ಭರಮಸಾಗರ: ಪ್ರಸಕ್ತ ವರ್ಷ ಬಿತ್ತನೆ ಮಾಡಿದ್ದ ಎರಡು ಬೆಳೆಗಳು ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಕೈಕೊಟ್ಟಿವೆ. ಹಾಗಾಗಿ ಇಲ್ಲೊಬ್ಬ ರೈತ ಜಮೀನಿನ ಮಾಗಿ ಉಳುಮೆ ಮಾಡುವ ಮೂಲಕ ಮುಂಬರುವ ವರ್ಷಕ್ಕೆ ಹೊಲವನ್ನು ಸಿದ್ಧಗೊಳಿಸಿಕೊಳ್ಳುವತ್ತ ಚಿತ್ತ ಹರಿಸಿದ್ದಾರೆ.
Advertisement
ಸಮೀಪದ ವಿಜಾಪುರ ಗ್ರಾಮದ ಪರಮೇಶ್ವರಪ್ಪ ಎಂಬುವವರು ಹೆದ್ದಾರಿ ಸನಿಹದಲ್ಲೇ ಇರುವ ಸುಮಾರು ಮೂರು ಎಕರೆ ಜಮೀನಿನಲ್ಲಿ ಜುಲೈ, ಆಗಸ್ಟ್ ತಿಂಗಳಲ್ಲಿ ಬಿದ್ದ ಅಲ್ಪ ಮಳೆಗೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಬಳಿಕ ಮಳೆ ಕೊರತೆ ಎದುರಾಗಿ ಮೆಕ್ಕೆಜೋಳ ಫಸಲು ತೆನೆಗಟ್ಟದೆ ಅರ್ಧಕ್ಕೆ ಬೆಳೆದು ನಷ್ಟಕ್ಕೆ ತುತ್ತಾಗಿತ್ತು.
Related Articles
Advertisement
ಇಷ್ಟೆಲ್ಲಾ ನಷ್ಟ ಹಾಗೂ ಮಳೆ ಹಿಂದೆ ಸರಿದಿರುವ ನಡುವೆ ಬೆಳೆ ನಷ್ಟವಾದ ಜಮೀನಿನಲ್ಲಿ ಮಾಗಿ ಉಳುಮೆ ಮಾಡುವ ಮೂಲಕ ಮುಂಬರುವ ವರ್ಷಕ್ಕೆ ಜಮೀನನ್ನು ಸಿದ್ಧಪಡಿಸಿಕೊಳ್ಳುವ ಮೂಲಕ ಪರಮೇಶ್ವರಪ್ಪನವರು ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ಮಳೆ ಆಶ್ರಯದ ಭೂಮಿಯೊಂದಿಗೆ ಎರಡು ಎಕರೆ ಅಡಿಕೆ ತೋಟವಿದೆ. ತೋಟ ಉಳಿಸಿಕೊಳ್ಳಲು ಬೇಸಿಗೆಯಲ್ಲಿ ನೀರಿಗೆ ಭಗೀರಥ ಪ್ರಯತ್ನ ಮಾಡಿದ್ದೇವೆ. ಈ ನಡುವೆ ಮಳೆ ಆಶ್ರಯದ ಭೂಮಿಯಲ್ಲಿ ಒಮ್ಮೆ ಬೆಳೆ ಮಳೆ ಕೊರತೆಗೆ, ಮತ್ತೂಮ್ಮೆ ಹೆಚ್ಚು ಮಳೆಯಿಂದ ನಷ್ಟಕ್ಕೆ ಒಳಗಾಗಿದೆ. ಮಾಗಿ ಮಾಡಿದರೆ ಮುಂಬರುವ ವರ್ಷದ ಬೆಳೆಗೆ ಅನುಕೂಲವಾಗುತ್ತದೆ.ಪರಮೇಶ್ವರಪ್ಪ,
ವಿಜಾಪುರ ಗ್ರಾಮದ ರೈತ