Advertisement

ಭೇದ ಅಳಿಸಿ ದುಡಿಮೆಗೆ ತಕ್ಕ ಸಂಬಳ ನೀಡಿ: ಗಂದಗೆ

05:58 PM Sep 11, 2019 | Naveen |

ಬೀದರ: ಸರ್ಕಾರಿ ಹಾಗೂ ಖಾಸಗಿ ಶಿಕ್ಷರು ಎಂಬ ಭೇದ ಅಳಿಸಿ ವಿದೇಶದಲ್ಲಿರುಂತೆ ದುಡಿಮೆಗೆ ತಕ್ಕ ಸಂಬಳ ನೀಡಲು ಸರ್ಕಾರ ಮುಂದಾಗಬೇಕು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹೇಳಿದರು.

Advertisement

ನಗರದ ಐಎಂಎ ಹಾಲ್ನಲ್ಲಿ ರೋಟರಿ ಕ್ಲಬ್‌ ನ್ಯೂ ಸೆಂಚೂರಿ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಯತ್ನ ಪಟ್ಟಾಗಲಿ ಅಥವಾ ನಕಲು ಮಾಡಿಯಾದರೂ ಡಿ.ಇಡಿ ಅಥವಾ ಬಿ.ಇಡಿ ಮುಗಿಸಿ ಸರ್ಕಾರಿ ಶಿಕ್ಷಕರಾಗಿ ನೇಮಕಗೊಂಡು, ಅಧಿಕ ಸಂಬಳ ಪಡೆದು ಶಾಲೆಗಳಿಗೆ ಚಕ್ಕರ್‌ ಹೊಡೆಯುವವರ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಿದೆ. ಖಾಸಗಿ ಶಾಲೆಗಳಲ್ಲಿ ಕಡಿಮೆ ಸಂಬಳದಲ್ಲಿ ಬೆಳಗ್ಗೆಯಿಂದ ರಾತ್ರಿ ವರೆಗೆ ದುಡಿಯುವ ಶಿಕ್ಷಕರ ಸ್ಥಿತಿ ಶೋಚನೀಯವಾಗಿದೆ. ಸರ್ಕಾರ ಹಾಗೂ ಸಂಘ, ಸಂಸ್ಥೆಗಳು ಇಂಥ ಅನ್ಯಾಯ ಸರಿಪಡಿಸಿ, ಸರ್ಕಾರಿ ಹಾಗೂ ಖಾಸಗಿ ಶಿಕ್ಷಕರೆಂಬ ಭೇದ ಅಳಿಸಿ ಹಾಕಿ, ದುಡಿಮೆಗೆ ತಕ್ಕ ಫಲ ನೀಡಲು ಮುಂದಾಗಬೇಕಾಗಿದೆ ಎಂದರು.

ವಿದೇಶಗಳಲ್ಲಿ ವಿದ್ಯಾರ್ಹತೆ ಅಥವಾ ಪದವಿಗೆ ತಕ್ಕಂತೆ ಸಂಬಳ ನೀಡದೇ ಕಠಿಣ ಪರಿಶ್ರಮ ಪಡುವವರಿಗೆ ಅಧಿಕ ವೇತನ ನೀಡಲಾಗುತ್ತದೆ. ಭಾರತದಲ್ಲಿ ಈ ಪದ್ಧತಿ ವಿರುದ್ಧವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಮನ್ವಯದ ಕೊರತೆಯಿಂದ ವೇತನ ತಾರತಮ್ಯ ವಿಪರಿತವಾಗಿದೆ. ಇಂಥ ಅಸಮರ್ಪಕ ಪದ್ಧತಿ ತೊಲಗಿ ಆರೋಗ್ಯಪೂರ್ಣ ವೇತನಶ್ರೇಣಿ ಜಾರಿಯಾಗಬೇಕು. ಸರ್ಕಾರಿ ಶಾಲೆ ಶಿಕ್ಷಕರಿಗೆ ನೀಡುವ ಎಲ್ಲ ಸೌಲತ್ತು ಖಾಸಗಿ ಶಾಲೆಗಳ ಶಿಕ್ಷಕರಿಗೂ ನೀಡಬೇಕು ಎಂದು ಹೇಳಿದರು.

ಶಿಕ್ಷಕರು ನಿಜವಾದ ರಾಷ್ಟ್ರ ನಿರ್ಮಾಣದ ಶಿಲ್ಪಿಗಳು. ಇಂಜಿನಿಯರ್‌ಗಳು, ಡಾಕ್ಟರ್‌ಗಳು, ಜನ ಪ್ರತಿನಿಧಿಗಳು, ಉನ್ನತ ಹುದ್ದೆಯಲ್ಲಿರುವ ಎಲ್ಲ ಅಧಿಕಾರಿಗಳನ್ನು ತಯಾರಿಸುವ ಯಂತ್ರವೇ ಶಿಕ್ಷಕ. ಆದ್ದರಿಂದ ಸಮಾಜ ಅವರನ್ನು ಬಹು ಗೌರವದಿಂದ ನೋಡಿಕೊಳ್ಳಬೇಕು. ಅವರ ಕಷ್ಟ, ಸುಖಗಳಿಗೆ ಎಲ್ಲರೂ ಕಾಳಜಿ ವಹಿಸಬೇಕು ಎಂದು ಹೇಳಿದರು.

Advertisement

ಸಮಾಜ ಶಿಲ್ಪಿಗಳಾದ ಶಿಕ್ಷಕರಿಗೆ ರೋಟರಿ ಕ್ಲಬ್‌ ಸನ್ಮಾನಿಸಿ ಗೌರವಿಸಿರುವುದು ಉತ್ತಮ ಬೆಳವಣಿಗೆ. ಹಾಗೇ ಭವಿಷ್ಯದಲ್ಲಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ಶುಶ್ರೂಷಕರಿಗೆ ಹಾಗೂ ಸಫಾಯಿ ಕರ್ಮಚಾರಿಗಳಿಗೂ ಸನ್ಮಾನಿಸಿ ಗೌರವಿಸುವ ಕಾರ್ಯ ಆಗಬೇಕು ಎಂದು ಹೇಳಿದರು.

ರೋಟರಿ ಕ್ಲಬ್‌ ನ್ಯೂ ಸೆಂಚ್ಯುರಿ ಘಟಕದ ಅಭಿಜಿತ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ರೋಟ್ರಿ ಕ್ಲಬ್‌ ಇದೊಂದು ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, 110 ವರ್ಷಗಳ ಹಳೆಯ ಸಂಸ್ಥೆಯಾಗಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ಆಸೆ, ಆಕಾಂಕ್ಷೆಗಳನ್ನು ಇಡೇರಿಸುವುದು ಹಾಗೂ ಶೋಷಣೆಗೆ ಒಳಗಾದವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ, ಸಮಾಜದಲ್ಲಿ ಉತ್ತಮ ಕಾರ್ಯ ಮಾಡುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ರೋಟರಿಯನ್ನರ ಉದ್ದೇಶವಾಗಿದೆ. ಪರಿಸರ ಸಂರಕ್ಷಣೆ, ಸ್ವಚ್ಛತೆ, ಸಾಮಾಜಿಕ ಅಸಮಾನತೆ ತೊಲಗಿಸಲು ಸೇವೆ ಸಲ್ಲಿಸುವುದೇ ನಮ್ಮ ಗುರಿ ಎಂದು ಹೇಳಿದರು.

ಜಿಲ್ಲೆಯ ಸುಮಾರು 28 ಸರ್ಕಾರಿ ಹಾಗೂ ಖಾಸಗಿ ಶಾಲಾ ಶಿಕ್ಷಕರಿಗೆ ‘ರಾಷ್ಟ್ರೀಯ ನಿರ್ಮಾಣ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ರೋಟ್ರಿ ಕ್ಲಬ್‌ ನ್ಯೂ ಸೆಂಚ್ಯುರಿ ಅಧ್ಯಕ್ಷೆ ಡಾ|ಶ್ವೇತಾ ಮೇಗೂರ್‌, ಸುಧೇಂದ್ರ ಸಿಂದೋಲ್, ರೂಪಾ ಪಾಟೀಲ ಹಾಗೂ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next