Advertisement

ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ನಾಲ್ವರು ಸಾಕ್ಷಿಗಳ ವಿಚಾರಣೆ

11:47 AM Aug 14, 2018 | Team Udayavani |

ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಸಾಕ್ಷಿಗಳ ವಿಚಾರಣೆ ಆ.13ರಂದು ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯಿತು. 

Advertisement

ಬೆಂಗಳೂರಿನ ಕಾರಾಗೃಹದಲ್ಲಿರುವ ಆರೋಪಿಗಳಾದ ಮೃತ ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ ಶೆಟ್ಟಿ ಮತ್ತು ಜೋತಿಷಿ ನಿರಂಜನ್‌ ಭಟ್‌ನನ್ನು ವೀಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಲಾಯಿತು. 

ಪ್ರಕರಣದ ಸುಮಾರು 167 ಮಂದಿ ಸಾಕ್ಷಿಗಳ ಪೈಕಿ ಇದುವರೆಗೆ 15 ಸಾಕ್ಷಿಗಳ ವಿಚಾರಣೆ ನಡೆದಿದೆ. ಆ.14, 16 ಮತ್ತು 18ರಂದು ಇತರ  ಕೆಲವು ಸಾಕ್ಷಿಗಳ ವಿಚಾರಣೆ ಮುಂದುವರಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next