Advertisement

Karnataka: ಉಭಯ ಸದನದಲ್ಲಿ “ಭಾರತ್‌ ರೈಸ್‌’ ಪ್ರತಿಧ್ವನಿ

11:42 PM Feb 13, 2024 | Pranav MS |

ಬೆಂಗಳೂರು: ಕೇಂದ್ರ ಸರಕಾರ ಈಚೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಭಾರತ್‌ ರೈಸ್‌’ ಮಂಗಳವಾರ ಉಭಯ ಸದನಗಳಲ್ಲಿ ಪ್ರತಿಧ್ವನಿಸಿತು. “ಅನ್ನಭಾಗ್ಯ’ಕ್ಕೆ ಅಕ್ಕಿ ಇಲ್ಲ ಎಂದ ಕೇಂದ್ರವು ಈಗ ಕೇವಲ ತನ್ನ ಪ್ರಚಾರಕ್ಕಾಗಿ ಕೋಟ್ಯಂತರ ರೂ.ನಷ್ಟ ಮಾಡಿಕೊಂಡು ಅಕ್ಕಿ ನೀಡಲು ಹೊರಟಿದೆ. ಈ ಮೂಲಕ ಆರ್ಥಿಕ ದಿವಾಳಿಗೆ ದೂಡುತ್ತಿದೆ ಎಂದು ಕಾಂಗ್ರೆಸ್‌ ಸದಸ್ಯರು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡರು.

Advertisement

ವಿಧಾನಪರಿಷತ್‌ನಲ್ಲಿ ಮಾತನಾ ಡಿದ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ, ನಮಗೆ ಅಕ್ಕಿ ಇಲ್ಲ’ ಎಂದ ಕೇಂದ್ರ ಸರಕಾರ, ಈಗ ತನ್ನ ಪ್ರಚಾರಕ್ಕಾಗಿ 20 ರೂ. ನಷ್ಟ ಮಾಡಿಕೊಂಡು ಭಾರತ್‌ ರೈಸ್‌ ಬಿಡುಗಡೆ ಮಾಡಿದೆ ಎಂದು ವಾಗ್ಧಾಳಿ ನಡೆಸಿದರು.

ಶೂನ್ಯವೇಳೆಯಲ್ಲಿ ವಿಪಕ್ಷದ ಮುಖ್ಯಸಚೇತಕ ಎನ್‌. ರವಿಕುಮಾರ್‌ ಪ್ರಸ್ತಾಪಿಸಿದ ವಿಷಯಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವರು, ಅನ್ನಭಾಗ್ಯಕ್ಕೆ ಅಗತ್ಯವಿರುವ ಅಕ್ಕಿ ನೀಡುವಂತೆ ಕೇಂದ್ರವನ್ನು ಕೋರಲಾಗಿತ್ತು. ತನ್ನ ಬಳಿ ಇದ್ದರೂ ಆಗ ಕೇಂದ್ರ ನಮಗೆ ಕೊಡಲಿಲ್ಲ. ಆದರೆ, ಈಗ ಅದೇ ಕೇಂದ್ರ ಸರಕಾರ ಪ್ರತಿ ಕೆಜಿಗೆ 20 ರೂ. ನಷ್ಟ ಮಾಡಿಕೊಂಡು ಕೇವಲ ಪ್ರಚಾರಕ್ಕಾಗಿ ಪ್ರತಿ ಕೆಜಿಗೆ 29 ರೂ. ಭಾರತ್‌ ರೈಸ್‌ ಬಿಡುಗಡೆ ಮಾಡಿ, ದೇಶವನ್ನು ಆರ್ಥಿಕ ದಿವಾಳಿಗೆ ದೂಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next