Advertisement

4,990 ಕೋಟಿ ರೂ. ಹೊಂದಾಣಿಕೆ ಆದಾಯ ಮೊತ್ತ ಮನ್ನಾಕ್ಕೆ ಮನವಿ

09:51 AM Dec 18, 2019 | Hari Prasad |

ಹೊಸದಿಲ್ಲಿ: ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಭಾರತ್‌ ಸಂಚಾರ್‌ ನಿಗಮ ನಿಯಮಿತ 4,990 ಕೋಟಿ ರೂ. ಹೊಂದಾಣಿಕೆ ಮಾಡಿರುವ ಆದಾಯ (ಎಜಿಆರ್‌) ಮೊತ್ತ ಮನ್ನಾ ಮಾಡಬೇಕು ಎಂದು ದೂರಸಂಪರ್ಕ ಸಚಿವಾಲಯಕ್ಕೆ ಮನವಿ ಮಾಡಿದೆ.

Advertisement

ಈ ಬಗ್ಗೆ ಸರಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಅಧ್ಯಕ್ಷ ಪ್ರವೀಣ್‌ ಕುಮಾರ್‌ ಪುರ್ವಾರ್‌ ಮಾಹಿತಿ ನೀಡಿದ್ದಾರೆ. ಒಟ್ಟು ಮೊತ್ತದ ಪೈಕಿ ಸಂಸ್ಥೆ ಪಾವತಿ ಮಾಡಬೇಕಾಗಿರುವುದನ್ನು ಕಡಿಮೆಗೊಳಿಸಬೇಕು ಎನ್ನುವುದು ನಮ್ಮ ಅರಿಕೆ ಎಂದಿದ್ದಾರೆ. ಪರವಾನಗಿ ಶುಲ್ಕ 2,099 ಕೋಟಿ ರೂ., ತರಂಗಾಂತರ ಬಳಕೆ ಶುಲ್ಕ (ಎಸ್‌ಯುಸಿ) ಎಂದು 2,890 ಕೋಟಿ ರೂ. ನೀಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next