ಮುಂಬಯಿ: ಹಣಕಾಸು ವ್ಯವಹಾರದೊಂದಿಗೆ ಸಹಕಾರಿ ರಂಗದಲ್ಲೆ ರಾಷ್ಟ್ರೀಯ ಪ್ರಶಸ್ತಿಗಳಿಗೆ ಪಾತ್ರವಾಗಿ ಉತ್ಕೃಷ್ಟ ಆರ್ಥಿಕ ಸಂಸ್ಥೆಯಾಗಿ ಮನ್ನಣೆ ಪಡೆದಿರುವ ತುಳು-ಕನ್ನಡಿಗರ ಭಾರತ್ ಕೋ. ಆಪರೇಟಿವ್ ಬ್ಯಾಂಕ್ ಪಥ ಸಂಸ್ಥೆಯ 2018-2023 ರ ಸಾಲಿನ ನೂತನ ನಿರ್ದೇಶಕ ಮಂಡಳಿಗೆ ಅಧಿಕಾರ ಹಸ್ತಾಂತರಿಸಲಾಯಿತು.
ಮಹಾರಾಷ್ಟ್ರ ರಾಜ್ಯ ಸಹಕಾರಿ ಸೊಸೈಟಿಗಳ ಕ್ರಮಾನುಸಾರ ಬ್ಯಾಂಕ್ ಮಂಡಳಿಯ ಮುಂದಿನ ಅವಧಿಯ ಸಾಮಾನ್ಯ ಸ್ಥಾನಗಳಿಗೆ ಮುಖ್ಯ ಚುನಾವಣಾಧಿಕಾರಿ ಕಾರ್ಯ ನಿರ್ವಹಿಸಿದ್ದ ಮಹಾರಾಷ್ಟ್ರ ರಾಜ್ಯ ಸಹಕಾರಿ ಕೋ. ಆಪರೇಟಿವ್ ಸೊಸೈಟಿಯ ಹೆಚ್ಚುವರಿ ರಿಜಿಸ್ತ್ರಾರ್, ಎ. ಕೆ. ಚವ್ಹಾಣ್ ಅಧ್ಯಕ್ಷತೆಯಲ್ಲಿ ಅ. 5 ರಂದು ಗೋರೆಗಾಂವ್ ಪೂರ್ವದ ಬ್ರಿಜ್‌ವಾಸಿ ಪ್ಯಾಲೇಸ್ ಸಭಾಗೃಹದಲ್ಲಿ ನಡೆದ ನಿರ್ದೇಶಕ ಮಂಡಳಿಯ ಸಭೆಯಲ್ಲಿ ಬ್ಯಾಂಕ್‌ನ ನೂತನ ಎಲ್ಲಾ ನಿರ್ದೇಶಕರ ನೇಮಕಾತಿ ಯಾದಿಯನ್ನು ಅಧಿಕೃತವಾಗಿ ಪ್ರಕಟಿಸಿ ನಿರ್ದೇಶಕರುಗಳಿಗೆ ಆಯ್ಕೆ ದೃಢೀಕರಣ ಪತ್ರವನ್ನು ಪ್ರದಾನಿಸಿ ಶುಭಹಾರೈಸಿದರು.
ಪ್ರಾರಂಭದಲ್ಲಿ ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ ಅವರು ಬ್ರಹ್ಮಶ್ರೀನಾರಾಯಣ ಗುರು ಅವರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ನಮಿಸಿ ದೀಪ ಬೆಳಗಿಸಿ ಸಾಂಕೇತಿಕವಾಗಿ ಸಭೆಗೆ ಚಾಲನೆ ನೀಡಿದರು. ಹೆಚ್ಚುವರಿ ಚುನಾವಣಾಧಿಕಾರಿ ಸಂದೀಪ್ ದೇಶು¾ಖ್, ಸಹ ಹೆಚ್ಚುವರಿ ಚುನಾವಣಾಧಿಕಾರಿ ಡಿ. ಬಿ. ಗೋಸ್ವಾಮಿ, ಭಾರತ್ ಬ್ಯಾಂಕಿನ ಮುಖ್ಯ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ. ಆರ್. ಮೂಲ್ಕಿ, ಸಹ ಹೆಚ್ಚುವರಿ ಚುನಾವಣಾಧಿಕಾರಿ ವಿದ್ಯಾನಂದ ಎಸ್. ಕರ್ಕೇರ, ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬ್ಯಾಂಕ್ ಮಂಡಳಿಗೆ ನೂತನ ನಿರ್ದೇಶಕರಾಗಿ ಚುನಾಯಿತರಾದ ಜಯ ಸಿ. ಸುವರ್ಣ, ವಾಸುದೇವ ಆರ್. ಕೋಟ್ಯಾನ್, ಎಲ್. ವಿ. ಅಮೀನ್, ನ್ಯಾಯವಾದಿ ಎಸ್. ಬಿ. ಅಮೀನ್, ಜೆ. ಎ. ಕೋಟ್ಯಾನ್, ದಾಮೋದರ ಸಿ. ಕುಂದರ್, ಎನ್. ಟಿ. ಪೂಜಾರಿ, ಗಂಗಾಧರ್ ಜೆ. ಪೂಜಾರಿ, ಕೆ. ಬಿ. ಪೂಜಾರಿ, ಯು. ಎಸ್. ಪೂಜಾರಿ, ಜ್ಯೋತಿ ಕೆ. ಸುವರ್ಣ, ಕೆ. ಎನ್. ಸುವರ್ಣ, ಭಾಸ್ಕರ್ ಎಂ. ಸಾಲ್ಯಾನ್, ಸೂರ್ಯಕಾಂತ್ ಜೆ. ಸುವರ್ಣ, ಪ್ರೇಮನಾಥ್ ಪಿ. ಕೋಟ್ಯಾನ್, ಮೋಹನ್‌ದಾಸ್ ಎ. ಪೂಜಾರಿ, ಪುರುಷೋತ್ತಮ ಎಸ್. ಕೋಟ್ಯಾನ್, ಐಕ್ಯಮತದಿಂದ ಆಯ್ಕೆಯಾದ ಮಹಿಳಾ ಮೀಸಲು ನಿರ್ದೇಶಕಿಯರಾದ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್ ಮತ್ತು ಶಾರದಾ ಸೂರು ಕರ್ಕೇರ, ಹಿಂದುಳಿದ ಜಾತಿ-ಪರಿಶಿಷ್ಟ ವರ್ಗದ ಸದಸ್ಯತ್ವ ನಿರ್ದೇಶಕ ಅನ½ಲ್ಗನ್ ಸಿ. ಹರಿಜನ್ ಅವರಿಗೆ ಎ. ಕೆ. ಚವ್ಹಾಣ್ ಅವರು ಅಧಿಕೃತವಾಗಿ ಹುದ್ದೆಗಳನ್ನು ಹಸ್ತಾಂತರಿಸಿ ಅಭಿನಂದಿಸಿದರು. ಬ್ಯಾಂಕ್ ಅಧಿಕಾರಿ ವಂದನಾ ಶೆಟ್ಟಿ ಪ್ರಾರ್ಥನೆಗೈದರು. ಸಿ. ಆರ್. ಮೂಲ್ಕಿ ಸ್ವಾಗತಿಸಿ ಪ್ರಸ್ತಾವನೆಗೈದರು. ವಿದ್ಯಾನಂದ ಎಸ್. ಕರ್ಕೇರ ವಂದಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್