ಮುಂಬಯಿ: ಭಾರತ್ ಬ್ಯಾಂಕ್ ಸ್ಟಾಫ್ ವೆಲ್ಫೇರ್ ಕ್ಲಬ್‌ನ ವಾರ್ಷಿಕ ಕ್ರೀಡೋತ್ಸವ ಸಮಾರೋಪ ಹಾಗೂ ಬಹುಮಾನ ವಿತರಣ ಸಮಾರಂಭವು ಕಾಂದಿವಲಿ ಪೂರ್ವದ ಠಾಕೂರ್ ವಿಲೇಜ್‌ನ ಠಾಕೂರ್ ಸ್ಟೇಡಿಯಂನಲ್ಲಿ ನ. 4 ರಂದು ಸಂಜೆ ನಡೆಯಿತು.
ಅಂತರ್‌ಶಾಖಾ ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು 14 ತಂಡಗಳು ಭಾಗವಹಿಸಿದ್ದು, ಅಂತಿಮವಾಗಿ ಶಿರ್ಡಿ ಶಾಖೆಯ ಭರತ್ ಎಸ್. ಕರ್ಕೇರ ನೇತೃತ್ವದ ಬಿಸಿಬಿ ಥಂಡರ್ ತಂಡ ಪ್ರಥಮ, ಪನ್ವೆಲ್ ಶಾಖೆಯ ಸಂತೋಷ್ ಬಿ. ಕೋಟ್ಯಾನ್ ನೇತೃತ್ವದ ಬಿಸಿಬಿ ರೇಂಜರ್ ತಂಡ ದ್ವಿತೀಯ ಸ್ಥಾನ ಪಡೆದವು.
ಮಹಿಳೆಯರ ಸೀಮಿತ ಓವರ್‌ಗಳ ಬಾಕ್ಸ್ ಕ್ರಿಕೆಟ್ ಪಂದ್ಯಾಟದಲ್ಲಿ ಕೇಂದ್ರ ಕಚೇರಿಯ ತನ್ವಿ ಎನ್. ಅಮೀನ್ ನೇತೃತ್ವದ ಬಿಸಿಬಿ ಬ್ಲಾಸ್ಟರ್ ಪ್ರಥಮ, ಲ್ಯಾಮಿಂಗ್‌ಟನ್ ರೋಡ್ ಶಾಖೆಯ ಬೇಬೆ ಜೆ. ಕುಕ್ಯಾನ್ ನೇತೃತ್ವದ ಬಿಸಿಬಿ ಈಗಲ್ ತಂಡ ದ್ವಿತೀಯ ಸ್ಥಾನ ಗಳಿಸಿದವು. ಮಹಿಳೆಯರ ತ್ರೋಬಾಲ್ ಪಂದ್ಯದಲ್ಲಿ ಗೋರೆಗಾಂವ್ ಪೂರ್ವದ ದೀಕ್ಷಿತಾ ಕೆ. ಸುವರ್ಣ ನೇತೃತ್ವದ ಬಿಸಿಬಿ ಫಾಲ್ಕೋನ್ಸ್ ತಂಡ ಪ್ರಥಮ, ಮುಲುಂಡ್ ಪೂರ್ವ ಶಾಖೆಯ ಅನುಷಾ ಜೆ. ಪೂಜಾರಿ ನೇತೃತ್ವದ ಬಿಸಿಬಿ ರೈಡರ್ ತಂಡ ದ್ವಿತೀಯ ಸ್ಥಾನ ಗಳಿಸಿತು. ವಿಜೇತ ತಂಡಗಳು ನಗದು, ಸ್ಮರಣಿಕೆ ಹಾಗೂ ಪರ್ಯಾಯ ಫಲಕಗಳಿಂದ ಗೌರವಿಸಲ್ಪಟ್ಟವು.
ಕ್ರಿಕೆಟ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಭಾಂಡೂಪ್ ವಿಲೇಜ್ ಶಾಖೆಯ ಧೀರಜ್ ಕುಮಾರ್ ಎಂ. ಕೋಟ್ಯಾನ್, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಮಲಾಡ್ ಶಾಖೆಯ ಜಿತೇಂದ್ರ ಸಿ. ಜೋಶಿ, ಉತ್ತಮ ದಾಂಡಿಗನಾಗಿ ದಿವಾ ಶಾಖೆಯ ಶ್ರೇಯಸ್ ಎಸ್. ಶೆಟ್ಟಿ, ಉತ್ತಮ ಎಸೆತಗಾರನಾಗಿ ಪನ್ವೆಲ್ ಶಾಖೆಯ ಸಂತೋಷ್ ಬಿ. ಕೋಟ್ಯಾನ್ ಅವರು ಪ್ರಶಸ್ತಿ ಪಡೆದರು.
ಅಧಿಕ ಸಿಕ್ಸರ್ ಮತ್ತು ಬೌಡರಿ ಹೊಡೆತಗಾರನಾಗಿ ದಿವಾ ಶಾಖೆಯ ಶ್ರೇಯಸ್ ಎಸ್. ಶೆಟ್ಟಿ ಅವರು ಬಹುಮಾನ ಗಳಿಸಿದರು. ತ್ರೋಬಾಲ್‌ನಲ್ಲಿ ಉತ್ತಮ ಆಟಗಾರ್ತಿಯಾಗಿ ಗೋರೆಗಾಂವ್ ಪೂರ್ವ ಶಾಖೆಯ ದೀಕ್ಷಿತಾ ಕೆ. ಸುವರ್ಣ, ಉತ್ತಮ ಸರ್ವರ್ ಆಗಿ ಥಾಣೆ ಶಾಖೆಯ ಪೂಜಾ ಸಿ. ಅಂಚನ್ ಅವರು ಬಹುಮಾನ ಗಳಿಸಿದರು. ಸುಮಾರು ಐವತ್ತಕ್ಕೂ ಅಧಿಕ ಸಿಬಂದಿಗಳ ಮಕ್ಕಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಭಾರತ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಕಾರ್ಯನಿರ್ವಾಹಣಾಧಿಕಾರಿ ಸಿ. ಆರ್. ಮೂಲ್ಕಿ ಅವರು ಬಹುಮಾನ ವಿತರಿಸಿ ಶುಭ ಹಾರೈಸಿದರು.
ಉದ್ಘಾಟನ ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ನಿರ್ದೇಶಕರಾದ ವಿ. ಆರ್. ಕೋಟ್ಯಾನ್, ನಿರ್ದೇಶಕ ಗಂಗಾಧರ ಪೂಜಾರಿ ಮತ್ತು ಭಾಸ್ಕರ ಸಾಲ್ಯಾನ್, ನ್ಯಾಯವಾದಿ ಸೋಮನಾಥ ಅಮೀನ್, ಆಂತರಿಕ ಲೆಕ್ಕಪರಿಶೋಧಕ ಅಶ್ವಜಿತ್ ಹೆಜ್ಮಾಡಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಪ್ರೇಮನಾಥ್ ಕೋಟ್ಯಾನ್, ಶಂಕರ ಸುವರ್ಣ, ಮಹಾ ಪ್ರಬಂಧಕ ವಿದ್ಯಾನಂದ ಕರ್ಕೇರ, ದಿನೇಶ್ ಸಾಲ್ಯಾನ್, ನವೀನ್ ಬಂಗೇರ, ನಿತ್ಯಾನಂದ ಕಿರೋಡಿಯನ್, ಉಪ ಮಹಾಪ್ರಬಂಧಕರಾದ ಮಹೇಶ್ ಕೋಟ್ಯಾನ್, ಪ್ರಭಾಕರ ಪೂಜಾರಿ, ಜನಾರ್ದನ ಪೂಜಾರಿ, ವಾಸುದೇವ ಸಾಲ್ಯಾನ್, ಮಾಜಿ ಮಹಾಪ್ರಬಂಧಕಿ ಶೋಭಾ ದಯಾನಂದ್, ಬಿಲ್ಲವರ ಅಸೋಸಿಯೇಶನ್‌ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಹಿತೈಷಿಗಳು ಉಪಸ್ಥಿತರಿದ್ದರು.
ಕ್ರೀಡಾ ತಾಂತ್ರಿಕ ನಿರ್ದೇಶಕರಾಗಿ ನವೀನ್ ಕುಮಾರ್ ಕರ್ಕೇರ ಸಹಕರಿಸಿದರು. ವೆಲ್ಫೆàರ್‌ನ ಪದಾಧಿಕಾರಿಗಳಾದ ಮೋಕ್ಷಾ ಜಿ. ಕೋಟ್ಯಾನ್ ಸ್ವಾಗತಿಸಿ ಕಾರ್ಯಯೋಜನೆಯ ಬಗ್ಗೆ ವಿವರಿಸಿದರು. ಪದಾಧಿಕಾರಿಗಳಾದ ದೀಪಕ್ ಪ್ರಭು, ರೇವತಿ ಪೂಜಾರಿ, ನಿಶಾ ಕೆಲ್ಲಪುತ್ತಿಗೆ, ಪುಷ್ಪರಾಜ್ ಬೇಲಾಡಿ, ಸೌರಭ್ ಅಗರ್‌ವಾಲ್, ವಿಪುಲ್ ಪೂಜಾರಿ, ತೇಜಸ್ ಪೂಜಾರಿ, ವಿನೀತಾ ಕೋಟ್ಯಾನ್, ರಿತೇಶ್ ಕೋಟ್ಯಾನ್ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ: ರಮೇಶ್ ಅಮೀನ್