Advertisement

ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಅವಶ್ಯ

12:39 PM Dec 06, 2019 | Team Udayavani |

ಬೀದರ: ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲು ಮುಂದಾಗಬೇಕು ಎಂದು ದುಬಲಗುಂಡಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಅಮರ ಪಸಾರ್ಗಿ ಸಲಹೆ ನೀಡಿದರು.

Advertisement

ಹುಮನಾಬಾದ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ನಡೆದ ತೋಟಗಾರಿಕೆ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್ಸಿ (ತೋಟಗಾರಿಕೆ) ವಿದ್ಯಾರ್ಥಿಗಳ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಬೀದರ ರೈತರು ತೋಟಗಾರಿಕೆ ಮಹಾವಿದ್ಯಾಲಯ ವಿದ್ಯಾರ್ಥಿಗಳಿಂದ ತೋಟಗಾರಿಕೆ ಆಧುನಿಕ ತಂತ್ರಜ್ಞಾನಗಳ ವಿನೂತನ ಆವಿಷ್ಕಾರಗಳ ಕುರಿತು ಮಾಹಿತಿ ಪಡೆದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದರು.

ಪ್ರಗತಿಪರ ರೈತ ಶಿವರಾಜ ಗಂಗಶೆಟ್ಟಿ ಮಾತನಾಡಿ, ಗ್ರಾಮೀಣ ಭಾಗದ ರೈತರಲ್ಲಿ ಆಧುನಿಕ ತಂತ್ರಜ್ಞಾನಗಳ ಮಾಹಿತಿ ಕೊರತೆ ಇದ್ದು, ಈ ಶಿಬಿರದ ಮೂಲಕ ವಿದ್ಯಾರ್ಥಿಗಳಿಂದ ಆಧುನಿಕ ಯಂತ್ರೋಪಕರಣದ ಮಾಹಿತಿ ಪಡೆದು ಉತ್ತಮ ಇಳುವರಿ ಪಡೆಯಬೇಕು ಎಂದು ಕರೆ ನೀಡಿದರು.

ಅಶೋಕ ಕುಮಾರ ಚಳಕಾಪೂರೆ ಮಾತನಾಡಿ, ವೈಜ್ಞಾನಿಕ ಕಾಲದಲ್ಲಿ ರೈತರು ಕೇವಲ ಕೃಷಿ ಬೆಳೆಗಳನ್ನು ಅವಲಂಬಿಸದೇ ದೀರ್ಘ‌ಕಾಲಿಕ ಆದಾಯ ತರುವ ತೋಟಗಾರಿಕೆ ಬೆಳೆಗಳನ್ನು ಬೆಳೆಯಬೇಕೆಂದು ಸಲಹೆ ನೀಡಿದರು.

Advertisement

ಅಧ್ಯಕ್ಷತೆ ವಹಿಸಿದ್ದ ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಡಾ|ರವಿಂದ್ರ ಮುಲಗೆ ಮಾತನಾಡಿ, ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕಿನ ಬಗ್ಗೆ ಅರಿವು ಮೂಡಿಸುವುದು ಮತ್ತು ಪರಿಣಿತ ರೈತರಿಂದ ತಾಂತ್ರಿಕ ಮಾಹಿತಿ ಪಡೆದು ಮಾರ್ಗದರ್ಶಕರಾಗಬೇಕೆಂದು ಕಿವಿ ಮಾತು ಹೇಳಿದರು.

ಕೃಷಿಯಲ್ಲಿ ರೈತರು ಅನುಭವಿಸುವ ಸಮಸ್ಯೆಗಳು ಮತ್ತು ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುವುದರ ಜೊತೆಗೆ ತೋಟಗಾರಿಕೆ ಬೆಳೆಗಳಲ್ಲಿ ಒಳ್ಳೆಯ ತಳಿಗಳನ್ನು ಉಪಯೋಗಿಸಬೇಕು. ಮೋಹಕ ಬಲೆ ಬಳಸಬೇಕು, ಪ್ಲಾಸ್ಟಿಕ್‌ ಮಲಿcಂಗ್‌, ಹಸಿರು ಮನೆ, ನೆರಳು ಮನೆ ಅಳವಡಿಸಿಕೊಂಡು ಹೆಚ್ಚು ಲಾಭ ಪಡೆಯಬಹುದು ಎಂದು ರೈತರಿಗೆ ಸಲಹೆ ನೀಡಿದರು.

ಭಾರತದ ಮೊದಲ ರಾಷ್ಟ್ರಪತಿ ಡಾ|ರಾಜೇಂದ್ರ ಪ್ರಸಾದ ಅವರ ಜನ್ಮದಿನದ ಅಂಗವಾಗಿ ಕೃಷಿ ಶಿಕ್ಷಣ ದಿನ ಆಚರಿಸಲಾಗುತ್ತದೆ. ಇವರು ಸ್ವತಂತ್ರ ಭಾರತದ ಮೊದಲ ಕೇಂದ್ರ ಕೃಷಿ ಮಂತ್ರಿಯಾಗಿದ್ದರು ಎಂದು ವಿವರಿಸಿದರು.

ಗ್ರಾಪಂ ಸದಸ್ಯರಾದ ಮಾಣಿಕರಾವ್‌ ಭೋಲಾ, ಶಾಂತಪ್ಪಾ ಪಸಾರ್ಗಿ, ರೈತ ಸಂಪರ್ಕ ಕೇಂದ್ರ ಅಧಿಕಾರಿಗಳಾದ ಗೋವಿಂದ, ರಾಕೇಶ ಸಾಗರ ಮತ್ತು ಶಿಬಿರದ ಸಂಯೋಜಕರಾದ ಡಾ| ಶಶಿಕಲಾ ರೂಳಿ, ಡಾ| ಧನಂಜಯ ಪಿ., ಡಾ| ಕಾವಳೆ ನಾಗೇಂದ್ರ, ಸಹಾಯಕ ಪ್ರಾಧ್ಯಾಪಕ ಸುನಿಲ ವಾಡಿ, ರೈತರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಶ್ವನಾಥ ಪ್ರಾಸ್ತಾವಿಕ ವರದಿ ಮಂಡಿಸಿದರು. ನರೇನ ಮತ್ತು ಸ್ವೇತಾ ಬೆಂಕಿ ನಿರೂಪಿಸಿದರು. ಶಾಂಭವಿ ಸ್ವಾಗತಿಸಿದರು. ದಾಮದೀಪ ವಂದಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next