ಭರಮಸಾಗರ: ಲಕ್ಷ್ಮೀಸಾಗರ ಗ್ರಾಮದಿಂದ ಎರಡು ಕಿಮೀ ದೂರದಲ್ಲಿ ಆರು ಲಕ್ಷ ರೂ. ವ್ಯಯಿಸಿ ಸುಸಜ್ಜಿತವಾದ ಸಂತೆ ಮೈದಾನದ ವ್ಯವಸ್ಥೆ ಮಾಡಿಕೊಡಲಾಗಿದೆ. ಸಮುದಾಯ ಆರೋಗ್ಯ ಕೇಂದ್ರದ ಬಳಿ ಕಟ್ಟಿ ನಾಲ್ಕು ವರ್ಷಗಳು ಕಳೆದರೂ ಬಳಕೆಯೇ ಆಗುತ್ತಿಲ್ಲ.
Advertisement
2016-17 ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಲಕ್ಷ್ಮೀಸಾಗರ ಗ್ರಾಮದ ಸಂತೆ ಮೈದಾನವನ್ನು ಚಿತ್ರದುರ್ಗ ನಿರ್ಮಿತಿ ಕೇಂದ್ರದವರು ನಿರ್ಮಾಣ ಮಾಡಿ ಬರೋಬ್ಬರಿ ನಾಲ್ಕು ವರ್ಷಗಳೇ ಕಳೆದರೂ ಸಂತೆ ಮೈದಾನ ಉದ್ಘಾಟನೆ ಭಾಗ್ಯವನ್ನೇ ಕಂಡಿಲ್ಲ. ಗ್ರಾಮದಿಂದ ಬಹು ದೂರ ಇರುವದರಿಂದ ಬಳಕೆಗೆ ಮುಂದಾಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
Related Articles
Advertisement
ಅಧಿಕಾರಿಗಳು ಇಚ್ಚಾಶಕ್ತಿ ಪ್ರದರ್ಶಿಸಿದರೆ ಇದರ ಬಳಕೆಗೆ ಕ್ರಮ ಕೈಗೊಳ್ಳಬಹುದು ಎಂಬುದು ಸ್ಥಳೀಯ ಅಭಿಪ್ರಾಯ.
ರಸ್ತೆ ಬದಿಯಿಂದ ಸುಮಾರು 200 ಮೀಟರ್ ದೂರದ ಕಟ್ಟೆ ತಲುಪುವ ಸ್ಥಳ ತೀರ ಹದಗೆಟ್ಟಿದೆ. ಜೌಗು ಭೂಮಿ ಇದಾಗಿರುವುದರಿಂದ ಇಲ್ಲಿ ಮಳೆ ನೀರು ಬಸಿಯುತ್ತಿರುತ್ತದೆ. ಇಲ್ಲಿನ ಸ್ಥಳವನ್ನು ಅದ್ಯಾವ ಅಧಿಕಾರಿಗಳು ಇತರರು ಸೇರಿ ಆಯ್ಕೆ ಮಾಡಿದರೋ, ಇದೊಂದು ಮೇಲ್ನೋಟಕ್ಕೆ ಕಾಟಾಚಾರದ ಕಾಮಗಾರಿಯಾಗಿಬಿಟ್ಟಿದೆ. ಇದರಿಂದ ಜನರು ಕಟ್ಟಿದ ತೆರಿಗೆ ಹಣದಲ್ಲೇ ಕಟ್ಟಿದ ಇಷ್ಟೊಂದು ದೊಡ್ಡ ಮೊತ್ತದ ಕಾಮಗಾರಿಯೊಂದು ಬಳಕೆಯಿಲ್ಲದೆ ವ್ಯರ್ಥವಾಗುತ್ತಿರುವದು ಮಾತ್ರ ವಿಪರ್ಯಾಸ.