Advertisement

ಏಡ್ಸ್‌ ದೂರವಿಡಿ-ರೋಗಿಯನ್ನಲ್ಲ

03:25 PM Dec 04, 2019 | Naveen |

ಬೀದರ: ಸಮಾಜದಲ್ಲಿ ಏಡ್ಸ್‌ ರೋಗ ಪೀಡಿತರನ್ನು ಕನಿಷ್ಠವಾಗಿ ನೋಡುವ ವಾತಾವರಣ ನಿರ್ಮಾಣವಾಗಿದೆ. ನಮ್ಮ ಸುತ್ತಲಿನಲ್ಲಿ ಏಡ್ಸ್‌ ಪೀಡಿತರು ಕಾಣಿಸಿದಾಗ ಅವರನ್ನು ಕಡೆಗಣನೆಯ ದೃಷ್ಟಿಯಿಂದ ನೋಡದೇ ರೋಗ ನಿವಾರಿಸಲು ಸಹಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಟಿ.ಪಿ.ಹೇಳಿದರು.

Advertisement

ನಗರದ ಬ್ರಿಮ್ಸ್‌ ಆಸ್ಪತ್ರೆಯ ಹಾಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಏಡ್ಸ್‌ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏಡ್ಸ್‌ ರೋಗಕ್ಕೆ ಔಷಧ ಇಲ್ಲ. ಮುಂಜಾಗ್ರತೆಯೇ ದಿವ್ಯ ಔ ಷಧ ಎಂದರು.

ವೈದ್ಯಕೀಯ ಅಧಿಧೀಕ್ಷಕ ಡಾ| ವಿಜಯಕುಮಾರ ಅಂತಪ್ಪನೋರ ಮಾತನಾಡಿ, ಎಚ್‌ಐವಿ ಸೋಂಕಿತರು ತಮ್ಮ ಆರೋಗ್ಯದ ಸ್ಥಿತಿ ಸುಧಾರಣೆಗಾಗಿ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ಸರಿಯಾದ ರೀತಿಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಏಡ್ಸ್‌ ನಿಯಂತ್ರಣಾಧಿ ಕಾರಿ ಡಾ|ದೀಪಾ ಖಂಡ್ರೆ ಮಾತನಾಡಿ, ಸಮುದಾಯಗಳು ಬದಲಾವಣೆಯನ್ನುಂಟು ಮಾಡುತ್ತವೆ ಎಂಬ ಘೊಷವಾಕ್ಯದೊಂದಿಗೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿರುವ ಸೇವಾ ಸೌಲಭ್ಯ ಹಾಗೂ ಎಚ್‌ಐವಿ/ಏಡ್ಸ್‌ ರೋಗದ ಸ್ಥಿತಿಗತಿಯ ಕುರಿತು ಮಾಹಿತಿ ನೀಡಿದರು.

ಆರ್‌ಎನ್‌ಟಿಸಿಪಿ ನೋಡಲ್‌ ಅಧಿಕಾರಿ ಡಾ|ಮಹೇಶ ತೊಂಡಾರೆ ಉಪನ್ಯಾಸ ನೀಡಿ, ಏಡ್ಸ್‌ ರೋಗದ ಲಕ್ಷಣಗಳು ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ವಿವರಣೆ ನೀಡಿದರು. ಬ್ರಿಮ್ಸ್‌ ನಿರ್ದೇಶಕ ಡಾ| ಚಂದ್ರಕಾಂತ ಚಿಲ್ಲರ್ಗಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಕೃಷ್ಣಾ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಟ್ಟದ ಕಾರ್ಯಕ್ರಮ ಅಧಿಕಾರಿಗಳಾದ ಡಾ|ರಾಜಶೇಖರ ಪಾಟೀಲ, ಡಾ|ಇಂದುಮತಿ ಪಾಟೀಲ, ಡಾ|ಅನೀಲಕುಮಾರ ಚಿಂತಾಮಣಿ, ಐಸಿಟಿಸಿ, ಎಆರ್‌ಟಿ, ಬ್ಲಿಡ್‌ ಬ್ಯಾಂಕ್‌, ಶರಣ ತತ್ವ, ಪ್ರವರ್ಧ, ಎಲ್‌ಬಿಇಎಸ್‌, ಬೆಳದಿಂಗಳು, ನೆಟ್‌ವರ್ಕ, ಜಿಲ್ಲಾ ಕ್ಷಯರೋಗ ಸಿಬ್ಬಂದಿ ಹಾಗೂ ಡ್ಯಾಪ್ಕು ಕಾರ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

ಸನ್ಮಾನ ಕಾರ್ಯಕ್ರಮ: ಎಚ್‌ಐವಿ/ಏಡ್ಸ್‌ ನಿಯಂತ್ರಣ ಕ್ಷೇತ್ರದಲ್ಲಿ ಉತ್ತವಾಗಿ ಕರ್ತವ್ಯ ನಿರ್ವಹಿಸಿದ ಎಆರ್‌ಟಿ ಕೇಂದ್ರದ ಹಿರಿಯ ವೈದ್ಯಾಧಿ ಕಾರಿ ಡಾ| ಭೀಮರಾವ್‌ ಸಿಂಗೊಡೆ, ಪ್ರವರ್ಧ ಸಂಸ್ಥೆಯ ಆಪ್ತ ಸಮಾಲೋಚಕ ಕಲ್ಲಪ್ಪ, ಐಸಿಟಿಸಿ ಸಾರ್ವಜನಿಕ ಆಸ್ಪತ್ರೆ ಬಸವಕಲ್ಯಾಣ ಆಪ್ತ ಸಮಾಲೋಚಕಿ ಶಿವಲೀಲಾ, ಐಸಿಟಿಸಿ ಸಾರ್ವಜನಿಕ ಆಸ್ಪತ್ರೆ ಔರಾದ ತಂತ್ರಜ್ಞ ಮಹಾಂತೇಶ ಹಾಗೂ ಬೆಳದಿಂಗಳು ಸಂಸ್ಥೆಯ ನಾಗೇಂದ್ರ ಅವರಿಗೆ ನೆನಪಿನ ಕಾಣಿಕೆ, ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.

ಜಾಗೃತಿ ಜಾಥಾ: ಇದಕ್ಕೂ ಮುನ್ನ ಏಡ್ಸ್‌ ದಿನಾಚರಣೆಯ ನಿಮಿತ್ತ ಆರೋಗ್ಯ ಇಲಾಖೆಯಿಂದ ಜಾಗೃತಿ ಜಾಥಾ ನಡೆಸಲಾಯಿತು. ನಗರದ ಡಿಎಚ್‌ಒ ಕಚೇರಿಯಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶ ಸಿದ್ರಾಮ ಟಿ.ಪಿ. ಅವರು ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಾನಪದ ಕಲಾ ತಂಡದವರು ಜಾನಪದ ಗೀತೆಯ ಮೂಲಕ ಏಡ್ಸ್‌ ಕುರಿತು ತಿಳಿವಳಿಕೆ ಮೂಡಿಸಿದರು. ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಸರ್ಕಾರಿ ನರ್ಸಿಂಗ್‌ ಕಾಲೇಜು ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ಮತ್ತು ಎನ್‌ಜಿಒ ಸಿಬ್ಬಂದಿಯಿಂದ ಕೂಡಿದ ಜಾಥಾ ಅಂಬೇಡ್ಕರ್‌ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳ ಮೂಲಕ ಬ್ರಿಮ್ಸ್‌ ಜಿಲ್ಲಾ ಆಸ್ಪತ್ರೆಯ ಆವರಣಕ್ಕೆ ತಲುಪಿ ಮುಕ್ತಾಯಗೊಂಡಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next