Advertisement

ಮಕ್ಕಳ ಭವಿಷ್ಯಕ್ಕಾಗಿ ಸಮಯ ನೀಡಿ

01:30 PM May 12, 2019 | Team Udayavani |

ಬೀದರ: ಜಿಲ್ಲಾ ಕುಷ್ಠರೋಗ ಅಧಿಕಾರಿಗಳ ಕಾರ್ಯಾಲಯದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಸಿಬ್ಬಂದಿಗಳ ಮಕ್ಕಳು ಹಾಗೂ ಎಸ್‌ಎಸ್‌ಎಲ್ಸಿ, ಪಿಯುಸಿ ಪರೀಕ್ಷೆಯಲ್ಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Advertisement

ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ| ರಾಜಶೇಖರ ಪಾಟೀಲ ಮಾತನಾಡಿ, ಮಕ್ಕಳ ಭವಿಷ್ಯ ಉಜ್ವಲವಾಗಲು ಪಾಕರು ಮಕ್ಕಳಿಗೆ ಸಮಯ ನೀಡಬೇಕು. ಇಂದಿನ ದಿನಗಳಲ್ಲಿ ಮಕ್ಕಳು ಒಂದು ಕಡೆ ಆದರೆ, ಪಾಲಕರ ನಡೆ ಇನ್ನೊಂದು ಕಡೆ ಆಗುತ್ತಿದೆ. ಹಣ ಗಳಿಸುವ ನಿಟ್ಟಿನಲ್ಲಿ ಹತ್ತಾರು ಚಿಂತನೆ ಮಾಡುವ ಪಾಲಕರು ಮಕ್ಕಳ ಭವಿಷ್ಯದ ಕಡೆಗೂ ಗಮನ ಹರಿಸಿದರೆ ಮಾತ್ರ ಮಕ್ಕಳು ಉತ್ತಮ ವ್ಯಕ್ತಿಗಳಾಗಿ ಗುರುತಿಸಿಕೊಳ್ಳುತ್ತಾರೆ. ಇಲ್ಲವಾದರೆ ದುಷ್ಟ ದಾರಿಗೆ ಹೋಗುವ ಸಾಧ್ಯತೆಗಳು ಕೂಡ ಇರುತ್ತವೆ ಎಂದರು.

ತಾಲೂಕು ಕಸಾಪ ಕೋಶಾಧ್ಯಕ್ಷ ವೀರಶೆಟ್ಟಿ ಚೆನ್ನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಮಕ್ಕಳು ನಾಳಿನ ಪ್ರಜೆಗಳು. ಅವರಿಗೆ ಉತ್ತಮ ಮಾರ್ಗದರ್ಶನ ನೀಡುವುದರೊಂದಿಗೆ ಉತ್ತಮ ವಿದ್ಯಾರ್ಥಿಗಳಾಗಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕು. ನಮ್ಮ ಇಲಾಖೆಯ ಸಿಬ್ಬಂದಿಯವರ ಮಕ್ಕಳನ್ನು ಗೌರವಿಸುವುದು ನಮಗೆ ಹೆಮ್ಮೆ. ಇದರಿಂದ ಎಲ್ಲರೊಂದಿಗೆ ಭಾವನಾತ್ಮಕವಾದ ಸಂಬಂಧ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಈ ವೇಳೆ ರೋನಕ್‌ ರಾಜಶೇಖರ ಪಾಟೀಲ, ಸುಮಾ ಕಾಶೀನಾಥ ಸಪಾಲ, ಸೋಹಮ್‌ ಸಂಜಯ ಮಲ್ಗಿಕರ, ಪ್ರಜ್ವಲ ಸೂರ್ಯಕಾಂತ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ರಮೇಶ, ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕ ಕಾಶೀನಾಥ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುಭಾಷ ಮುಧಾಳೆ, ಸಂಗಪ್ಪಾ ಕಾಂಬ್ಳೆ, ಶ್ರಾವಣ ಜಾಧವ, ಓಂಕಾರ ಮಲ್ಕೆಕರ, ಪ್ರವೀಣಕುಮಾರ, ಜಿಲ್ಲಾ ಕಚೇರಿಯ ಸಿಬ್ಬಂದಿ ಗೋರಕನಾಥ, ರಾಜೇಶ, ರಮೇಶ, ಇಮಾನವೆಲ್, ಅಬ್ದುಲ್ ಹೈ, ಸಂಜೀವಕುಮಾರ, ಸೂರ್ಯಕಾಂತ ಪಾಟೀಲ, ಕಾಶೀನಾಥ ಕಿರಣಕುಮಾರ, ಪಂಢರಿನಾಥ ಪೂಜಾರಿ, ಶಾಮರಾವ್‌ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next