ಭಟ್ಕಳ: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುವ ಉದ್ದೇಶದಿಂದ ಮಾಂಸವನ್ನು ತುಂಬಿಕೊಂಡು ಕಾರಿನಲ್ಲಿ ಹೋಗುತ್ತಿದ್ದವರನ್ನು,ವಾಹನ ಸಹಿತ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡ ಘಟನೆ ತಾಲೂಕಿನ ಶಿರಾಲಿ ಚೆಕ್ ಪೋಸ್ಟ್ ಬಳಿ ನಡೆದಿದೆ.
ಗೋವನ್ನು ಎಲ್ಲಿಯೋ ವಧೆ ಮಾಡಿ 350 ಕೆ.ಜಿ. ತೂಕದ ಸುಮಾರು 70 ಸಾವಿರ ರೂಪಾಯಿ ಮೌಲ್ಯದ ಗೋಮಾಂಸವನ್ನು ತುಂಬಿಕೊಂಡು ಬರುತ್ತಿದ್ದ ಕಾರಿನಲ್ಲಿದ್ದ ಕೋಕ್ತಿ ನಗರದ ಮೊಹಿದ್ದೀನ್ ರಾಶೀದ್ (28) ಎನ್ನುವನನ್ನು ವಶಕ್ಕೆ ಪಡೆದುಕೊಂಡಿದ್ದು, ಇನ್ನಿಬ್ಬರು ಆರೋಪಿಗಳಾದ ಮಗ್ದಂ ಕಾಲೋನಿಯ ಹಸನ್ ಶಬ್ಬರ್, ಮೂಸಾ ನಗರದ ಮುಝಾಫರ್ ಪರಾರಿಯಾಗಿದ್ದು ಅವರ ಮೇಲೆ ಪ್ರಕರಣ ದಾಖಲಲಾಗಿದೆ.
ಕಾರ್ಯಾಚರಣೆಯನ್ನು ಎಸ್.ಪಿ. ಸುಮನ್ ಪೆನ್ನೇಕರ್, ಹೆಚ್ಚುವರಿ ಎಸ್.ಪಿ. ಬದರೀನಾಥ, ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ, ಗ್ರಾಮೀಣ ಸರ್ಕಲ್ ಇನ್ಸಪೆಕ್ಟರ್ ಮಹಾಬಲೇಶ್ವರ ನಾಯ್ಕ ಮಾರ್ಗದರ್ಶನದಲ್ಲಿ ಸಬ್ ಇನ್ಸಪೆಕ್ಟರ್ ಭರತ್ ಕುಮಾರ್, ಸಿಬ್ಬಂದಿಗಳಾದ ಎಎಸ್ಐ ದಿನೇಶ ದಾತೇಕರ್, ದೀಪಕ್ ಎಸ್. ನಾಯ್ಕ, ರಾಜು ಎಫ್. ಗೌಡ, ನಾರಾಯಣ ಗೌಡ, ಸದಾಶಿವ ಕಟ್ಟಿಮನೆ ಮುಂತಾದವರು ಪಾಲ್ಗೊಂಡಿದ್ದರು.
ಗುರುವಾರವಷ್ಟೇ ಐಶಾರಾಮಿ ಕಾರಿನಲ್ಲಿ 400 ಕೆ.ಜಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ಮತ್ತೊಂದು ಪ್ರಕರಣ ಶಿರಾಲಿಯ ಚೆಕ್ ಪೋಸ್ಟ್ ಬಳಿಯೇ ನಡೆದಿದೆ.