Advertisement

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

07:38 PM May 17, 2024 | Team Udayavani |

ಭಟ್ಕಳ: ತಾಲೂಕಿನ ಕಡವಿನಕಟ್ಟೆ ಸಮೀಪ ಕಂಡೆಕೊಡ್ಲು ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ ಪಟ್ಟ ದುರ್ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ. ಮೃತ ದುರ್ದೈವಿಗಳನ್ನು ಕಂಡೆಕೊಡ್ಲು ಗ್ರಾಮದವರಾದ ಪಾರ್ವತಿ ಶಂಕರ ನಾಯ್ಕ (35) ಹಾಗೂ ಸೂರಜ್ ಪಾಂಡು ನಾಯ್ಕ(17)ಎಂದು ಗುರುತಿಸಲಾಗಿದೆ.

Advertisement

ಕಂಡೆಕೊಡ್ಲುವಿನ ಐವರು ಕಡವಿನಕಟ್ಟೆ ಡ್ಯಾಂ ಕೆಳಭಾಗದಲ್ಲಿ ರೈಲ್ವೇ ಸೇತುವೆಯ ಬಳಿಯಲ್ಲಿನ ನೀರಿನಲ್ಲಿ ಈಜಲು ತೆರಳಿದ್ದರು. ಈ ಸಂದರ್ಭದಲ್ಲಿ ಈಜುತ್ತಿದ್ದ ಸೂರಜ್ ಪಾಂಡು ನಾಯ್ಕ ನೀರಿನಲ್ಲಿ ಆಯತಪ್ಪಿ ಮುಳುಗಲು ಪ್ರಾರಂಭಿಸಿದ್ದನ್ನು ಕಂಡ ದಡದಲ್ಲಿದ್ದ ಪಾರ್ವತಿ ಶಂಕರ ನಾಯ್ಕ ಆತನನ್ನು ರಕ್ಷಿಸಲು ಮುಂದಾದರು. ದುರಾದೃಷ್ಟವಶಾತ್ ಆತನನ್ನು ರಕ್ಷಿಸಲು ಸಾಧ್ಯವಾಗದೆ ಆಕೆಯೂ ಕೂಡಾ ನೀರಿನಲ್ಲಿ ಮುಳುಗಿ ಮೃತ ಪಟ್ಟರು ಎನ್ನಲಾಗಿದೆ.

ಸರಕಾರಿ ಆಸ್ಪತ್ರೆಗೆ ಮೃತ ದೇಹ
ಘಟನೆ ನಡೆದ ತತ್ ಕ್ಷಣ ಊರಿನವರೆಲ್ಲರೂ ಒಟ್ಟಾಗಿ ನೀರಿನಲ್ಲಿ ಮುಳುಗಿದ್ದ ಇಬ್ಬರನ್ನೂ ಮೇಲಕ್ಕೆತ್ತಿದರಾದರೂ ಅದಾಗಲೇ ಅವರು ಮೃತ ಪಟ್ಟಿದ್ದರು ಎನ್ನಲಾಗಿದೆ. ಮೃತ ದೇಹವನ್ನು ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.

ಶ್ಮಶಾನ ಮೌನ

ಕಂಡೆಕೊಡ್ಲು ಗ್ರಾಮ ಅತಿ ಚಿಕ್ಕ ಗ್ರಾಮವಾಗಿದ್ದು ಕೆಲವೇ ಕೆಲವು ಮನೆಗಳಿವೆ. ಈ ಗ್ರಾಮದಲ್ಲಿ ಇಬ್ಬರು ಸಾವನ್ನಪ್ಪಿರುವುದು ಗ್ರಾಮಸ್ಥರಿಗೆ ನುಂಗಲಾರದ ತುತ್ತಾಗಿದೆ. ಇಡೀ ಗ್ರಾಮಕ್ಕೆ ಗ್ರಾಮವೇ ಇಬ್ಬರ ಸಾವಿಗೆ ಮರುಗುತ್ತಿದೆ. ನೂರಾರು ಜನರು ಆಸ್ಪತ್ರೆಯ ಆವರಣಕ್ಕೆ ಆಗಮಿಸಿ ಮೃತರನ್ನು ನೋಡಿ ಬೇಸರ ವ್ಯಕ್ತಪಡಿಸುತ್ತಿದ್ದರೆ ಇನ್ನೂ ಕೆಲವರ ಕಣ್ಣು ಅವರಿಗೆ ಅರಿವಿಲ್ಲದೇ ತೇವವಾಗುತ್ತಿರುವುದು ಸಾಮಾನ್ಯವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next