ನವ ದೆಹಲಿ : ಜನವರಿಯಲ್ಲಿ ಸಕ್ರಿಯ ಚಂದಾದಾರರು 3.3 ಮಿಲಿಯನ್ ಏರಿಕೆಯಾಗಿ 979 ಮಿಲಿಯನ್ ಗೆ ತಲುಪಿದೆ ಎಂದು ತೋರಿಸಿದೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI)ಯ ಇತ್ತೀಚಿನ ಚಂದಾದಾರರ ಡಾಟಾ ತಿಳಿಸಿದೆ.
ಟೆಲಿಕಾಂ ನೆಟ್ ವರ್ಕ್ ನ ದೈತ್ಯ ಭಾರ್ತಿ ಏರ್ ಟೆಲ್ ಲಿಮಿಟೆಡ್ ಗೆ 6.9 ಮಿಲಿಯನ್ ಸಕ್ರಿಯ ಚಂದಾದಾರರಾಗಿದ್ದಾರೆ ಎಂಬ ಮಾಹಿತಿ ದೊರಕಿದೆ , ಜನವರಿಯಲ್ಲಿ ಅದರ ಒಟ್ಟು 336 ಮಿಲಿಯನ್ ಗೆ ತಲುಪಿದೆ. ರಿಲಯನ್ಸ್ ಜಿಯೋನ ಸಕ್ರಿಯ ಚಂದಾದಾರರು 3.5 ಮಿಲಿಯನ್‌ನಿಂದ 325 ಮಿಲಿಯನ್ ಗೆ ಇಳಿದಿದೆ. ಏರ್ ಟೆಲ್ ಸಕ್ರಿಯ ಚಂದಾದಾರರ ವಿಷಯದಲ್ಲಿ ಇದು ವ್ಯಾಪಕ ಮುನ್ನಡೆಯಾಗಿದೆ ಎಂದು ಟೆಲಿಕಾಂ ರೆಗ್ಯುಲೆಟರಿ ಅಥಾರಟಿ ಆಫ್ ಇಂಡಿಯಾ ಮಾಹಿತಿ ನೀಡಿದೆ.
ಓದಿ : ಲಾಕ್ ಡೌನ್, ಕರ್ಫ್ಯೂ ಇರಲಿ… ಇನ್ನೂ ಕ್ವಾರಂಟೈನ್ ಯಾಕಿಲ್ಲ? ಮೂಲ ನಿಯಮವನ್ನೇ ಮರೆತ ಸರ್ಕಾರ
ಭಾರ್ತಿ ಏರ್ ಟೆಲ್ ಕಳೆದ ಆರು ತಿಂಗಳಿನಿಂದ ಚಂದಾದಾರರ ಸೇರ್ಪಡೆಯ ವೇಗವನ್ನು ಸಮಸ್ಥಿತಿಯಲ್ಲಿ ಸುಧಾರಿಸುತ್ತಿದೆ. “ಕಂಪನಿಯು ಮೇ 2020 ರಿಂದ ಒಟ್ಟು 29 ಮಿಲಿಯನ್ ಸಕ್ರಿಯ ಚಂದಾದಾರರನ್ನು ಪಡೆದುಕೊಂಡಿದೆ ದೇಶೀಯ ಬ್ರೋಕರೇಜ್ ಹೌಸ್ ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ವರದಿಯಲ್ಲಿ ತಿಳಿಸಿದೆ.
ಓದಿ : ಹಳೆ ವಾಹನಗಳು ಗುಜರಿಗೆ! ನೂತನ ಗುಜರಿ ನೀತಿ ಪ್ರಕಟಿಸಿದ ಸಚಿವ ನಿತಿನ್ ಗಡ್ಕರಿ