Advertisement

‘ಭರ್ಜರಿ’Facebook Live:ಹುಬ್ಬಳ್ಳಿಯಲ್ಲಿ ಪ್ರಮುಖ ದೃಶ್ಯ ಲೀಕ್‌

03:20 PM Sep 15, 2017 | |

ಹುಬ್ಬಳ್ಳಿ : ಧ್ರುವಾ ಸರ್ಜಾ ಅಭಿನಯದ ‘ಭರ್ಜರಿ’ ಚಿತ್ರದ ಪ್ರಮುಖ ದೃಶ್ಯವನ್ನು ಪ್ರದರ್ಶನದ ಮೊದಲ ದಿನವೇ ಭೂಪನೊಬ್ಬ ಫೇಸ್‌ಬುಕ್‌ನಲ್ಲಿ  ಲೈವ್‌ ಮಾಡಿದ ಘಟನೆ ನಗರದ ಚಿತ್ರಮಂದಿರವೊಂದರಲ್ಲಿ ಶುಕ್ರವಾರ ನಡೆದಿದೆ.

Advertisement

ವರದಿಯಾದಂತೆ ಸಂತೋಷ್‌ ಜಕ್ಕರ್‌ಸಾನಿ ಎಂಬಾತ ಫೇಸ್‌ಬುಕ್‌ನಲ್ಲಿ ಚಿತ್ರದ ಪ್ರಮುಖ ದೃಶ್ಯವನ್ನು ಸುಮಾರು 12 ನಿಮಿಷಗಳ ಕಾಲ ಫೇಸ್‌ಬುಕ್‌ ಲೈವ್‌ ಮಾಡಿದ್ದು, ಆ ದೃಶ್ಯವನ್ನು ಸುಮಾರು 160 ಜನರು ವೀಕ್ಷಿಸಿದ್ದಾರೆ. 

ಲೈವ್‌ ಮಾಡಿರುವುದು ಕಂಡು ಬಂದ ತಕ್ಷಣ ಆತಂಕಗೊಂಡ ಚಿತ್ರತಂಡ ಫೇಸ್‌ಬುಕ್‌ ಕಚೇರಿಯನ್ನು ಸಂಪರ್ಕಿಸಿ ವಿಡಿಯೋವನ್ನು ಅಳಿಸಿ ಹಾಕುವಂತೆ ಮಾಡಿದೆ. 

ಭರ್ಜರಿ ಧ್ರುವಾ ಸರ್ಜಾ ಅಭಿನಯದ ಮೂರನೇ ಚಿತ್ರವಾಗಿದ್ದು ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next