Advertisement

ನಮ್ಮದು ನ್ಯಾಯೋಚಿತ ಹೋರಾಟ: ಕನಕ ಶ್ರೀ

04:12 PM Jan 22, 2021 | Team Udayavani |

ಭರಮಸಾಗರ: ಕುರುಬ ಸಮುದಾಯದ ಎಸ್ಟಿ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟ ಸಮಾಜದ ಕಟ್ಟಕಡೆಯ ವ್ಯಕ್ತಿಯ ಶೈಕ್ಷಣಿಕ ಮತ್ತು ಸಾಮಾಜಿಕ ನ್ಯಾಯ ಪಡೆಯುವ ನ್ಯಾಯಯುತ ಹೋರಾಟವಾಗಿದೆ ಎಂದು ಕಾಗಿನೆಲೆ ಕನಕ
ಗುರುಪೀಠದ ಶ್ರೀ ನಿರಂಜನಾಂದಪುರಿ ಸ್ವಾಮೀಜಿ ಹೇಳಿದರು.

Advertisement

ಇದನ್ನೂ ಓದಿ : ವಿಟಿಯು ಆನ್ ಲೈನ್- ಆಫ್ ಲೈನ್ ಪರೀಕ್ಷೆ ಗೊಂದಲ: ಮಹತ್ವದ ಆದೇಶ ನೀಡಿದ ಹೈಕೋರ್ಟ್

ಭರಮಸಾಗರ ಮತ್ತು ಜಗಳೂರು ತಾಲೂಕಿನ ಕುರುಬರ ಎಸ್ ಟಿ ಹೋರಾಟ ಸಮಿತಿ ವತಿಯಿಂದ ಇಲ್ಲಿನ ಸರ್ಕಾರಿ ಶಾಲಾ ಆವರಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು. ಎಸ್ಟಿ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟ ಯಾರ ವಿರುದ್ಧ ಮತ್ತು ಪರವೂ ಅಲ್ಲ. ಬೆಂಗಳೂರಿನಲ್ಲಿ ನಡೆಸುವ ಪಾದಯಾತ್ರೆ ಸಮಾರೋಪ ಸಮಾರಂಭಲ್ಲಿ 10 ಲಕ್ಷ ಜನರನ್ನು ಸೇರಿಸಿ ಕೇಂದ್ರಕ್ಕೆ ಸಮಾಜದ ಹಕ್ಕೊತ್ತಾಯವನ್ನು ತಲುಪಿಸುವ ಕೆಲಸ ಮಾಡಲಾಗುತ್ತದೆ. ಕುರುಬ ಸಮಾಜದಲ್ಲಿ ಹುಟ್ಟಿ ಸಮಾಜಕ್ಕಾಗಿ ನಾವೆಲ್ಲರೂ ಕೊಡುಗೆ ನೀಡಬೇಕು. ಪಾದಯಾತ್ರೆಗಾಗಿ ಜನರು ನೀಡುತ್ತಿರುವ ದೇಣಿಗೆ ಉಪ್ಪಿನಕಾಯಿ ಇದ್ದಂತೆ. ನಮ್ಮ ಜನರ ನಡವಳಿಕೆ ನೋಡಿದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಸ್ಟಿ ಮೀಸಲು ನೀಡುವ ವಿಶ್ವಾಸವಿದೆ ಎಂದರು.

ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಜ. 15 ರಿಂದ ಕುರುಬ ಸಮಾಜದ ದಿಕ್ಕು ಬದಲಾಗಿದೆ. ಕನಕರ ಶಂಖನಾದ ಊದಿ ನಿರಂಜನಾಂದಪುರಿ ಶ್ರೀಗಳು ಎಸ್ ಟಿ ಮೀಸಲು ಹೋರಾಟಕ್ಕೆ ಕಾಗಿನೆಲೆಯಿಂದ ಚಾಲನೆ ನೀಡಿದ್ದಾರೆ. ಬ್ರಿಟಿಷರ ಕಾಲದಲ್ಲಿ ಕುರುಬರು ಎಸ್ಟಿ ಪಟ್ಟಿಗೆ ಸೇರಿದ್ದರು.

500 ವರ್ಷಗಳ ಹಿಂದೆ ಕುರುಬರು ಗುಡ್ಡಗಾಡುಗಳಲ್ಲಿ ವಾಸಿಸುತ್ತಿದ್ದರು. ಅಲೆಮಾರಿಗಳಾಗಿ, ಸಂಚಾರಿಗಳಾಗಿ ಊರೂರು ಸುತ್ತಿದ್ದರು. ರಸ್ತೆಗಳಲ್ಲೆ ವಾಸಿಸುತ್ತಿದ್ದರು. ಸಂವಿಧಾನ ಶಿಲ್ಪಿ ಅಂಬೇಡ್ಕರ್ರವರು ಕುರುಬರನ್ನು ಎಸ್ಟಿಗೆ ಸೇರಿಸಿದ್ದರು. ಹಾಗಾಗಿ ನಾವು ಎಸ್ಟಿಗೆ ಸೇರಿಸಿನ ಎಂದು ಹೊಸದಾಗಿ ಕೇಳುತ್ತಿಲ್ಲ ಎಂದು ಹೇಳಿದರು. ದೇವರಾಜ್ ಅರಸ್, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದಾಗ ಕುರುಬರನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಲಾಯಿತು.ಆ ಎಲ್ಲಾ ಮನವಿಗಳು ಮಾಹಿತಿ ಕೊರತೆಯಿಂದ ವಾಪಸ್ ಬಂದಿವೆ. 1950ರಲ್ಲೇ ನಮಗೆ ಎಸ್ಟಿಗೆ ಸೇರ್ಪಡೆ ಆಗುವ ಅವಕಾಶ ಇತ್ತು. 23 ವರ್ಷಗಳ ಲ್ಲಿ ಎರಡು ಬಾರಿ ಕೇಂದ್ರಕ್ಕೆ ಶಿಫಾರಸು ಆದರೂ ನಮಗೆ ನ್ಯಾಯ ದೊರಕಿಲ್ಲ.ಎರಡು ಪ್ರಮುಖ ಬೇಡಿಕೆಗಳೊಂದಿಗೆ ಕಾಗಿನೆಲೆಯಿಂದ ಹೋರಾಟ ಆರಂಭಿಸಲಾಗಿದೆ. ಇಡೀ ರಾಜ್ಯದಲ್ಲಿನ ಭೋವಿ ಸಮಾಜವನ್ನು ಹನುಮಂತಯ್ಯನವರು ಕೇಂದ್ರ ಮಟ್ಟದಲ್ಲಿ ಹೋರಾಟ ನಡೆಸಿ ಎಸ್ಸಿಗೆ ಸೇರಿಸಿದರು. ಬೆಂಗಳೂರಿನಲ್ಲಿ 10 ಲಕ್ಷ ಜನ ಸೇರಿ ನಮ್ಮ ಶಕ್ತಿ ಪ್ರದರ್ಶನ ಮಾಡಿ ಎಸ್ಟಿಗೆ ಸೇರಿಸಲು ಇರುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಬೇಕುಎಂದರು.

Advertisement

ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ, ಶ್ರೀ ಕೃಷ್ಣಾನಂದ ಸ್ವಾಮೀಜಿ, ಶ್ರೀ ಪರಮಾನಂದ ಸ್ವಾಮೀಜಿ, ಶ್ರೀ ಮುರುಳೀಧರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್ಬಾಬು, ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅನಂತ್, ಜಿಪಂ ಸದಸ್ಯ ಡಿ.ವಿ.ಶರಣಪ್ಪ, ತಾಪಂ ಸದಸ್ಯ ಎನ್.ಕಲ್ಲೇಶ್, ಮುಖಂಡರಾದ ಬಿ.ಟಿ. ಜಗದೀಶ್, ರೇವಣ್ಣ, ತಿಪ್ಪೇಸ್ವಾಮಿ, ಪ್ರವೀಣ್ ಮತ್ತಿತರರು ಇದ್ದರು.

ಘೋಷಣೆ ಕೂಗಿದವಗೆ ವಾರ್ನ್!
ವೇದಿಕೆ ಮುಂಭಾಗದಲ್ಲಿ ಓರ್ವ ವ್ಯಕ್ತಿ ಕುರುಬರ ಎಸ್ಟಿ ಹೋರಾಟಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿದ. ಆಗ ನಿರಂಜನಾಂದಪುರಿ ಶ್ರೀಗಳೇ ನೇರವಾಗಿ ಆಸನದಿಂದ ಬೆತ್ತ ಹಿಡಿದು ಬಂದರು. ಘೋಷಣೆ ವ್ಯಕ್ತಿಗೆ ವಾರ್ನ್ ಮಾಡಿ ನಸುನಕ್ಕರು. ಆಗ ಇಡೀ ಸಭೆ ನಗೆಗಡಲಲ್ಲಿ ತೇಲಿತು.

ಇದನ್ನೂ ಓದಿ : ‘ಯುಪಿಎಸ್‌ ಸಿ ಹೆಚ್ಚುವರಿ ಪರೀಕ್ಷೆಗೆ ಅವಕಾಶವಿಲ್ಲ’ ಸುಪ್ರೀಂ ಕೋರ್ಟಿಗೆ ಕೇಂದ್ರ ಹೇಳಿಕೆ

Advertisement

Udayavani is now on Telegram. Click here to join our channel and stay updated with the latest news.

Next