Advertisement

“ಭಜನೆಯಿಂದ ಜೀವನ ಪಾವನ’

05:16 PM Apr 20, 2019 | Sriram |

ಪಡುಬಿದ್ರಿ: ನಮ್ಮನ್ನು ನಾವು ಭಜನೆಯಲ್ಲಿ ತೊಡಗಿಸಿ ಕೊಂಡಾಗ ಭಗವಂತನ ಕೃಪೆ ನಮ್ಮ ಮೇಲಾಗುವುದು. ಅದರಿಂದ ನಮ್ಮ ಜೀವನ ಪಾವನವಾಗುವುದು ಎಂದು ಉಡುಪಿ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದ್ದಾರೆ.

Advertisement

ಅವರು ರಾಮ ನವಮಿ ಸಂದರ್ಭ ಎರ್ಮಾಳು ತೆಂಕ ರಾಮ ಮಂದಿರದ ಎದುರು ಭಾಗದಲ್ಲಿ ಹೊದೆಸ ಲಾದ ಇಂಟರ್‌ಲಾಕ್‌ ಜೋಡಣೆ ಉದ್ಘಾಟಿಸಿ ಮಾತನಾಡಿದರು.ಇದನ್ನು ಸೇವಾರೂಪದಲ್ಲಿ ದಿ| ಪುಚ್ಚೊಟ್ಟು ಬೀಡು ಸಂಕಪ್ಪ ಶೆಟ್ಟಿ ಮಕ್ಕಳು ಸುಮಾರು 3.5 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಿಕೊಟ್ಟ ಅವರ ಮಕ್ಕಳನ್ನು ಸ್ವಾಮೀಜಿ ಸಮ್ಮಾನಿಸಿದರು.

ಪುರೋಹಿತ ರಾಘವೇಂದ್ರ ತಂತ್ರಿಗಳು ಸಂದಭೋìಚಿತವಾಗಿ ಮಾತನಾಡಿದರು.ಭಜನಾ ಮಂಡಳಿ ಅಧ್ಯಕ್ಷ ಶ್ರೀಧರ ಬಂಗೇರ, ಮಹಿಳಾ ಮಂಡಳಿ ಅಧ್ಯಕ್ಷೆ ಸೀತಾ ವಿ. ಸುವರ್ಣ, ಅಪ್ಪಿ ಎಸ್‌. ಸಾಲ್ಯಾನ್‌, ಲಿಂಗಪ್ಪ ಪುತ್ರನ್‌, ಲೀಲಾಧರ ಕಾಂಚನ್‌, ಮಧುಕರ್‌ ಪುತ್ರನ್‌, ಮನೋಜ್‌ ಬಂಗೇರ, ಮತ್ತು ಮುಂಬಯಿ ಪ್ರತಿನಿಧಿಗಳಾದ ಜಗನ್ನಾಥ ಸುವರ್ಣ, ಕಮಲಾಕರ ಕುಂದರ್‌, ಪಿ. ಆರ್‌. ಸಾಲ್ಯಾನ್‌ ಮತ್ತಿತರರು ಉಪಸ್ಥಿತರಿದ್ದರು.

ತೆಂಕ ಮೊಗವೀರಸಭಾ ಅಧ್ಯಕ್ಷ ವೈ. ದಾಮೋದರ ಸುವರ್ಣ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಮಂದಿರ ಸಮಿತಿ ಅಧ್ಯಕ್ಷ ವೈ. ಮಾಧವ ಸುವರ್ಣ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next