Advertisement

“ಭರತೇಶ ವೈಭವ ಸಾರ್ವಕಾಲಿಕ ಕೃತಿ’

11:35 PM Apr 11, 2019 | Sriram |

ಮಹಾನಗರ: ಕೃತಿಯೊಂದು ಪೂರ್ವಕಾಲೀನ, ಸಮಕಾಲೀನ ಸಂಗತಿಗಳನ್ನು ಒಳಗೊಂಡರೆ ಸಾರ್ವಕಾಲಿವೆನಿಸುತ್ತದೆ. ರತ್ನಾಕರವರ್ಣಿಯ ಭರತೇಶ ವೈಭವವು ಪೂರ್ವಕಾಲಿಕವಾಗಿ ಬಂದ ಕೃತಿಗಳ ಸಾರವನ್ನು ವಿಭಿನ್ನವಾಗಿ, ನಾವೀನ್ಯ ವಾಗಿ ಚಿತ್ರಿತವಾಗಿರುವುದರಿಂದ ಸಾರ್ವಕಾಲಿ ಕವೆನಿಸಿದೆ ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ| ಎನ್‌.ಎಸ್‌. ತಾರಾನಾಥ ಹೇಳಿದರು.

Advertisement

ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಸರಕಾರಿ ಕಾಲೇಜು ರಥಬೀದಿ ಸಹಯೋಗದಲ್ಲಿ ಡಾ| ಪಿ. ದಯಾನಂದ ಪೈ- ಪಿ. ಸತೀಶ್‌ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ರತ್ನಾಕರವರ್ಣಿಯ ಭರತೇಶ ವೈಭವ ಮರು ಓದು ವಿಷಯದ ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ರತ್ನಾಕರವರ್ಣಿ ಆರಿಸಿದ ವಸ್ತು, ಛಂದಸ್ಸು ಆಗಲೇ ಜನಪ್ರಿಯವಾಗಿತ್ತು. ಹಾಗಾಗಿ ಅದರ ನಿರೂಪಣೆಯೇ ಅವನಿಗೆ ಸವಾಲಾಗಿತ್ತು. ಸಮಕಾಲೀನ ಚಾರಿತ್ರಿಕ ಅಂಶಗಳನ್ನು ಪುರಾಣದ ಚೌಕಟ್ಟಿನೊಳಗೆ ಕಾಲ್ಪನಿಕ ಅಂಶಗಳೊಂದಿಗೆ ವೈಭವೀಕರಿಸುತ್ತಾ ಸಾರ್ವಕಾಲಿಕಗೊಳಿಸುವ ವೈಶಿಷ್ಯ ಭರತೇಶ ವೈಭವದಲ್ಲಿದೆ ಎಂದರು.

ಸಾಹಿತ್ಯದಿಂದ ಜೀವನೋತ್ಸಾಹ
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ| ರಾಜಶೇಖರ ಹೆಬ್ಬಾರ್‌ ಮಾತನಾಡಿ,
ಸಾಹಿತ್ಯದ ಓದು ಮನಸ್ಸನ್ನು ಹಸನಾ ಗಿಸುತ್ತದೆ. ಜೀವನೋತ್ಸಾಹ, ಮಾನವೀಯ ಗುಣಗಳನ್ನು ಬೆಳೆಸುತ್ತದೆ ಎಂದರು.

ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಡಾ| ಶಿವರಾಮ ಪಿ. ಉಪಸ್ಥಿತರಿದ್ದರು.ಪೀಠದ ಸಂಯೋಜಕ ಡಾ| ಸೋಮಣ್ಣ ಪ್ರಸ್ತಾವನೆಗೈದರು. ಡಾ| ಪ್ರಕಾಶಚಂದ್ರ ಶಿಶಿಲ ಸ್ವಾಗತಿಸಿದರು. ಡಾ| ನಾಗವೇಣಿ ಮಂಚಿ ವಂದಿಸಿದರು. ಪ್ರೊ| ರವಿಕುಮಾರ ಎಂ.ಪಿ. ನಿರ್ವಹಿಸಿದರು.

Advertisement

ಪ್ರಬಂಧ ಮಂಡನೆ
ಬಳಿಕ ನಡೆದ ಗೋಷ್ಠಿಗಳಲ್ಲಿ ಡಾ| ಕೆ. ತಿಮ್ಮಯ್ಯ ಮೈಸೂರು ವಿವಿ, ಡಾ| ಎಂ ರಂಗಸ್ವಾಮಿ ಮದ್ರಾಸು ವಿವಿ, ಡಾ|ಎಚ್‌.ಎಂ.ನಾಗಾರ್ಜುನ ಸಹ್ಯಾದ್ರಿ ಕಾಲೇಜು ಶಿವಮೊಗ್ಗ,ಡಾ|ಪಿ.ನಾಗರಾಜು ಬೆಳಗಾಂ ವಿವಿ, ಮುನಿರಾಜ ರೆಂಜಾಳ ಮೂಡುಬಿದಿರೆ,
ಡಾ| ಮಾಧವ ಎಂ.ಕೆ ಮಂಗಳೂರು ವಿವಿ ಕಾಲೇಜು ವಿವಿಧ ವಿಚಾರಗಳ ಮೇಲೆ ಪ್ರಬಂಧಗಳನ್ನು ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next