Advertisement
ಸ್ಪೆಶಲ್ ಅವಾರ್ಡ್ತನ್ನ 5ನೇ ವಯಸ್ಸಿನಲ್ಲಿ ನೃತ್ಯಾಭ್ಯಾಸದಲ್ಲಿ ತೊಡಗಿಸಿಕೊಂಡ ಅವರು ಮೂಲತಃ ಕಾಸರಗೋಡಿನ ಬದಿಯಡ್ಕ ನಿವಾಸಿ. ನೃತ್ಯದಲ್ಲಿ ಗಂಗೂಬಾಯಿ ಹಾನಗಲ್ ಫೌಂಡೇಷನ್ ವತಿಯಿಂದ “ಸ್ಪೆಶಲ್ ಅವಾರ್ಡ್’ ಪಡೆದುಕೊಂಡ ಗರಿಮೆ ಇವರದು. ಹಲವಾರು ನೃತ್ಯ ಕಾರ್ಯಕ್ರಮಗಳಲ್ಲಿ ಹಾಗೂ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ನೂರಕ್ಕೂ ಹೆಚ್ಚು ಬಹುಮಾನಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ.
ಹೀಗೆ ಹಲವಾರು ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ದಿವ್ಯಾ ಅವರು ಆಸಕ್ತಿ ಹಾಗೂ ಮನಸ್ಸೊಂದಿದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಮಾದರಿಯಾಗಿದ್ದಾರೆ. ಹುಬ್ಬಳ್ಳಿಯ ಜಗದ್ಗುರು ಗಂಗಾಧರ ಕಾಲೇಜಿನಲ್ಲಿ ತಮ್ಮ ಪದವಿ ಶಿಕ್ಷಣವನ್ನು ಉತ್ತಮ ಫಲಿತಾಂಶಗಳೊಂದಿಗೆ ಪೂರ್ತಿಗೊಳಿಸುವುದರ ಜತೆಗೆ ಕಾಲೇಜಿನ “ಉತ್ತಮ ವಿದ್ಯಾರ್ಥಿನಿ’ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. ಸ್ನಾತಕೋತ್ತರ ಪದವಿಗೆ ಕಾಲಿಟ್ಟ ದಿವ್ಯಾ ಅವರು ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದಲ್ಲಿ ಎಂ.ಕಾಂ. ಓದುತ್ತಿದ್ದಾರೆ. ಪ್ರಸ್ತುತ ಹುಬ್ಬಳ್ಳಿಯ ವೆಂಕಟೇಶ್ವರ ನಗರದಲ್ಲಿ ವಾಸವಾಗಿದ್ದಾರೆ. ಸುಬ್ರಹ್ಮಣ್ಯ ಭಟ್ ಹಾಗೂ ಸುಲೋಚನಾ ಎಸ್. ಭಟ್ ದಂಪತಿಯ ಪುತ್ರಿ ದಿವ್ಯಾ ಮುಂದೆ ಭರತನಾಟ್ಯ ಶಾಲೆಯೊಂದನ್ನು ಆರಂಭಿಸಿ ತಾನು ಕಲಿತಂತಹ ಕಲೆಯನ್ನು ಇನ್ನೂ ನಾಲ್ಕು ಮಂದಿಗೆ ಧಾರೆಯರೆಯಬೇಕೆಂಬ ಹಂಬಲ ವನ್ನಿಟ್ಟುಕೊಂಡಿದ್ದಾರೆ.
Related Articles
Advertisement
ವಿದ್ವತ್ ಪರೀಕ್ಷೆಯಲ್ಲೂ ಸೈಹುಬ್ಬಳ್ಳಿಯ ನಾಟ್ಯಾಂಜಲಿ ಕಲಾಮಂದಿರ ನೃತ್ಯ ಶಾಲೆಯಲ್ಲಿ ಗುರುಗಳಾದ ವಿದುಷಿ ವನಿತಾ ಮಹಾಲೆಯವರ ಬಳಿ ನೃತ್ಯಾಭ್ಯಾಸವನ್ನು ಮಾಡುತ್ತಿದ್ದು, ಭರತನಾಟ್ಯದ ಜೂನಿಯರ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ಹುಬ್ಬಳ್ಳಿ – ಧಾರವಾಡ ಕೇಂದ್ರಕ್ಕೆ ದ್ವಿತೀಯ ಸ್ಥಾನವನ್ನೂ ಮತ್ತು ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ ಹುಬ್ಬಳ್ಳಿ – ಧಾರವಾಡ ಕೇಂದ್ರಕ್ಕೆ ತೃತೀಯ ಸ್ಥಾನವನ್ನೂ ಪಡೆದು ಉತ್ತಮ ಅಂಕಗಳೊಂದಿಗೆ ಉತ್ತೀರ್ಣಗೊಂಡಿದ್ದಾರೆ. 2018-19ರ ಸಾಲಿನಲ್ಲಿ ನಡೆದ ಪೂರ್ವ ಹಂತದ ವಿದ್ವತ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಪ್ರಸ್ತುತ ಭರತನಾಟ್ಯದ ಮುಂದಿನ ಹಂತವಾದ ಅಂತಿಮ ವಿದ್ವತ್ ಪರೀಕ್ಷೆಯ ತಯಾರಿಯಲ್ಲಿ ತೊಡಗಿದ್ದಾರೆ. - ಪಲ್ಲವಿ ಕೋಂಬ್ರಾಜೆ, ಉಜಿರೆ