Advertisement

ಮತ್ತೆ ಜೋಗ್‌ ಫಾಲ್ಸ್‌ನಲ್ಲಿ ಭಟ್ರು-ಗಣೇಶ್‌

10:28 AM Jul 12, 2017 | Team Udayavani |

ಸುಮಾರು 11 ವರ್ಷಗಳ ಹಿಂದೆ ಗಣೇಶ್‌ ಅಭಿನಯದಲ್ಲಿ ಯೋಗರಾಜ್‌ ಭಟ್‌ ಅವರು “ಮುಂಗಾರು ಮಳೆ’ ಎಂಬ ಚಿತ್ರ ನಿರ್ದೇಶಿಸಿದ್ದು, ಆ ಚಿತ್ರದಲ್ಲಿ ಜೋಗ್‌ ಫಾಲ್ಸ್‌ನ ವಿಭಿನ್ನವಾಗಿ ತೋರಿಸಿದ್ದು, ಚಿತ್ರ ಸೂಪರ್‌ ಹಿಟ್‌ ಆಗಿದ್ದು … ಎಲ್ಲವೂ ಗೊತ್ತಿದ್ದೇ. ಈಗ ಮತ್ತೆ ಯೋಗರಾಜ್‌ ಭಟ್‌ ಮತ್ತು ಗಣೇಶ್‌ ಇಬ್ಬರೂ ಜೋಗ್‌ ಫಾಲ್ಸ್‌ ಕಡೆಗೆ ಹೋಗಿ ಬಂದ್ದಿದಾರೆ.

Advertisement

ಹೌದು, ಸೋಮವಾರ ಅವರಿಬ್ಬರೂ “ಮುಗುಳು ನಗೆ’ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡುವುದಕ್ಕೆ ಹುಬ್ಬಳ್ಳಿಗೆ ಹೋಗಿದ್ದರು. ಅಲ್ಲಿಂದ ವಾಪಸ್ಸು ಬರುವ ಸಂದರ್ಭದಲ್ಲಿ ಇಬ್ಬರೂ ಶಿರಸಿ, ಸಿದ್ಧಾಪುರ ಮಾರ್ಗವಾಗಿ ಜೋಗ್‌ ಫಾಲ್ಸ್‌ಗೆ ಹೋಗಿದ್ದಾರೆ. ಅಲ್ಲಿ ಬಂಡೆಯ ಮೇಲೆ ಕುಳಿತು, “ಮುಂಗಾರು ಮಳೆ’ ಚಿತ್ರದ ಕುರಿತು ಮೆಲುಕು ಹಾಕಿದ್ದಾರೆ.

ಅಷ್ಟೇ ಅಲ್ಲ, ಚಿತ್ರೀಕರಣ ನಡೆದ ಸ್ಥಳಗಳಿಗೆ ಭೇಟಿ ಕೊಟ್ಟು ಅಲ್ಲಿ ಸೆಲ್ಫಿ ತೆಗೆಸಿಕೊಂಡಿದ್ದಾರೆ. “ಇರೋದ್ರೊಳಗೆ ನೋಡಬೇಕು ಜೋಗಾದ್‌ ಗುಂಡಿ …’ ಎಂದು ಹಾಡುತ್ತಾ ವಾಪಸ್ಸು ಬಂದಿದ್ದಾರೆ. ಅಂದಹಾಗೆ, “ಮುಗುಳು ನಗೆ’ ಚಿತ್ರದ ಎರಡನೆಯ ಹಾಡು ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next