Advertisement

ದೇಶದ ಆರ್ಥಿಕ ಅಭಿವೃದ್ಧಿಗೆ ಕೌಶಲ ಅಗತ್ಯ

06:08 PM Nov 04, 2019 | Naveen |

ಬೀದರ: ಐಟಿಐ ಕುಶಲಕರ್ಮಿಗಳನ್ನು ಪ್ರಾಯೋಗಿಕ ಪರಿಣಿತರನ್ನಾಗಿಸುತ್ತಿದೆ. ಇಂಥವರು ಕೈಗಾರಿಕೆಗಳ ಬೆನ್ನೆಲುಬು. ದೇಶದ ಆರ್ಥಿಕ ಅಭಿವೃದ್ಧಿಗೆ ಕೌಶಲ ಬೇಕು. ಐಟಿಐ ಕೌಶಲದ ಆಧಾರ ಸ್ತಂಭ ಎಂದು ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಉಪ ನಿರ್ದೇಶಕ ಕೆ. ಮಹೇಂದ್ರ ಹೇಳಿದರು.

Advertisement

ನಗರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಜಿಲ್ಲೆಯ
68 ಐಟಿಐ ಕಾಲೇಜು ಪ್ರಾಚಾರ್ಯರಿಗಾಗಿ ಆಯೋಜಿಸಿದ್ದ “ಕೌಶಲ ಅಭಿವೃದ್ಧಿ ಮತ್ತು ಪರಿಹಾರೋಪಾಯಗಳು’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಡಿಜಿಇಟಿ ಅಡಿಯಲ್ಲಿ ಡ್ಯುವೆಲ್‌ ಸಿಸ್ಟಮ್‌, ಮಲ್ಟಿಸ್ಕಿಲ್‌ ತರಬೇತಿ ಸಿಎನ್‌ಸಿ ತರಬೇತಿ ಪಡೆಯಲು ವಿಫುಲ ಅವಕಾಶ ಇದೆ. ತಾವೆಲ್ಲರೂ ಕೌಶಲ ಬೆಳೆಸುವ ಪ್ರಾಥಮಿಕ ಹಂತದ ಅಧಿಕಾರಿಗಳಿದ್ದು ಅನುಷ್ಠಾನ ಮಾಡಬೇಕು. ಇದು ತಮಗೆ ಕಷ್ಟದ ಮಾತಲ್ಲ. ನಿಮ್ಮ ಇಷ್ಟ ಇದ್ದರೆ ಸರಿ ಎಂದರು.

ಐಟಿಐಗಳ ಸಮಗ್ರ ಅಭಿವೃದ್ಧಿಗಾಗಿ ಸ್ವಯಂ ಮೌಲ್ಯಮಾಪನ ಆನ್‌ ಲೈನ್‌ದಲ್ಲಿ ಅವಕಾಶ ಇದ್ದು, ಅದನ್ನು ಪರಿವೀಕ್ಷಣಾಧಿಕಾರಿಗಳು ದೃಢೀಕರಿಸಿದ ಮೇಲೆ ಕೇಂದ್ರ ಸರಕಾರ ಅನುದಾನ ಕೊಡಲು ಸಹ ಮುಂದಾಗಿದೆ ಎಂದರು.

ಐಟಿಐ ಉತ್ತೀರ್ಣರಾದ ಮೇಲೆ ಕೈಗಾರಿಕೆಯಲ್ಲಿ ಕೆಲಸ ನಿರ್ವಹಿಸುತ್ತ ಉನ್ನತ ಶಿಕ್ಷಣ ಕಲಿಯಲು ಒಜೆಟಿ ಎಂಬ ಯೋಜನೆ ಚಾಲ್ತಿಯಲ್ಲಿದೆ. ತರಬೇತಿದಾರರ ಪ್ರಾಯೋಗಿಕ ಜ್ಞಾನ ಅಭಿವೃದ್ಧಿ ಪಡಿಸಲು ಕೈಗಾರಿಕೆಗಳ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಕೌಶಲಕ್ಕೆ ಉತ್ತೇಜನ ನೀಡಬೇಕು. ಖಾಸಗಿ ಐಟಿಐಗಳಲ್ಲಿ ಅನೇಕ ವರ್ಷಗಳು ಕೆಲಸ ನಿರ್ವಹಿಸಿದ್ದರೂ ಇನ್ನುವರೆಗೆ ಸಿಐಟಿಎಸ್‌ ತರಬೇತಿ ಮಾಡಿಕೊಂಡಿಲ್ಲ.

Advertisement

ಆದರೆ ಇಂದು ಅಂಥ ಅನುಭವಿ ಸಿಬ್ಬಂದಿ ಆನ್‌ ಲೈನ್‌ದಲ್ಲಿ ಅರ್ಜಿ ಹಾಕಿದರೆ ಸಿಐಟಿಎಸ್‌ ನೇರವಾಗಿ ಪರೀಕ್ಷೆಗೆ ಕುಳಿತುಕೊಳ್ಳಬಹುದಾಗಿದೆ ಎಂದು ಹೇಳಿದರು.

ಐಟಿಐ ತರಬೇತಿದಾರರಿಗೆ ಅನೇಕ ಕೌಶಲಗಳನ್ನು ಖರ್ಚಿಲ್ಲದೆ ಕಲಿಸಿ ಉಪಜೀವನಕ್ಕೆ ನಾಂದಿ ಹಾಡಬಹುದಾಗಿದೆ. ಇನ್ನು ತನಕ ನಮಗೆ ಪರಿಪೂರ್ಣ ಪ್ಲಂಬರ್‌, ಎಲೆಕ್ಟ್ರಿಶಿಯನ್‌, ಟಿವಿ ಮೆಕ್ಯಾನಿಕ್‌, ವಹಿಕಲ್‌ ಮೆಕ್ಯಾನಿಕ್‌ ಸಿಗುತ್ತಿಲ್ಲ.

ಇದಕ್ಕೆಲ್ಲ ನಾವೇ ಕಾರಣರಾಗಿದ್ದೇವೆ. ಸೀಲಿಂಗ್‌ ಫ್ಯಾನ್‌, ಇಸ್ತ್ರೀ, ಮಿಕ್ಸರ್‌ ಗ್ರೈಂಡರ್ , ಏರ್‌ಕಂಡಿಶನ್‌, ವಾಷಿಂಗ್‌ ಮಷಿನ್‌, ಮನೆಯ ಪಂಪ್‌ ದುರಸ್ತಿ ಬಗ್ಗೆ ತರಬೇತಿದಾರರಿಗೆ ಜ್ಞಾನ ಒದಗಿಸಿದರೆ ನಿರುದ್ಯೋಗ ಸಮಸ್ಯೆ ಶಮನವಾಗಲಿದೆ.

ನಮ್ಮಲ್ಲಿ ಉಪದೇಶ ಮಾಡುವುದಕ್ಕಿಂತ ಅನುಷ್ಠಾನ ಮಾಡಲು ಮನಮಿಡಿದಾಗ ಮಾತ್ರ ಕೌಶಲ ಸಾಕಾರಗೊಂಡು ಭವ್ಯ ಕೌಶಲ ಭಾರತ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಸಂಸ್ಥೆಯ ಪ್ರಭಾರಿ ಪ್ರಾಚಾರ್ಯ ಶಿವಶಂಕರ ಟೋಕರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮಲ್ಲಿ ಸಾವಿರಾರು ತರಬೇತಿದಾರರು ಉತ್ತೀರ್ಣರಾಗುತ್ತಿದ್ದಾರೆ. ಅವರಿಗೆ ಕನಿಷ್ಠ ಶಿಶಿಕ್ಷು ತರಬೇತಿ ಮಾಡಲು ಜಿಲ್ಲೆಯಲ್ಲಿ ಕೈಗಾರಿಕೆಗಳಿಲ್ಲ. ಹಿಂದುಳಿದ ತರಬೇತಿದಾರರ ಹಿತದೃಷ್ಟಿಯಿಂದ ನಿಮ್ಮ ಮೇಲಿನ ಹಂತದಲ್ಲಿ ಕೈಗಾರಿಕೋದ್ಯಮಿಗಳನ್ನು ಸಂಪರ್ಕಿಸಿ, ಜಿಲ್ಲೆಯ ಐಟಿಐಗಳನ್ನು ದತ್ತು ತೆಗೆದುಕೊಂಡು ಕೌಶಲ್ಯ ಅಭಿವೃದ್ಧಿ ಪಡಿಸಲು ಮನವಿ ಮಾಡಿದರು. ಕೌಶಲ್ಯ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀಕಾಂತ ಸ್ವಾಗತಿಸಿದರು.

ಯುಸೂಫಮಿಯ್ನಾ ಜೋಜನಾ ನಿರೂಪಿಸಿದರು. ಪ್ರಶಾಂತ ಜಾಂತಿಕರ ವಂದಿಸಿದರು. ಈ ಕಾರ್ಯಾಗಾರದಲ್ಲಿ ಜಿಲ್ಲೆಯ 68 ಐಟಿಐ ಪ್ರಾಚಾರ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next