Advertisement
ಹೌದು, ಬೆಟಗೇರಿಯ ಗಾಂಧಿ ನಗರದ ನಿವಾಸಿಯಾಗಿದ್ದ ಭೇನು ಭಾಟ್ ಅವರು ಹಾಕಿಯಲ್ಲಿ ಲೆಫ್ಟ್ ಔಟ್ ಸ್ಥಾನದಲ್ಲಿ ಮಿಂಚಿದ್ದರು. ಆ ಕಾಲದಲ್ಲಿ ಭಾಟ್ ಅವರಷ್ಟು ವೇಗದ ಓಟಗಾರ ಮತ್ತೂಬ್ಬರಿಲಿಲ್ಲ. ರೈಲ್ವೇ ನೌಕರನಾಗಿದ್ದ ಭಾಟ್, ಸದರನ್ ರೈಲ್ವೇ(ಚೆನ್ನೈ) ತಂಡವನ್ನು ಪ್ರತಿನಿಧಿ ಸುತ್ತಿದ್ದರು. ಬಳಿಕ ಇಂಡಿಯನ್ ರೈಲ್ವೇ ಹಾಗೂ ಭಾರತ ಹಾಕಿ ತಂಡದಲ್ಲೂ ಸ್ಥಾನ ಪಡೆದಿದ್ದರು. ಅಲ್ಲದೇ, ಭಾಟ್ ಮಿಂಚಿನ ಓಟದ ಮೂಲಕ ಎಲ್ಲರ ಹುಬ್ಬೇರಿಸುವಂತೆ ಆಡುತ್ತಿದ್ದರು. ಇಂಡಿಯನ್ ಎಲೆವೆನ್ ತಂಡದಿಂದ ಬೆಂಗಳೂರಿನಲ್ಲಿ ನಡೆದಿದ್ದ ಶ್ರೀಲಂಕಾ-ಭಾರತ, ವಿಜಯವಾಡದಲ್ಲಿ ಪೋಲೆಂಡ್- ಇಂಡಿಯಾ ತಂಡಗಳ ಸೆಣಸಾಟವನ್ನು ವೀಕ್ಷಿಸಿದ್ದ ಧ್ಯಾನಚಂದ್ ಹಾಗೂ ಮತ್ತಿತರರೆ ಹಿರಿಯ ಕ್ರೀಡಾಪಟುಗಳು ಮೆಚ್ಚುಗೆ ಸೂಚಿಸಿದ್ದರು. ಅದೇ ಸಂದರ್ಭದಲ್ಲಿ ಧ್ಯಾನ್‌ಚಂದ್, ಭಾಟ್ ಅವರನ್ನು “ದಿ ಸ್ಪೀಡ್’ ಎಂದು ಪ್ರೀತಿಯಿಂದ ಕರೆದಿದ್ದರಂತೆ ಎಂದು ಸ್ಮರಿಸುತ್ತಾರೆ ಸ್ಥಳೀಯ ಹಾಕಿ ಪಟು ಶಿವಪ್ಪ ಕೋರಸ್.
Related Articles
Advertisement
ಆದರೆ ಆ ವರ್ಷದ ಒಲಿಂಪಿಕ್‌ನಲ್ಲಿ ಪಾಲ್ಗೊಂಡಿದ್ದ 15 ರಾಷ್ಟ್ರಗಳ ಪೈಕಿ ಅಂತಿಮ ಪಂದ್ಯದಲ್ಲಿ ಭಾರತ ನೆರೆಯ ಪಾಕಿಸ್ತಾನವನ್ನು ಮಣಿಸಿ, ಚಿನ್ನದ ಪದಕ ಮುಡಿಗೇರಿಸಿಕೊಂಡಿತು. ಆದರೆ ಬಾಲ್ಯದಿಂದ ಹಾಕಿಯೇ ತನ್ನ ಉಸಿರು ಎಂದು ನಂಬಿದ್ದ ಭಾಟ್ ಅವರಿಗೆ ಒಲಿಂಪಿಕ್ ಅಷ್ಟೇಯಲ್ಲ ಚಿನ್ನದ ಪದಕದಿಂದಲೂ ವಂಚಿಸಿತು ಎಂಬುದು ವಿಧಿಯಾಟ. ಕೊನೆವರಿಗೂ ಈ ನೋವು ಅವರನ್ನು ಕಾಡಿತು ಎನ್ನುತ್ತಾರೆ ಹತ್ತಿರದಿಂದ ಕಂಡವರು.