಿ ಜನರಲ್ಲಿ ಗುಂಪುಗಾರಿಕೆ ಹುಟ್ಟಿಸಿ ಜನರ ನೆಮ್ಮದಿ ಹಾಳು ಮಾಡುತ್ತಿದ್ದಾರೆ. ಇಂಥ ಕೋಮುವಾದಿ ಪಕ್ಷವನ್ನು ಹಾಗೂ ಆ ಪಕ್ಷದ ಮುಖಂಡರಿಂದ ಮುಗ್ಧ ಜನರು ದೂರವಿರಬೇಕು ಎಂದರು.

ಜಿಪಂ ಮಾಜಿ ಉಪಾಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಮಾತನಾಡಿ, ಒಬ್ಬ ವ್ಯಕ್ತಿಯಿಂದ ಈ ದೇಶವನ್ನು ಮುನ್ನಡೆಸಲು ಎಂದಿಗೂ
ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡಿರುವ ನಾವು ಪ್ರಜಾತಂತ್ರ ವ್ಯವಸ್ಥೆ ಉಳಿಸುವಂತಹ ಕೆಲಸವನ್ನು ಮಾಡಬೇಕಾಗಿದೆ ಎಂದರು.

ಸಚಿವ ರಹೀಮ್‌ ಖಾನ್‌ ಮಾತನಾಡಿ, ಬಿಜೆಪಿ ಮರಾಠಾ ಸಮುದಾಯದ ವಿರೋಧಿ ಪಕ್ಷವಾಗಿದೆ. ನೆರೆ ಮಹಾರಾಷ್ಟ್ರದಲ್ಲಿ
ಮರಾಠಿಗರು ಹೆಚ್ಚು ಸಂಖ್ಯೆಯಲ್ಲಿ ಇರುವುದರಿಂದ ಅಲ್ಲಿನ ಮುಖಂಡರು ಮರಾಠ ಸಮುದಾಯದ ವ್ಯಕ್ತಿಯನ್ನು ಮುಖ್ಯಂತ್ರಿಯನ್ನಾಗಿ ಮಾಡುವಂತೆ ಮಾಡಿದ್ದರು.

Advertisement

ಅದಲ್ಲದೆ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಸವಕಲ್ಯಾಣ ತಾಲೂಕಿನಿಂದ ಮರಾಠಾ ಮುಖಂಡರಿಗೆ ಟಿಕೆಟ್‌ ನೀಡುವುದಾಗಿ ಹೇಳಿ ಕಡೆ ಕ್ಷಣದಲ್ಲಿ ಬಿಜೆಪಿ ಕೈ ಬಿಟ್ಟಿದೆ. ಇಂತಹ ಮರಾಠ ವಿರೋಧಿ  ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದರು.

ಮುಖಂಡ ಬಾಲಾಜಿ ನರೋಟೆ ಮಾತನಾಡಿ, ಬಿಜೆಪಿ ಮುಖಂಡರು ಸುಳ್ಳು ಹೇಳಿ ಜನರನ್ನು ಚುನಾವಣೆ ಸಮಯದಲ್ಲಿ ಯಾಮಾರಿಸುತ್ತಾರೆ. ಅಂತವರ ಮಾತಿಗೆ ಮರುಳಾಗದೆ ಉತ್ತಮ
ಆಡಳಿತಕ್ಕಾಗಿ ಈಶ್ವರ ಖಂಡ್ರೆ ಅವರಿಗೆ ಮತ ನೀಡಬೇಕೆಂದು ಮನವಿ ಮಾಡಿದರು. ಈಶ್ವರ ಖಂಡ್ರೆ ಪೌರಾಡಳಿತ ಸಚಿವರಾಗಿದ್ದಾಗ ಔರಾದ ಪಟ್ಟಣ ಪಂಚಾಯತಗೆ 5 ಕೋಟಿ
ಅನುದಾನ ನೀಡಿದ್ದಾರೆ. ಅಲ್ಲದೆ ದಿನಕೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಕಾಯಂಗೊಳಿಸಿದ್ದಾರೆ. ಇಂತ ಉತ್ತಮ ಆಡಳಿತಗಾರನಿಗೆ ಸಾರ್ವಜನಿಕರು ಆಶೀರ್ವಾದ ಮಾಡಿ ಚುನಾವಣೆಯಲ್ಲಿ ಪ್ರಚಂಡ ಬಹು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದರು.

ವಿಧಾನ ಪರಿಷತ ಸದಸ್ಯ ವಿಜಯಸಿಂಗ್‌, ಮಾಜಿ ಶಾಸಕ ಗುಂಡಪ್ಪ ವಕೀಲ, ಪಕ್ಷದ ತಾಲೂಕು ಅಧ್ಯಕ್ಷ ರಾಜಕುಮಾರ ಜಿಲ್ಲಾಧ್ಯಕ್ಷ
ಬಸವರಾಜ ದಾಬಶೆಟ್ಟೆ, ಮುಖಂಡ ಪಂಡಿತ ಚಿದ್ರಿ, ರಾಮ ನೋಟೆ, ಸುಧಾಕರ ಕೊಳ್ಳುರ, ದತ್ತಾತ್ರಿ ಬಾಪುರೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next