ಬೀದರ: ಸರ್ಕಾರದ ಎಲ್ಲ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಮಹತ್ವದಾಗಿದೆ. ಆದ್ದರಿಂದ ಸರ್ಕಾರಿ ನೌಕರರಲ್ಲಿ ಜನಪರ ಕಾಳಜಿ ಇರುವುದು ಅತ್ಯಂತ ಅವಶ್ಯವಾಗಿದೆ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಹೇಳಿದರು.
ನಗರದ ಶರಣ ಉದ್ಯಾನದಲ್ಲಿ ನಡೆದ ಸರ್ಕಾರಿ ನೌಕರ ಸಂಘದ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ಜ್ಞಾನ, ಅಧಿಕಾರ ಮತ್ತು ಸಂಪತ್ತುಗಳನ್ನು ದೇವರು ಜನ ಹಿತಕ್ಕಾಗಿ ಬಳಸಲು ನೀಡುತ್ತಾನೆ. ಇವು ಪ್ರಾಪ್ತಿಯಾದಾಗ ಅಹಂಕಾರಿಯಾಗದೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ನೌಕರರ ಸಂಘವೆಂದರೆ ಸರ್ಕಾರಿ ನೌಕರರ ಶ್ರೇಯೋಭಿವೃದ್ಧಿಗಾಗಿ ದುಡಿಯುವುದರ ಜೊತೆಗೆ ಜನರ ಕಷ್ಟನಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಿದಾಗ ಸಂಘಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದ ಅವರು, ಚುನಾವಣೆಯ ವರೆಗಿನ ಎಲ್ಲಾ ರೀತಿಯ ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲಾ ಸದಸ್ಯರು, ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರು ಒಟ್ಟಾಗಿ ಒಂದು ತಂಡವಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕು. ಈ ಮೂಲಕ ಜಿಲ್ಲಾ ಸಂಘ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಅಭಿನಂದನೆ ಸ್ವೀಕರಿಸಿದ ಜಿಲ್ಲಾ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ಜಿಲ್ಲೆಯ 20 ಸಾವಿರ ನೌಕರರು ನಮ್ಮ ತಂಡದ ಮೇಲೆ ವಿಶ್ವಾಸವಿಟ್ಟು 2ನೇ ಬಾರಿಗೆ ಆಶೀರ್ವದಿಸಿದ್ದಾರೆ. ಅವರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಸರ್ಕಾರಿ ನೌಕರರ ಸೇವೆಯನ್ನು ಪ್ರಮಾಣಿಕವಾಗಿ ಮಾಡುವುದಾಗಿ ಹೇಳಿದರು.
ಇದೇ ವೇಳೆ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಸಂಘದ ಖಜಾಂಚಿ ಅಶೋಕ ರೆಡ್ಡಿ, ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಮಡಿವಾಳ, ರಾಜಕುಮಾರ ಪಾಟೀಲ, ರಾಜಶೇಖರ ಮಂಗಲಗಿ, ಸುಧಾಕರ, ಓಂಕಾರ ಮಲ್ಲಿಗೆ, ಚಂದ್ರಕಾಂತ ಶಿಕಾರಿ, ಪ್ರಭುಲಿಂಗ, ಮನೋಹರ ಕಾಶಿ, ರಾಜಕುಮಾರ ಹೊಸದೊಡ್ಡೆ, ಡಾ| ವೈಶಾಲಿ, ಸಿದ್ದಮ್ಮ, ರೂಪಾದೇವಿ, ಸಾವಿತ್ರಮ್ಮ, ಯಾಳಪಿ ರೇಣುಕಾ, ಜಗದೇವಿ ಸ್ವಾಮಿ, ಸುಮತಿ ರುದ್ರಾ, ಸಂತೋಷ ಕುಶಾಲರಾವ್, ರಮೇಶ ಹಡಪದ, ಸಂಗಮೇಶ, ಕಾಶೀನಾಥ ಸ್ವಾಮಿ, ರಮೇಶ ಎಲ್. ರಾವ್, ಬಸವರಾಜ ಜಕ್ಕಾ, ನೀಲಕಂಠ ಬಿರಾದಾರ, ಬಕ್ಕಪ್ಪ, ಸತೀಶ ಪಾಟೀಲ, ಅರವಿಂದ ಗಂದಗೆ , ಮಾಣಿಕಪ್ಪ ಗೋರನಾಳೆ, ಪ್ರಕಾಶ ಮಠಪತಿ, ಸಿ.ಎಸ್.ಪಾಟೀಲ, ಬಸವರಾಜ ಶೇರಿಕಾರ, ಮಲ್ಲಿಕಾರ್ಜುನ ಪಂಚಾಕ್ಷರಿ ಇದ್ದರು.