Advertisement

ಐಸಿಯು ಎಸಿ ದುರಸ್ತಿ ಆರಂಭ

03:43 PM May 23, 2019 | Naveen |

ಬೀದರ: ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವಾರ್ಡ್‌-46ರ ತುರ್ತು ನಿಗಾ ಘಟಕದಲ್ಲಿ ಹವಾನಿಯಂತ್ರಿತ (ಎಸಿ) ಯಂತ್ರಗಳ ದುರಸ್ತಿ ಕಾರ್ಯ ಬುಧವಾರ ಆರಂಭವಾಗಿದೆ.

Advertisement

ಅನೇಕ ದಿನಗಳಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿನ ಎಸಿಗಳು ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ರೋಗಿಗಳು ಮನೆಯಿಂದ ಫ್ಯಾನ್‌ ತಂದು ಬಳಸುತ್ತಿರು ಕುರಿತು ಬುಧವಾರ ಉದಯವಾಣಿಯಲ್ಲಿ ‘ಐಸಿಯು ಎಸಿ ಹಾಳು; ರೋಗಿಗಳ ಗೋಳು’ ಶೀರ್ಷಿಕೆಯಡಿ ಪ್ರಕಟಗೊಂಡ ಸುದ್ದಿ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ಆಸ್ಪತ್ರೆಯ ಕಡೆಗೆ ಧಾವಿಸಿದ್ದಾರೆ. ಅಪರ ಜಿಲ್ಲಾಧಿಕಾರಿ ಡಾ| ರುದ್ರೇಶ ಗಾಳಿ ಜಿಲ್ಲಾಸ್ಪತ್ರೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಅಧಿಕಾರಿಗಳು ರೋಗಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಅನುದಾನ ನೀಡುತ್ತಿದ್ದರೂ ಕೂಡ ಯಾವ ಕಾರಣಕ್ಕೆ ಸೇವೆ ನೀಡಲು ಆಗುತ್ತಿಲ್ಲ. ಅಧಿಕಾರಿಗಳ ಕರ್ತವ್ಯ ಲೋಪದಿಂದ ಜೀವ ಹೋದರೆ ಏನುಗತಿ. ಅದಕ್ಕೆ ಯಾರು ಹೊಣೆ ಎಂದು ಅಧಿಕಾರಿಗಳ ಚಳಿ ಬಿಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲಾಧಿಕಾರಿಗಳ ಆದೇಶದಂತೆ ಎಚ್ಚೆತ್ತ ಆಸ್ಪತ್ರೆಯ ಅಧಿಕಾರಿಗಳು ಬುಧವಾರ ಬೆಳಗ್ಗೆಯಿಂದ ಎಸಿಗಳ ದುರಸ್ತಿಗೆ ಒತ್ತು ನೀಡಿದ್ದಾರೆ. ಐಸಿಯುನಲ್ಲಿ ಒಟ್ಟು ನಾಲ್ಕು ಎಸಿಗಳು ಇದ್ದು, ಇದೀಗ ಎರಡು ಎಸಿಗಳು ಕಾರ್ಯ ನಿರ್ವಹಿಸುತ್ತಿವೆ. ಗುರುವಾರದ ವರೆಗೆ ಇನ್ನುಳಿದ ಎರಡು ಎಸಿಗಳು ದುರಸ್ತಿ ಆಗಲಿವೆ ಎಂದು ಆಸ್ಪತ್ರೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಆಸ್ಪತ್ರೆಯ ನಿರ್ದೇಶಕ ತುರ್ತ ನಿಗಾ ಘಟಕದ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡಿರುವ ಮಾಹಿತಿ ಲಭ್ಯವಾಗಿದ್ದು, ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ಕುರಿತು ನಮ್ಮ ಗಮನಕ್ಕೆ ತರದೇ ಯಾವ ಕಾರಣಕ್ಕೆ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಿರಿ ಎಂದು ಪ್ರಶ್ನಿಸಿ, ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಐಸಿಯು ಘಟಕದಲ್ಲಿ ಫ್ಯಾನ್‌ ತಂದು ಬಳಸುತ್ತಿರುವ ರೋಗಿಯ ಕುಟುಂಬದವರು ಎಸಿ ದುರಸ್ತಿ ಕಾರ್ಯ ನೋಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಮಾಧ್ಯಮದಲ್ಲಿ ಸುದ್ದಿ ಪ್ರಕಟಗೊಂಡ ನಂತರ ಅಧಿಕಾರಿಗಳು ಕೆಲಸ ನಿರ್ವಹಿಸುವ ಬದಲಿಗೆ, ಅವರ ಕರ್ತವ್ಯ ಅರಿತು ಕೆಲಸ ಮಾಡಿದರೆ ಸೂಕ್ತ. ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳು ಬಡವರಾಗಿದ್ದು, ಬಡವರಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಿದರೆ ದೇವರು ಅವರಿಗೂ ಒಳ್ಳೆಯದು ಮಾಡುತ್ತಾನೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next