Advertisement

ಬಾಲಿವುಡ್‌ನ‌ಲ್ಲಿ ಭಾವನಾ ಲಹರಿ 

12:30 AM Jan 13, 2019 | |

ಕನ್ನಡ ಚಿತ್ರರಂಗದ ಕಲಾವಿದರು ಪರಭಾಷೆಯ ಚಿತ್ರಗಳಲ್ಲಿ ಅಭಿನಯಿಸುವುದು, ಅಲ್ಲಿನ ಕಲಾವಿದರು ಇಲ್ಲಿ ಬಂದು ಅಭಿನಯಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ರೂಢಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ಪರಭಾಷಾ ಕಲಾವಿದರು ಕನ್ನಡದಲ್ಲಿ ಮಿಂಚಿದಷ್ಟು, ಕನ್ನಡ ಕಲಾವಿದರು ಪರಭಾಷೆಗಳಲ್ಲಿ ಮಿಂಚುತ್ತಿಲ್ಲ ಎಂಬುದು ಚಿತ್ರೋದ್ಯಮದ ಮಂದಿ ಒಪ್ಪಿಕೊಳ್ಳುವ ಸತ್ಯ. ಕನ್ನಡದ ಕೆಲವು ನಾಯಕಿಯರು ಆಗಾಗ್ಗೆ ಬಾಲಿವುಡ್‌ ಕದ ತಟ್ಟುತ್ತಿದ್ದರೂ, ಯಾರೂ ಕೂಡ ಗುರುತಿಸಿ ಕೊಳ್ಳುವ ಮಟ್ಟಿಗೆ ಬಾಲಿವುಡ್‌ನ‌ಲ್ಲಿ ನೆಲೆ ನಿಲ್ಲಲಿಲ್ಲ. ಈಗ ಕನ್ನಡದ ಮತ್ತೂಬ್ಬ ನಟಿ ಬಾಲಿವುಡ್‌ ಅಂಗಳಕ್ಕೆ ಅಡಿ ಯಿಡಲು ಸಿದ್ಧತೆ ಮಾಡಿ ಕೊಳ್ಳುತ್ತಿದ್ದಾರೆ. ಅವರೇ ಭಾವನಾ ರಾವ್‌.

Advertisement

ಹೌದು, ಗಾಳಿಪಟ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಭಾವನಾ ರಾವ್‌, ಮೊದಲ ಚಿತ್ರದಲ್ಲೇ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದರು. ಗಾಳಿಪಟ ಚಿತ್ರ ಸೂಪರ್‌ ಹಿಟ್‌ ಸಕ್ಸಸ್‌ ಬಳಿಕ, ವಾರೆವ್ಹಾ, ಹಾಲಿಡೇಸ್‌ ಹಾಗೂ ಗಗನಚುಕ್ಕಿ ಸೇರಿದಂತೆ ಹಲವು ಚಿತ್ರಗಳಲ್ಲಿ ಭಾವನಾ ಅಭಿನಯಿಸಿದರೂ, ಆ ಚಿತ್ರಗಳು ಅಷ್ಟಾಗಿ ಗೆಲ್ಲಲಿಲ್ಲ. ಇದರ ನಡುವೆಯೇ ತಮಿಳಿನಲ್ಲೂ ಪದಂ ಪರ್ತು ಕದೈ ಸೊಳ್ಳು, ವೆನಿಗಲ… ಸೇರಿದಂತೆ ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದರು. ಬಳಿಕ ತೆಲುಗಿನಲ್ಲಿ ಶಿಖಾ ಚಿತ್ರದಲ್ಲಿ ಅಭಿನಯಿಸಿದರು. ಇದರ ನಡುವೆಯೇ ಮಾಡೆಲಿಂಗ್‌ ಕ್ಷೇತ್ರದಲ್ಲೂ ಭಾವನಾ ಸಕ್ರಿಯವಾಗಿದ್ದರು. ಇವೆಲ್ಲದರ ನಡುವೆ ಕಳೆದ ಮೂರು ವರ್ಷಗಳಿಂದ ಬಾಲಿವುಡ್‌ಗೆ ಕಾಲಿಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಭಾವನಾ ರಾವ್‌, ಅಂತೂ ಈ ವರ್ಷ ಹಿಂದಿ ಚಿತ್ರದಲ್ಲಿ ಮಿಂಚುವ ಸುಳಿವನ್ನು ನೀಡಿದ್ದಾರೆ. 

ಭಾವನಾ ರಾವ್‌ ಅವರೇ ಹೇಳಿರುವ ಸದ್ಯದ ಸುದ್ದಿ ಏನೆಂದರೆ, ಬೈ ಪಾಸ್‌ ರೋಡ್‌ ಎಂಬ ಹೆಸರಿನ ಹಿಂದಿ ಚಿತ್ರದಲ್ಲಿ ಭಾವನಾ, ನಾಯಕ ನೀಲ್‌ ನಿತಿನ್‌ ಮುಖೇಶ್‌ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರಂತೆ. ಚಿತ್ರದಲ್ಲಿ ಸೋನಿಯಾ ಎಂಬ ಐಶಾರಾಮಿ ಮಹಿಳೆಯ ಪಾತ್ರದಲ್ಲಿ, ಬೋಲ್ಡ… ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಹಾಟ್‌ ಫೋಟೋಶೂಟ್‌ ಕೂಡ ಮಾಡಿಸಿದ್ದಾರೆ.

ಈ ಬಗ್ಗೆ ಮಾತನಾಡುವ ಭಾವನಾ ರಾವ್‌, “ಒಮ್ಮೆ ನಿರ್ದೇಶಕ ನಮನ್‌ ನಿತೀಶ್‌ ಆಡಿಷನ್‌ಗೆ ಬಂದು ಹೋಗುವಂತೆ ಹೇಳಿದ್ದರು. ಅಂತೆಯೇ ಮುಂಬೈಗೂ ಹೋಗಿ ಆಡಿಷನ್‌ ಮುಗಿಸಿಕೊಂಡು ಬಂದಿದ್ದೆ. ಆನಂತರ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಬಂತು. ಮತ್ತೆ ಮುಂಬೈಗೆ ಹೋಗಿ, ನನ್ನ ಪಾತ್ರದ ಬಗ್ಗೆ ಕೇಳಿದೆ. ಫ್ಯಾಷನ್‌ ಕಂಪೆನಿಯಲ್ಲಿ ಕೆಲಸ ಮಾಡುವ ಹುಡುಗಿ. ತುಂಬಾ ಮಾಡರ್ನ್. ಹಾಗೆಯೇ ಅದಕ್ಕೆ ಸ್ವಲ್ಪ ಗ್ರೇ ಶೇಡ್‌ ಕೂಡ ಇದೆ. ಇಂಟರೆಸ್ಟಿಂಗ್‌ ಅಂತೆನಿಸಿತು. ನಿರ್ದೇಶಕರು ಪಾತ್ರದ ವಿವರಣೆ ಹೇಳುತ್ತಿದ್ದಂತೆ ಓಕೆ ಅಂದೆ. ಆ ಪ್ರಕಾರ ಈಗ ಎರಡು ದಿನಗಳ ಕಾಲದ ಚಿತ್ರೀಕರಣದಲ್ಲೂ ಭಾಗವಹಿಸಿ ಬಂದಿದ್ದೇನೆ. ಎರಡನೆಯ ಹಂತದ ಚಿತ್ರೀಕರಣ ಜನವರಿ 20ರಿಂದ ಶುರುವಾಗಲಿದೆ’ ಎನ್ನುತ್ತಾರೆ. 

ಅಂದ ಹಾಗೆ, ಬೈ ಪಾಸ್‌ ರೋಡ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾವಾಗಿದ್ದು, ಇದರಲ್ಲಿ ನೀಲ್‌ ನಿತೀಶ್‌ ಮುಕೇಶ್‌, ಭಾವನಾ ರಾವ್‌ ಅವರೊಂದಿಗೆ ರಜತ್‌ ಕಪೂರ್‌, ಆದಾ ಶರ್ಮ ಮೊದಲಾದ ತಾರೆಯರ ದೊಡ್ಡ ತಾರಾಗಣವಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next