Advertisement
ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವೃತ್ತಿ ಮಾರ್ಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ನಮ್ಮೊಳಗಡೆ ಅಗಾಧ ಶಕ್ತಿ, ಪ್ರತಿಭೆ, ಚೈತನ್ಯವಿದೆ. ಸರ್ವಶ್ರೇಷ್ಠವಾದ ಜ್ಞಾನದ ಬಲವಿದೆ. ಇವುಗಳ ಪರಿಪೂರ್ಣ ಬಳಕೆ ಮಾಡಿಕೊಂಡಲ್ಲಿ ಯಶಸ್ಸಿನ ಶಿಖರ ಹತ್ತುವುದು ಸುಲಭ. ಊಟಕ್ಕೂ ಗತಿಯಿಲ್ಲದ ಅದೆಷ್ಟೋ ಜನರು ಶ್ರೇಷ್ಠ ಸಾಧಕರಾಗಿ ಇತಿಹಾಸ ರಚನೆ ಮಾಡಲು ಅಂತರ್ ಶಕ್ತಿ ಸದ್ಬಳಕೆಯೇ ಪ್ರಮುಖ ಕಾರಣ ಎಂದು ಹೇಳಿವಿದ್ಯಾರ್ಥಿಗಳಲ್ಲಿ ಪ್ರೇರಣೆ ತುಂಬಿದರು. ಏಕಾಗ್ರತೆ ಇದ್ದಲ್ಲಿ ವಿಷಯ ಸರಿಯಾಗಿ ಅರ್ಥವಾಗಲು ಸಾಧ್ಯ. ಇಲ್ಲವಾದಲ್ಲಿ ಸಣ್ಣ ವಿಷಯಗಳೂ ಬೆಟ್ಟದಂತೆ ಕಾಡುತ್ತವೆ. ಯಶಸ್ಸಿಗೆ ಅಡ್ಡಿಯಾಗುತ್ತವೆ. ಏಕಾಗ್ರತೆ, ಉನ್ನತ ಗುರಿ, ಆತ್ಮವಿಶ್ವಾಸದಿಂದ ಅಧ್ಯಯನ ಮಾಡಿದರೆ ನಾಗರಿಕ ಸೇವಾ ಪರೀಕ್ಷೆಗಳನ್ನು ಸುಲಭವಾಗಿ ಉತ್ತೀರ್ಣರಾಗಬಹುದು ಎಂದರು. ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಸಂದೇಹಗಳನ್ನು ನಿವಾರಿಸಿದರು. ಬಿಸಿಎಂ ಜಿಲ್ಲಾ ಅಧಿಕಾರಿ ರಮೇಶ ದೇವಮಾನೆ ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ವಿಸ್ತರಣಾ ಧಿಕಾರಿ ಅಶೋಕ ಶೇರಿಕಾರ್, ಗಣಪತಿ
ರಾಠೊಡ ಹಾಗೂ ಇತರರು ಉಪಸ್ಥಿತರಿದ್ದರು. ಪ್ರಾಚಾರ್ಯ ಚೆನ್ನಬಸವ ಹೇಡೆ ನಿರೂಪಿಸಿದರು. ನಿಲಯದ ಬಿಎ, ಬಿಕಾಂ, ಬಿಎಸ್ಸಿ ಇತರೆ ಪದವಿ ಓದುತ್ತಿರುವ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.