ಮುಂಬಯಿ: ಭಾರತ್ ಕೋ. ಆಪ ರೇಟಿವ್ ಬ್ಯಾಂಕ್ ಮುಂಬಯಿ ಲಿ.ಇದರ 40 ನೇ ಸಂಸ್ಥಾಪನಾ ದಿನಾಚರಣೆಯು ಗೋರೆಗಾಂವ್ ಪೂರ್ವದ ಭಾರತ್ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಆ. 21ರಂದು ನೆರವೇರಿತು.
ಭಾರತ್ ಬ್ಯಾಂಕಿನ ಮುಖ್ಯ ನಿರ್ವಹಣ ಅಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಸಿ. ಆರ್. ಮೂಲ್ಕಿ ಇವರು ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಕೇಕ್ ಕತ್ತರಿಸುವ ಮೂಲಕ 40ನೇ ವಾರ್ಷಿಕ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಇವರು ಪ್ರತಿ ತಿಂಗಳಿಗೆ ಹದಿನಾಲ್ಕು ಸಾವಿರ ರೂ.ಗಳನ್ನು ಖಾತೆಗೆ ಜಮೆ ಮಾಡುವುದರ ಮೂಲಕ ಐದು ಕಾಲಾ ವಧಿಯಲ್ಲಿ ದಶಲಕ್ಷಾಧಿಪತಿ ಆಗುವ ನೂತನ ಯೋಜನೆಯನ್ನು ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ಮಹಾಪ್ರಬಂಧಕ ವಿದ್ಯಾನಂದ ಎಸ್. ಕರ್ಕೇರ, ದಿನೇಶ್ ಬಿ. ಸಾಲ್ಯಾನ್, ಸುರೇಶ್ ಎಸ್. ಸಾಲ್ಯಾನ್, ತಂತ್ರಜ್ಞಾನ ಮತ್ತು ಮಾಹಿತಿ ವಿಭಾಗದ ಮುಖ್ಯ ಅಧಿಕಾರಿ ನಿತ್ಯಾನಂದ ಎಸ್. ಕಿರೋಡಿಯನ್, ಉಪ ಮಹಾಪ್ರಬಂಧಕ ಪ್ರಭಾಕರ ಜಿ. ಸುವರ್ಣ, ವಿಶ್ವನಾಥ ಜಿ. ಸುವರ್ಣ, ಮಹೇಶ್ ಬಿ. ಕೋಟ್ಯಾನ್, ಜನಾರ್ದನ ಪೂಜಾರಿ, ಸತೀಶ್ ಬಂಗೇರ, ಹಿರಿಯ ಅಧಿಕಾರಿಗಳು, ಬ್ಯಾಂಕ್ ಸಿಬಂದಿಗಳು, ಭಾರತ್ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್, ಭಾರತ್ ಬ್ಯಾಂಕ್ ಆಫೀಸರ್ ಅಸೋಸಿಯೇಶನ್, ಭಾರತ್ ಬ್ಯಾಂಕ್ ಸ್ಟಾಫ್ ವೆಲ್ಫೆàರ್‌ನ ಪದಾಧಿಕಾರಿಗಳು, ಮಾಜಿ ಮಹಾಪ್ರಬಂಧಕಿ ಶೋಭಾ ದಯಾನಂದ, ಮಾಜಿ ಪ್ರಬಂಧಕ ನವೀನ್‌ಚಂದ್ರ ಎಸ್. ಬಂಗೇರ, ಎನ್. ಜಿ. ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಪ್ರಾಯೋಜಿತ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಮುಂಬಯಿ ಲಿಮಿಟೆಡ್ ನಾಲ್ಕು ದಶಕಗಳ ಅವಿಶ್ರಾಂತ ಶ್ರಮದಿಂದ ಗ್ರಾಹಕರ ಮಿತೃತ್ವದ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರ ವಾಗಿದೆ. ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರ ದೂರಗಾಮಿ ಯೋಜನೆ, ಪಾರದರ್ಶಕ ಆಡಳಿತ ವೈಖರಿಯಿಂದ ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ರಾಜ್ಯದಾದ್ಯಂತ 102 ಶಾಖೆ ಗಳನ್ನು ಹೊಂದಿದೆ. ಎಲ್ಲಾ ಶಾಖೆಗಳಲ್ಲಿ ದಿನಾಪೂರ್ತಿ ಗ್ರಾಹಕರೊಂದಿಗೆ ಸಂಸ್ಥಾಪನಾ ದಿನಾಚರಣೆಯನ್ನು ಆಯೋ ಜಿಸಲಾಗಿದೆ. ಹದಿನೆಂಟು ಸಾವಿರ ಕೋ. ರೂ. ಮಿಕ್ಕಿ ವ್ಯವಹಾರ ವನ್ನು ಹೊಂದಿದ್ದು, ದೇಶದ ಮೇಲ್ದರ್ಜೆಯ 5 ಸಹಕಾರಿ ಬ್ಯಾಂಕ್‌ಗಳಲ್ಲಿ ಭಾರತ್ ಬ್ಯಾಂಕ್ ಒಂದಾಗಿದೆ. ಕೋರ್ ಬ್ಯಾಂಕ್, ವಿನೂತನ ಆವಿಷ್ಕಾರ, ಯೋಜನಾಬದ್ಧ ಸೇವೆಗಳಿಗೆ ಲೀಡ್ ಬ್ಯಾಂಕ್ ಎಂಬ ಖ್ಯಾತಿ ಹೊಂದಿದೆ. ಹಾಗೂ ಹಲವಾರು ಪ್ರಶಸ್ತಿಗಳಿಗೆ ಭಾಜನವಾಗಿದೆ.
ಚಿತ್ರ-ವರದಿ : ರಮೇಶ್ ಅಮೀನ್