Advertisement

ಭಾರತ್‌ ಬ್ಯಾಂಕ್‌ ಪಾಲ್ಘರ್‌ ಶಾಖೆ ದ್ವಿತೀಯ ಸಂಸ್ಥಾಪನಾ ದಿನಾಚರಣೆ

05:03 PM Jul 11, 2018 | |

ಪಾಲ್ಘರ್‌: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಸಂಚಾಲಕತ್ವದ ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ನ ಪಾಲ^ರ್‌ ಶಾಖೆಯ ದ್ವಿತೀಯ ಸಂಸ್ಥಾಪನಾ ದಿನಾಚರಣೆಯು ಜು. 7 ರಂದು ನಡೆಯಿತು.

Advertisement

ನೇರ ವಿದೇಶಿ ವಿನಿಮಯ ಸೇವೆ, ವಿಮಾ ಸೌಲಭ್ಯ, ಇ-ಟ್ಯಾಕ್ಸ್‌ ಪೇಮೆಂಟ್‌, ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌ ಮೊದಲಾದ ಸೇವೆಗಳ ಮುಖಾಂತರ ಹೆಸರುವಾಸಿಯಾಗಿರುವ ಭಾರತ್‌ ಬ್ಯಾಂಕ್‌ ದಿನದಿಂದ ದಿನಕ್ಕೆ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಬ್ಯಾಂಕ್‌ 11 ಸಾವಿರ ಕೋ. ರೂ. ಗಳಿಗಿಂತಲೂ ಹೆಚ್ಚಿನ ಠೇವಣಿಗಳು ಹಾಗೂ 8 ಸಾವಿರ ಕೋ. ರೂ. ಗಳಿಗಿಂತಲೂ ಹೆಚ್ಚಿನ ಸಾಲ ಹಾಗೂ ಒಟ್ಟು 19 ಸಾವಿರ ಕೋ. ರೂ. ಗಳ ವ್ಯವಹಾರವನ್ನು ನಡೆಸುತ್ತಿದೆ.

ಎರಡು ವರ್ಷಗಳ ಹಿಂದೆ ಜು. 7 ರಂದು ಪಾಲ^ರ್‌ನಲ್ಲಿ 95 ನೇ ಶಾಖೆಯನ್ನು ತೆರೆದು ಜನಸಾಮಾನ್ಯರ ಸೇವೆಗೂ ತನ್ನನ್ನು ತೊಡಗಿಸಿಕೊಂಡಿದೆ. ಪಾಲ^ರ್‌ ಶಾಖೆಯದ ದ್ವಿತೀಯ ಸಂಸ್ಥಾಪನಾ ದಿನಾಚರಣೆಯಲ್ಲಿ ಉದ್ಯಮಿ ಗಿರೀಶ್‌ ಶೆಟ್ಟಿ, ಗಣಪತಿ ಅಯ್ಯರ್‌, ರಾಜು ನಮೋಲೆ, ಅರುಣ್‌ ಪೂಜಾರಿ, ಸಾಗರ್‌ ಕುಲಕರ್ಣಿ ಮೊದಲಾದವರು ಜ್ಯೋತಿ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶಾಖಾ ಪ್ರಬಂಧಕಿ ಜ್ಯೋತಿ ಆರ್‌. ಜನಾರ್ಕರ್‌ ಅವರು ಉಪಸ್ಥಿತರಿದ್ದ ಅತಿಥಿಗಳನ್ನು ಸ್ವಾಗತಿಸಿದರು. 

ಗಣಪತಿ ಅಯ್ಯರ್‌ ಅವರು ಮಾತನಾಡಿ, ಬ್ಯಾಂಕಿನ ಸಿಬಂದಿಗಳ ನಗದುಮೊಗದ ಸೇವೆಯು ಬ್ಯಾಂಕಿನ ಪ್ರಗತಿಯ ಮೂಲ ಕಾರಣವಾಗಿದೆ. ಇದೇ ರೀತಿ ದೇಶದಲ್ಲೇ ಅತ್ಯುತ್ತಮ ಬ್ಯಾಂಕಾಗಿ ಮೂಡಿ ಬರಲಿ ಎಂದು ಹಾರೈಸಿದರು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಪೂಜೆ ನಡೆಯಿತು. ಪೂಜೆಯನ್ನು ಉಪ ಪ್ರಬಂಧಕ ಸದಾಶಿವ ಕರ್ಕೇರ ಇವರು ನೆರವೇರಿಸಿದರು. ಬ್ಯಾಂಕಿನ ಪ್ರಬಂಧಕಿ ಜ್ಯೋತಿ ಆರ್‌. ಜನಾರ್ಕರ್‌, ಉಪ ಪ್ರಬಂಧಕ ಸದಾಶಿವ ಎ. ಕರ್ಕೇರ, ಅಧಿಕಾರಿ ವಿಜಯ ಕುಮಾರ್‌ ಪಾಲನ್‌, ಸಿಬ್ಬಂದಿಗಳಾದ ಅಭಿಲಾಶ್‌ ಸುವರ್ಣ, ಪ್ರತೀಕ್‌ ಮಸ್ಕಿ, ಮೋಹಿತ್‌ ಸಾಲ್ಯಾನ್‌, ರೋಹನ್‌ ಕೆ. ಸುವರ್ಣ ಮೊದಲಾದವರು ಉಪಸ್ಥಿತರಿದ್ದರು. ಗ್ರಾಹಕರುಗಳಾದ ಅನಿಲ್‌ ಕುಮಾರ್‌, ದೇವದಾಸ್‌, ಕಲ್ಪನಾ ಜವಾರRರ್‌, ತುಳಸಿದಾಸ್‌ ಅಮೈ ಮೊದಲಾದವರು ಹಾಜರಿದ್ದು ಶುಭಹಾರೈಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next