Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತಂರಿಕ ಹೋರಾಟದಿಂದ ಭಾರತೀಯ ಜನತಾ ಪಕ್ಷ ತನ್ನ ದೌರ್ಬಲ್ಯ ತೊರಿಸಿಕೊಂಡಿದೆ. ಸರ್ವ ಸಮ್ಮತ ಇಲ್ಲದೆ ಭಿನ್ನಮತ ಸ್ಪೋಟಗೊಂಡಿದೆ. ವಿರೋಧ ಪಕ್ಷದ ನಾಯಕನ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ. ಯತ್ನಾಳ್ ಬಹಿರಂಗ ಅಸಮಾಧಾನ ತೊಂಡಿಕೊಂಡಿದ್ದಾರೆ. ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕನಿಲ್ಲ. 26 ಜನ ಬಿಜೆಪಿಯ ಸಂಸದರು ಇಲ್ಲಿಯವರೆಗೆ ಬರಗಾಲದ ಬಗ್ಗೆ ಮಾತಾಡಿಲ್ಲ. ಪ್ರಧಾನಿಗಳನ್ನು ಭೇಟಿ ಮಾಡಿ ಪರಿಹಾರ ಹಣ ತರುವುದನ್ನು ಮರೆತಿದ್ದಾರೆ. ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದು ಬಿಟ್ಟು ಪುಡಿ ರೌಡಿ ಮಣಿಕಂಠನ ವಿಷಯ ಇಟ್ಟುಕೊಂಡು ಅಧಿವೇಶನ ಬಾಯ್ಕಾಟ್ ಮಾಡುತ್ತಾರೆ. ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಮಾತನಾಡುವ ಯಾವ ನೈತಿಕತೆ ಬಿಜೆಪಿ ಇಟ್ಟುಕೊಂಡಿಲ್ಲ ಎಂದರು.
Related Articles
Advertisement
ಸಂಸದ ರಾಘವೇಂದ್ರ ಅವರಿಗೆ ಮಠಾಧೀಶರು ಸನ್ಮಾನ ಕಾರ್ಯಕ್ರಮ ವಿಚಾರಕ್ಕೆ ಮಾತನಾಡಿ, ಬಿಜೆಪಿಯ ಪ್ರಾಯೋಜಿತ ಮಠಾಧೀಶರಾಗಿ ಸನ್ಮಾನ ಮಾಡಿದ್ದಾರೋ ಗೊತ್ತಿಲ್ಲ. ಸಮಾಜದ ಯಾವ ಮುಖಂಡರಿಗೂ ಆಹ್ವಾನ ನೀಡಿಲ್ಲ. ರಾಘವೇಂದ್ರ ಅವರನ್ನು ಒಲೈಸುವ ಕೆಲಸ ಮಠಾಧೀಶರು ಮಾಡುತ್ತಿದ್ದಾರೆ. ಸಾರ್ಥಕ ಸನ್ಮಾನ ಮಾಡುವುದಾದರೆ ವಿಧಾನ ಪರಿಷತ್ ಸದಸ್ಯ ರುದ್ರೇಗೌಡರಿಗೆ ಸನ್ಮಾನ ಮಾಡಲಿ ಅಧಿಕಾರತನ, ಶ್ರೀಮಂತಿಗೆ ಬೆಂಬಲಿಸುವ ಕಾರ್ಯ ಸ್ವಾಮೀಜಿಗಳಿಗೆ ತರವಲ್ಲ. ಬಿಜೆಪಿ ಗೆ ಸಂಸದ ಸ್ಥಾನ ತಂದು ಕೊಟ್ಟವನು ನಾನು. ನಾನು ನಾಲ್ಕು ಸದನ ಹೋಗಿ ಬಂದಿದ್ದೇನೆ ನಾನು ನೆನಪಾಗಲಿಲ್ಲ. ಮುಖ್ಯಮಂತ್ರಿ ಮಗ ಎಂದು ಸಾಧಕನಾಗಿ ಕಂಡರಾ ರಾಘವೇಂದ್ರ? ಸ್ವಾಮೀಜಿಗಳು ಪಕ್ಷಕ್ಕೆ ಸೀಮಿತರಾಗಬಾರದು. ಸ್ವಾಮೀಜಿಗಳು ಸಹ ಬಿಜೆಪಿಯ ಪ್ರಚಾರಕರಾಗಿ ಕೆಲಸ ಮಾಡಿದ್ದಾರೆ. ಸ್ವಾಮೀಜಿಗಳಿಂದ ಇದಾಗಬಾರದು ಎಂದು ಹೇಳಿದರು.