Advertisement

‘Bharat Mata’; ರಾಹುಲ್ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ: ಪ್ರಹ್ಲಾದ್ ಜೋಶಿ

10:17 PM Aug 11, 2023 | Team Udayavani |

ಹೊಸದಿಲ್ಲಿ: ‘ಭಾರತ ಮಾತಾ ಎಂಬ ಪದಗಳನ್ನು ಲೋಕಸಭೆಯ ಕಲಾಪದಿಂದ ಹೊರಹಾಕಲಾಗಿದೆ’ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆರೋಪವನ್ನು ತಳ್ಳಿಹಾಕಿದ್ದು, ಅವರಿಗೆ ತಿಳುವಳಿಕೆ ಇಲ್ಲ ಮತ್ತು ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಶುಕ್ರವಾರ ಕಿಡಿ ಕಾರಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜೋಶಿ, ಬುಧವಾರ ನಡೆದ ಅವಿಶ್ವಾಸ ನಿರ್ಣಯದ ಚರ್ಚೆಯಲ್ಲಿ ಗಾಂಧಿಯವರ ಭಾಷಣದಿಂದ ಕೆಲವು ಅಸಂಸದೀಯ ಪದಗಳನ್ನು ಮಾತ್ರ ಹೊರಹಾಕಲಾಗಿದೆಯೇ ಹೊರತು ‘ಭಾರತ್ ಮಾತಾ’ ಅಲ್ಲ ಎಂದು ಪ್ರತಿಪಾದಿಸಿದರು.

ವಿರೋಧ ಪಕ್ಷಗಳು ರಾಜಕೀಯ ಕಾರಣಗಳಿಗಾಗಿ ಅಧಿವೇಶನದಲ್ಲಿ ಗದ್ದಲ ಸೃಷ್ಟಿಸಿವೆ ಮತ್ತು ಹಲವಾರು ಪ್ರಮುಖ ಮಸೂದೆಗಳ ಚರ್ಚೆಗೆ ಅವಕಾಶ ನೀಡಿಲ್ಲ ಎಂದು ಆರೋಪಿಸಿದರು.

ಅಧಿವೇಶನದಲ್ಲಿ ಲೋಕಸಭೆಯ ಪ್ರೊಡಕ್ಟಿವಿಟಿ 45 ಪ್ರತಿಶತ ಮತ್ತು ರಾಜ್ಯಸಭೆಯಲ್ಲಿ 63 ಪ್ರತಿಶತದಷ್ಟಿತ್ತು, ಅದರಲ್ಲಿ ಹೆಚ್ಚಿನ ಭಾಗವು ಮಣಿಪುರ ವಿಷಯದ ಬಗ್ಗೆ ಪ್ರತಿಪಕ್ಷಗಳ ಪ್ರತಿಭಟನೆಯಿಂದ ಹಾಳಾಯಿತು. ಲೋಕಸಭೆಯಲ್ಲಿ 22 ಮತ್ತು ರಾಜ್ಯಸಭೆಯಲ್ಲಿ 25 ಒಟ್ಟು 23 ಮಸೂದೆಗಳು ಉಭಯ ಸದನಗಳಲ್ಲಿ ಅಂಗೀಕಾರಗೊಂಡಿವೆ. ಹಿಂದಿನ ಅಧಿವೇಶನಗಳಲ್ಲಿ ಒಂದು ಸದನವು ಅಂಗೀಕರಿಸಿದ ಕೆಲವು ಮಸೂದೆಗಳು ಈ ಅಧಿವೇಶನದಲ್ಲಿ ಮತ್ತೊಂದು ಸದನದ ಅನುಮೋದನೆಯನ್ನು ಪಡೆದುಕೊಂಡವು ಎಂದು ಜೋಶಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next