Advertisement
ಜ. 25 ರಂದು ಭಾರತ್ ಕೋ. ಆಪರೇಟಿವ್ ಬ್ಯಾಂಕ್ ಇದರ ಭಾಂಡೂಪ್ ಪಶ್ಚಿಮದ ಸ್ಥಳಾಂತರಿತ ಶಾಖೆಯನ್ನು ಸ್ಥಳೀಯ ಸುಭಾಷ್ ನಗರದಲ್ಲಿನ ಸ್ಕಾಯ್‌ಲೈನ್ ಸ್ಪಾರ್ಕಲ್ ಕಟ್ಟಡದಲ್ಲಿ ಉದ್ಘಾಟಿಸಲಾಗಿದ್ದು, ಈ ಸಂದರ್ಭಧಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು.
Related Articles
Advertisement
ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ. ಆರ್. ಮೂಲ್ಕಿ, ನಿರ್ದೇಶಕರಾದ ಎಲ್. ವಿ. ಅಮೀನ್, ಎನ್. ಟಿ. ಪೂಜಾರಿ, ಗಂಗಾಧರ್ ಜೆ. ಪೂಜಾರಿ, ಜ್ಯೋತಿ ಕೆ. ಸುವರ್ಣ, ಭಾಸ್ಕರ್ ಎಂ. ಸಾಲ್ಯಾನ್, ಎಂ. ಎನ್. ಕರ್ಕೇರ, ಪ್ರೇಮನಾಥ್ ಪಿ. ಕೋಟ್ಯಾನ್, ಮೋಹನ್‌ದಾಸ್ ಎ. ಪೂಜಾರಿ, ಪುರುಷೋತ್ತಮ ಎಸ್. ಕೋಟ್ಯಾನ್, ಮಾಜಿ ನಿರ್ದೇಶಕರಾದ ಎನ್. ಎಂ. ಸನಿಲ್, ಎಂ. ಬಿ. ಸನಿಲ್, ಬಿಲ್ಲವರ ಧುರೀಣರುಗಳಾದ ರಾಘವ ಕೆ.ಕುಂದರ್, ಶಂಕರ್ ಪೂಜಾರಿ, ನಿವೃತ್ತ ಉನ್ನತಾಧಿಕಾರಿಗಳಾದ ಶೋಭಾ ದಯಾನಂದ್, ಸದಾನಂದ ಪೂಜಾರಿ, ನವೀನ್‌ಚಂದ್ರ ಬಂಗೇರ, ಬಿಲ್ಲವರ ಅಸೋಸಿಯೇಶನ್‌ನ ಉಪಾಧ್ಯಕ್ಷ ಹರೀಶ್ ಜಿ. ಅಮೀನ್, ಬ್ಯಾಂಕ್‌ನ ಪ್ರಧಾನ ಪ್ರಬಂಧಕ ವಿದ್ಯಾನಂದ ಎಸ್. ಕರ್ಕೇರ, ಉಪ ಪ್ರಧಾನ ಪ್ರಬಂಧಕ ಪ್ರಭಾಕರ್ ಜಿ. ಸುವರ್ಣ, ಸತೀಶ್ ಎಂ. ಬಂಗೇರ, ಪ್ರಭಾಕರ ಜಿ. ಪೂಜಾರಿ, ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಸುನೀಲ್ ಎ.ಗುಜರನ್, ವಿಜಯ್ ಪಾಲನ್, ಭಾರತ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ಕಾರ್ಯದರ್ಶಿ ದಿನೇಶ್ ಕೆ. ಸನಿಲ್, ವಿವಿಧ ಶಾಖೆಗಳ ಮುಖ್ಯಸ್ಥರು ಸೇರಿದಂತೆ ಬ್ಯಾಂಕ್‌ನ ನೂರಾರು ಗ್ರಾಹಕರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಶೇಖರ ಶಾಂತಿ ಉಳ್ಳೂರು ಅವರ ಪೌರೋಹಿತ್ಯದಲ್ಲಿ ಗಣಹೋಮ, ಸತ್ಯನಾರಾಯಣ ಮಹಾಪೂಜೆ, ವಾಸ್ತು ಪೂಜೆ, ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು. ಗೋಪಿನಾಥ್ ಜಿ. ಅಮೀನ್ ಪೂಜಾದಿಗಳಿಗೆ ಸಹಕರಿಸಿದ್ದು, ಜಯಂತ್ ಎನ್. ಪೂಜಾರಿ ಹಾಗೂ ವಿನಯ್ ಸನಿಲ್ ಮತ್ತು ಕವಿತಾ ವಿನಯ್ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದರು. ಬ್ಯಾಂಕ್‌ನ ಪ್ರಧಾನ ಪ್ರಬಂಧಕರೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ದಿನೇಶ್ ಬಿ. ಸಾಲ್ಯಾನ್ ಸ್ವಾಗತಿಸಿ ಪ್ರಸ್ತಾವನೆಗೈದರು. ಕು| ದೀಪಾಲಿ ಹೆಜ್ಮಾಡಿ ಅತಿಥಿಗಳನ್ನು ಪರಿಚಯಿಸಿದರು. ಕು| ನೇಹಾ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಶಾಖೆಯ ಮುಖ್ಯಸ್ಥ ಜಯಂತ್ ಎನ್.ಪೂಜಾರಿ ವಂದಿಸಿದರು.
ಚಿತ್ರ – ವರದಿ : ರೋನ್ಸ್ ಬಂಟ್ವಾಳ್