Advertisement

Bhatkal; ಯತಿ ನರಸಿಂಹಾನಂದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

08:25 PM Oct 14, 2024 | Team Udayavani |

ಭಟ್ಕಳ: ಪ್ರವಾದಿ ಮೊಹ್ಮದ್ ಪೈಗಂಬರರನ್ನು ಸ್ವಾಮೀ ನರಸಿಂಹಾನಂದ ಅವರು ಅವಹೇಳನ ಮಾಡಿದ್ದಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಇಲ್ಲಿನ ಮಜ್ಲಿಸೆ ಇಸ್ಲಾಹ-ವ-ತಂಝೀಮ್ ಸಂಸ್ಥೆಯ ನೇತೃತ್ವದಲ್ಲಿ ಸೋಮವಾರ ಸಂಜೆ ತಾಲೂಕು ಆಡಳಿತ ಸೌಧದ ಎದುರು ಬೃಹತ್ ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರ ಮೂಲಕ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಿದರು.

Advertisement

ಮನವಿಯಲ್ಲಿ ಸ್ವಾಮೀ ನರಸಿಂಹಾನಂದ ಅವರು ಮುಸ್ಲಿಮರು ಮತ್ತು ಪ್ರವಾದಿ ಮೊಹ್ಮದ್ ಪೈಗಂಬರರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿದ್ದಾರೆ. ಮುಸ್ಲಿಮರ ಬಗ್ಗೆ ಇವರು ಈ ಹಿಂದೆ ಕೂಡಾ ಅನೇಕ ಸಂದರ್ಭಗಳಲ್ಲಿ ದ್ವೇಷ ಭಾಷಣ ಮಾಡಿದ್ದು ಸಮುದಾಯವನ್ನು ಕೆಣಕುವ ಹಾಗೂ ಆ ಮೂಲಕ ಗಲಭೆ ಸೃಷ್ಟಿಸುವ ಹುನ್ನಾರ ಮಾಡಿದ್ದಾರೆ. ಬೇರೆ ಬೇರೆ ಸಮುದಾಯದವರಲ್ಲಿ ದ್ವೇಷ ಹುಟ್ಟುವಂತೆ ಮಾತುಗಳನ್ನಾಡುವ ಹಾಗೂ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಹುನ್ನಾರ ಇವರದ್ದಾಗಿದೆ. ನರಸಿಂಹಾನಂದ ಅವರು ಹಲವು ಬಾರಿ ಮುಸ್ಲಿಮರ ಬಗ್ಗೆ ಇಲ್ಲಸಲ್ಲದ ಭಾಷಣ ಮಾಡಿ ಸಮುದಾಯದವರಿಗೆ ನೋವನ್ನುಂಟು ಮಾಡಿದ್ದಾರೆ. ಪ್ರವಾದಿ ಮೊಹ್ಮದ ಪೈಗಂಬರರ ಬಗ್ಗೆ ತಮ್ಮ ಅವಹೇಳನಕಾರಿ ಭಾಷಣವನ್ನು ಮುಂದುವರಿಸಿರುವುದು ತೀರಾ ಖಂಡನೀಯ. ಪ್ರವಾದಿ ಮತ್ತು ಮುಸ್ಲಿಮರ ವಿರುದ್ದ ಪದೇ ಪದೇ ಅವಹೇಳನಕಾರಿ ಮಾತುಗಳನ್ನಾಡುತ್ತಿರುವ ಸ್ವಾಮಿ ನರಸಿಂಹಾನಂದರನ್ನು ತತ್ ಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಅವ ಮಾತನಾಡಿ ‘ಪ್ರವಾಸಿ ಮೊಹ್ಮದ್ ಪೈಗಂಬರರ ವಿರುದ್ದ ಅವಹೇಳನಕಾರಿ ಭಾಷಣ ಯಾರೇ ಮಾಡಿದರೂ ಸಹಿಸಲು ಸಾಧ್ಯವಿಲ್ಲ. ಅವಹೇಳನಕಾರಿ ಭಾಷಣದಿಂದ ಮುಸ್ಲೀಮ ಸಮುದಾಯಕ್ಕೆ ನೋವಾಗಿದೆ. ಪ್ರವಾದಿ ಮತ್ತು ಮುಸ್ಲಿಮರ ಬಗ್ಗೆ ಪದೇ ಪದೇ ಅವಹೇಳನಕಾರಿ ಹೇಳಿಕೆ ಕೇಳಿ ಬರುತ್ತಿದೆ. ಸಮಾಜದ ಶಾಂತಿ ಕದಡುವ ಇಂತಹವರ ಮೇಲೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಂಝೀಮ್ ನ ಇಮ್ರಾನ್ ಲಂಕಾ ಮತ್ತಿತರು ಮಾತನಾಡಿದರು. ಸಹಾಯಕ ಆಯುಕ್ತೆ ಡಾ.ನಯನಾ ಎನ್., ಅವರು ಮನವಿ ಸ್ವೀಕರಿಸಿ ಸರಕಾರಕ್ಕೆ ಕಳುಹಿಸುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ತಂಝೀಮ್ ಪದಾಧಿಕಾರಿಗಳು, ವಿವಿಧ ಮುಸ್ಲಿಂ ಸಂಘಟನೆಗಳ ಪ್ರಮುಖರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು. ಮನವಿಯ ಪ್ರತಿಯನ್ನು ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ, ಮುಖ್ಯ ಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ಕಳುಹಿಸಲಾಗಿದೆ.

Advertisement

ಪೊಲೀಸ್ ದೂರು ದಾಖಲು
ಯುಎಪಿಎ ಮತ್ತು ಎನ್.ಎಸ್.ಎ ಕಾಯ್ದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿ ಭಟ್ಕಳದ ನಗರ ಠಾಣೆಯಲ್ಲಿ ದೂರೊಂದನ್ನು ದಾಖಲು ಮಾಡಲಾಗಿದೆ. ತಂಝೀಮ್ ಸಂಸ್ಥೆಯ ನೇತೃತ್ವದಲ್ಲಿ ಭಟ್ಕಳದ ವಿವಿಧ ಸಂಘಸಂಸ್ಥೆಗಳ ಮುಖಂಡರ ನಿಯೋಗವೊಂದು ಸೋಮವಾರ ಭಟ್ಕಳ ನಗರ ಠಾಣೆಗೆ ಭೇಟಿ ನೀಡಿ ಯತಿ ನರಸಿಂಹನಂದಾ ಸ್ವಾಮಿಯ ವಿರುದ್ಧ ಡಿ.ವೈ.ಎಸ್.ಪಿ. ಮಹೇಶ ಅವರಲ್ಲಿ ದೂರು ನೀಡಿದ್ದಾರೆ.

ಈ ಸಂದರ್ಭದಲ್ಲಿ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ, ಹಾಗೂ ವಿವಿಧ ಜಮಾಅತ್‌ನ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next