Advertisement
ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಕೆಯಾಗದ ಕಾರಣ ಪ್ರಕರಣದ ಚಾರ್ಜ್ ನಡೆಯಲಿಲ್ಲ. ಹಾಗಾಗಿ ಮುಂದಿನ ವಿಚಾರಣಾ ಪ್ರಕ್ರಿಯೆಯ ದಿನಾಂಕವನ್ನು ಅ. 23ಕ್ಕೆ ನ್ಯಾಯಾಧೀಶರು ನಿಗದಿಪಡಿಸಿದರು.
ರಾಜೇಶ್ವರಿ, ನಿರಂಜನ ಮತ್ತು ನವನೀತ್ ಅವರನ್ನು ಮಂಗಳೂರು ಜೈಲಿನಿಂದ ಕರೆದುಕೊಂಡು ಬರಲಾಗಿತ್ತು. ಪೊಲೀಸ್ ಎಸ್ಕಾರ್ಟ್ ವಾಹನದ ಬದಲಾಗಿ ಖಾಸಗಿ ಹವಾನಿಯಂತ್ರಿತ ಕಾರಿನಲ್ಲಿ ಆರೋಪಿಗಳನ್ನು ಕೋರ್ಟ್‌ಗೆ ಕರೆದುಕೊಂಡು ಬರಲಾಗಿತ್ತು. ಇದು ಚರ್ಚೆಗೆ ಗ್ರಾಸವಾಯ್ತು.ಎಸ್ಕಾರ್ಟ್ ಲಭ್ಯವಿಲ್ಲದ ಸಂದರ್ಭ ಖಾಸಗಿ ವಾಹನದಲ್ಲಿ ಕರೆದೊಯ್ಯಲು ಕಾನೂನಿನಲ್ಲಿ ಅಡ್ಡಿ ಇಲ್ಲ ಎಂದು ನ್ಯಾಯವಾದಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಹಣವಂತರಾದರೆ ಅವರಿಗೆ ಎಸಿ ಕಾರಿನ ರಾಜ ಮರ್ಯಾದೆಯನ್ನು ಪೊಲೀಸರು ಕೊಡುವುದು ವಾಡಿಕೆಯಾಗಿಬಿಟ್ಟಿದೆ ಎಂದು ಸಾಮಾನ್ಯ ಜನರು ಕೋರ್ಟ್ ಆವರಣದಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಮೂವರ ಅಮಾನತು: ಆರೋಪಿಗಳನ್ನು ಖಾಸಗಿ ಕಾರಿನಲ್ಲಿ ಕರೆದು ಕೊಂಡು ಬಂದ ಹಿನ್ನೆಲೆಯಲ್ಲಿ ಮೂವರು ಸಿಬಂದಿಯನ್ನು ಅಮಾನತು ಗೊಳಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು. ಸುಧಾಕರ್, ರೇಣುಕಾ ಹಾಗೂ ಸಲ್ಮಾನ್ ಖಾನ್ ಅಮಾನತುಗೊಂಡವರು.