Advertisement
ಇತ್ತೀಚೆಗೆ ಸರಕಾರದ ಆದೇಶದಂತೆ ಪಟಾಕಿ ಅಂಗಡಿಗಳನ್ನು ಹಾಕಲು ಹಲವಾರು ನಿಬಂಧನೆಗಳನ್ನು ವಿಧಿಸಿದ್ದು ಅಲ್ಲದೇ ಮಾರಾಟ ಮಡುವ ಪಟಾಕಿಗಳಲ್ಲೂ ಕೂಡಾ ಅನೇಕ ರೀತಿಯ ನಿಯಂತ್ರಣ ಹೇರಿತ್ತು. ಅದರಂತೆ ದೀಪಾವಳಿಗೆ ಪಟಾಕಿ ಮಾರಾಟ ಮಾಡುವವರು ತಾಲೂಕಾ ಆಡಳಿತದಿಂದ ಕಡ್ಡಾಯವಾಗಿ ಪರವಾನಿಗೆಯನ್ನು ಪಡೆದು ಪಟಾಕಿ ಅಂಗಡಿಗಳನ್ನು ಹಾಕಬೇಕಾಗಿದ್ದು ಅರ್ಜಿ ಸಲ್ಲಿಸಿದವರಲ್ಲಿ ಓರ್ವರಿಗೆ ಮಾತ್ರ ಪಟಾಕಿ ಮಾರಾಟ ಮಾಡಲು ಪರವಾನಿಗೆಯನ್ನು ನೀಡಲಾಗಿತ್ತು. ಶನಿವಾರ ಪಟಾಕಿ ಅಂಗಡಿಯಲ್ಲಿ ಒಂದೇ ಸಮನೆ ನೂಕು ನುಗ್ಗಲಾಗಿದ್ದು ಮಾರಾಟಕ್ಕೆ ತಂದಿದ್ದ ಎಲ್ಲಾ ಪಟಾಕಿಗಳೂ ಖಾಲಿಯಾಗಿ ಪಟಾಕಿ ಖರೀದಿಸಲು ಬಂದಿದ್ದ ಜನರು ನಿರಾಸೆಯಿಂದ ವಾಪಾಸು ಹೋಗುವಂತಾಯಿತು. ಹಲವರು ತಮ್ಮ ಇಷ್ಟದ ಪಟಾಕಿಗಳನ್ನು ಕೊಂಡು ಹೋಗಿ ದೀಪಾವಳಿಯಂದು ಪಟಾಕಿ ಹಚ್ಚಲು ಯೋಚಿಸಿದ್ದರೆ, ಪಟಾಕಿಯೇ ಸಿಗದೇ ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿರುವುದು ಕಂಡು ಬಂತು.
-ಭವಾನಿಶಂಕರ ನಾಯ್ಕ.