Advertisement
ಧಾರ್ಮಿಕ ಕಾರ್ಯಕ್ರಮವಾಗಿ ಡಿ. 28 ರಂದು ಮಂಗಳ್ಳೋತ್ಸವ ಭಜನ ಕಾರ್ಯಕ್ರಮವು ಪರಿಸರದ ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ನಡೆಯಿತು.
Related Articles
Advertisement
ಮಂಡಳಿಯ ಗೌರವಾಧ್ಯಕ್ಷ ಅರವಿಂದ ಎ. ಶೆಟ್ಟಿ, ಸಮಾಜ ರತ್ನ ಲಯನ್ ಡಾ| ಶಂಕರ್ ಕೆ. ಟಿ., ಬೆಳಿಯೂರುಗುತ್ತು ಡಾ| ಅರುಣೋದಯ ರೈ ಮತ್ತು ಉದಯ ಶೆಟ್ಟಿ ಪೆಲತ್ತೂರು, ಮಂಡಳದ ಅಧ್ಯಕ್ಷ ಜಯರಾಮ್ ಎಂ. ಶೆಟ್ಟಿ ಉಪಸ್ಥಿತರಿದ್ದರು. ಮಹಾಪೂಜೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಬ್ರಹ್ಮಶ್ರೀ ಅರುಣ್ ತಂತ್ರಿ ಖಂಡಿಕೆ, ವೇದಮೂರ್ತಿ ಗಣೇಶ್ ಸರಳಾಯ, ಸಂತೋಷ್ ಗುರುಸ್ವಾಮಿ ಮೂಡು ಮಾರ್ನಾಡ್ ಇವರ ಹಸ್ತದಿಂದ ನೆರವೇರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಾಯಾ ಶೂರ್ಪನಖೀ-ವಾಲಿ ಮೋಕ್ಷ ಯಕ್ಷಗಾನ ಬಯಲಾಟವು ಬೇಬಿ ಆನಂದ ಅವರ ಸೇವಾರ್ಥಕವಾಗಿ ಪ್ರದರ್ಶನಗೊಂಡಿತು.
ಡಿ. 30ರಂದು ಬೆಳಗ್ಗೆ ದೇವರಿಗೆ ಮಂಗಳಯಾಗ, ಸಂಪ್ರೋಕ್ಷಣೆ, ಮಹಾಮಂಗಳಾರತಿ ನಡೆಯಿತು. ಯಕ್ಷಗಾನ ಹಿರಿಯ ಕಲಾವಿದ ಪ್ರಕಾಶ್ ಪಣಿಯೂರು ಮೀರಾರೋಡ್, ಸಂಸ್ಥೆಯ ಉಪಾಧ್ಯಕ್ಷ ಚಂದ್ರ ಮೋಹನ್ ಅಮೀನ್, ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ್ ಕೆ. ಕೋಟ್ಯಾನ್, ಕೋಶಾಧಿಕಾರಿ ಸುಕುಮಾರ್ ಎಂ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ಲಕ್ಷ್ಮೀ ಎಸ್. ಸುವರ್ಣ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸದಸ್ಯ ಬಾಂಧವರ ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು. ಸಂತೋಷ್ ಗುರುಸ್ವಾಮಿ ಮತ್ತು ಶಿಬಿರದ ಸ್ವಾಮಿಗಳು, ಪದಾಧಿಕಾರಿಗಳು, ಮಹಿಳಾ ವಿಭಾಗದ ಸದಸ್ಯೆಯರು, ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಬಾಬಾ ಪ್ರಸಾದ್ ಅರಸ ಕುತ್ಯಾರು ಕಾರ್ಯಕ್ರಮ ನಿರ್ವಹಿಸಿದರು. ಗೌರವ ಕಾರ್ಯದರ್ಶಿ ಅಶೋಕ್ ಕೆ. ಕೋಟ್ಯಾನ್ ವಂದಿಸಿದರು.