Advertisement
ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 57ನೇ ವರ್ಧಂತಿ ಪ್ರಯುಕ್ತ ಅ.24ರಂದು ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ಜರಗಿದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಶುಭ ಹಾರೈಸಿದರು.ಹೇಮಾವತಿ ವೀ.ಹೆಗ್ಗಡೆ, ಸುರೇಂದ್ರ ಕುಮಾರ್ ಮತ್ತು ಡಿ.ಹರ್ಷೇಂದ್ರ ಕುಮಾರ್ ವೇದಿಕೆಯಲ್ಲಿದ್ದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ| ಎಸ್.ಸತೀಶ್ಚಂದ್ರ ಸ್ವಾಗತಿಸಿದರು. ಪಟ್ಟಾಭಿಷೇಕ ವರ್ಧಂತಿ ಸಮಿತಿ ಸಂಚಾಲಕ ಲಕ್ಷ್ಮೀನಾರಾಯಣ ರಾವ್ ವಂದಿಸಿದರು. ಅನ್ನಪೂರ್ಣಾ ಛತ್ರದ ಪ್ರಬಂಧಕ ಸುಬ್ರಹ್ಮಣ್ಯ ಪ್ರಸಾದ್ ನಿರ್ವಹಿಸಿದರು.
57 ನೇ ವರ್ಧಂತಿ ಪುಸ್ತಕ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಡಾ| ಹೆಗ್ಗಡೆ ಸಹಿತ ಗಣ್ಯರನ್ನು ಭವ್ಯ ಮೆರವಣಿಗೆ ಮೂಲಕ ಸಭಾ ವೇದಿಕೆಗೆ ಕರೆತರಲಾಯಿತು.
ಗಣ್ಯರಿಂದ ಅಭಿನಂದನೆ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಕೆ.ಪಿ.ಸಿ.ಸಿ. ಜಿಲ್ಲಾ ಘಟಕದ ಅಧ್ಯಕ್ಷ ಕೆ. ಹರೀಶ್ ಕುಮಾರ್, ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ, ಕೆ. ರಾಜವರ್ಮ ಬಲ್ಲಾಳ್, ವಿಜಯಾ ಬ್ಯಾಂಕ್ ನಿವೃತ್ತ ಪ್ರಬಂಧಕ ಎಂ. ಜಿನರಾಜ ಶೆಟ್ಟಿ, ಮಂಗಳೂರು, ಸುದರ್ಶನ್ ಜೈನ್, ಬಂಟ್ವಾಳ, ಪಿ.ಜಯರಾಜ ಕಂಬಳಿ, ಪೆರಿಂಜೆಗುತ್ತು, ಪಡ್ಯಾರಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಮೊಕ್ತೇಸರ ಜೀವಂಧರ ಕುರ್ಮಾ, ಕೆ.ಪ್ರದೀಪ್‌ಕುಮಾರ್ ಕಲ್ಕೂರ, ಹರಿಕೃಷ್ಣ ಪುನರೂರು ಮೊದಲಾದ ಗಣ್ಯರು ಹೆಗ್ಗಡೆಯವರಿಗೆ ಅಭಿನಂದಿಸಿದರು. ಡಾ| ಹೆಗ್ಗಡೆಯವರ ಮೇಣದ ಪ್ರತಿಮೆ ಅನಾವರಣ
ಡಾ| ಹೆಗ್ಗಡೆಯವರ ಅಭಿಮಾನಿ ಪುಟ್ಟಪರ್ತಿಯ ಹರೀಶ್ ಕೃಷ್ಣ ಸ್ವಾಮಿ ಹಾಗೂ ಸಹೋದರಿ ಪ್ರಿಯಾ ಕೃಷ್ಣ ಸ್ವಾಮಿ ಅವರು 6 ತಿಂಗಳಿಂದ ಸಂಶೋಧಿಸಿ ಸಿದ್ಧಪಡಿಸಿದ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ತದ್ರೂಪಿ ಮೇಣದ ಪ್ರತಿಮೆಯನ್ನು ಡಾ| ಸಿ.ಎನ್. ಮಂಜುನಾಥ್ ಅನಾವರಣ ಮಾಡಿದರು. ಹೊಸ ಯೋಜನೆಗಳು
-ಧರ್ಮಸ್ಥಳದಲ್ಲಿ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಮಾಡಿ ಭಕ್ತರ ಸಂಪೂರ್ಣ ಚಿತ್ರಣ ಬರುವ ಸಿಸಿ ಕೆಮರಾ ಅಳವಡಿಕೆ, ಸೇವೆಗಳ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ.
-ನ.8ರಂದು ಧರ್ಮಸ್ಥಳದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರಿಂದ ನೂತನ (ಕ್ಯೂ ಕಾಂಪ್ಲೆಕ್ಸ್) ಭಕ್ತರ ಆರಾಮದಾಯಕ ಸರತಿ ಸಾಲಿನ ಸೌಲಭ್ಯದ ಕಟ್ಟಡ ಉದ್ಘಾಟನೆ.
-ದೇಶದಲ್ಲಿ ಇನ್ನೂ 120 ಹೊಸ ರುಡ್‌ಸೆಟ್ ಸಂಸ್ಥೆಗಳ ಪ್ರಾರಂಭ.
-ಧರ್ಮೋತ್ಥಾನ ಟ್ರಸ್ಟ್ ಮೂಲಕ ಹಳೆಯ 11 ಸಾವಿರ ದೇವಾಲಯಗಳಿಗೆ ಸಹಕಾರ.
-70 ಕೋ.ರೂ. ವೆಚ್ಚದಲ್ಲಿ ನೂತನ ಸಿರಿ ಉತ್ಪಾದನ ಘಟಕ ಜನವರಿಯಲ್ಲಿ ಉದ್ಘಾಟನೆ