Advertisement

ಭರ್ಜರಿ ಪ್ರದರ್ಶನ

05:00 PM Nov 03, 2017 | Team Udayavani |

ಧ್ರುವ ಸರ್ಜಾ ಅವರ ನಿರೀಕ್ಷೆ “ಭರ್ಜರಿ’ಯಾಗಿಯೇ ಈಡೇರಿದೆ. ಅದು ತಮ್ಮ ಮೂರನೇ ಸಿನಿಮಾದಲ್ಲೂ “ಹ್ಯಾಟ್ರಿಕ್‌ ಗೆಲುವು’ ಸಾಧಿಸಬೇಕೆಂಬುದು. ಈಗ ಅದು ಈಡೇರಿದೆ. “ಭರ್ಜರಿ’ ಚಿತ್ರ 50 ದಿನಗಳನ್ನು ಪೂರೈಸಿದೆ. ಚಿತ್ರರಂಗದ ಸದ್ಯದ ಪರಿಸ್ಥಿತಿಯಲ್ಲಿ ಒಂದು ಚಿತ್ರ 25 ದಿನ ಓಡೋದು ಕಷ್ಟ ಎಂದಿರುವಾಗ “ಭರ್ಜರಿ’ ಚಿತ್ರ ತುಂಬಿದ ಪ್ರದರ್ಶನದ ಮೂಲಕ 50 ದಿನ ಪೂರೈಸಿರುವುದು ಚಿತ್ರತಂಡದ ಹಾಗೂ ಧ್ರುವ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. 

Advertisement

ಅಂದಹಾಗೆ, “ಭರ್ಜರಿ’ ಚಿತ್ರ ಬರೋಬ್ಬರಿ 71 ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿದೆ. ಮಲ್ಟಿಪ್ಲೆಕ್ಸ್‌ನ ಸ್ಕ್ರೀನ್‌ಗಳನ್ನೂ ಸೇರಿಸಿದರೆ 90ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರ 50 ದಿನ ಪೂರೈಸಿರುವುದು ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ. 50 ದಿನ ಪೂರೈಸಿದ ಚಿತ್ರ ಶತದಿನ ಆಚರಿಸುತ್ತಾ ಎಂದು ನೀವು ಕೇಳಿದರೆ ಖಂಡಿತಾ ಪೂರೈಸುತ್ತದೆ ಎಂಬ ಉತ್ತರ ಸಿಗುತ್ತದೆ. ಸುಮಾರು 12 ರಿಂದ 13 ಸೆಂಟರ್‌ಗಳಲ್ಲಿ “ಭರ್ಜರಿ’ 100 ದಿನ ಪೂರೈಸಲಿದೆ.

ಈಗ ಚಿತ್ರ 50 ದಿನ ಪೂರೈಸಿರುವ ಖುಷಿಯನ್ನು ಚಿತ್ರ ಭಾನುವಾರ ಕೆ.ಜಿ.ರಸ್ತೆಯ ನರ್ತಕಿ ಚಿತ್ರಮಂದಿರದಲ್ಲಿ ಸಂಭ್ರಮಿಸಲಿದೆ. ಅಂದು ಮಧ್ಯಾಹ್ನ ಚಿತ್ರಮಂದಿರಕ್ಕೆ ಭೇಟಿ ನೀಡಲಿರುವ ಚಿತ್ರತಂಡ ಅಂದು ಕೇಕ್‌ ಕತ್ತರಿಸುವ ಜೊತೆಗೆ ಧ್ರುವ ಸರ್ಜಾ ಅಭಿಮಾನಿಗಳು ರಕ್ತದಾನ ಶಿಬಿರ ಕೂಡಾ ಆಯೋಜಿಸಿದ್ದಾರೆ. ಅಂದಿನ ಸಂಭ್ರಮಕ್ಕೆ ಚಿತ್ರದಲ್ಲಿ ಕಾಣಿಸಿಕೊಂಡ ಕಲಾವಿದರೆಲ್ಲರೂ ಸಾಕ್ಷಿಯಾಗಲಿದ್ದಾರೆ.

ಅಂದಹಾಗೆ, “ಭರ್ಜರಿ’ ಚಿತ್ರದಲ್ಲಿ ರಚಿತಾ ರಾಮ್‌ ಹಾಗೂ ಹರಿಪ್ರಿಯಾ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರವನ್ನು ಕನಕಪುರ ಶ್ರೀನಿವಾಸ್‌ ನಿರ್ಮಿಸಿದ್ದಾರೆ. ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿ ರಂಗಾಯಣ ರಘು, ತಾರಾ, ಅವಿನಾಶ್‌, ಶ್ರೀನಿವಾಸಮೂರ್ತಿ, ಉದಯ್‌, ಸಾಧು ಕೋಕಿಲ ಮುಂತಾದವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next