ಭಾಲ್ಕಿ: ಮಠಾಧಿಧೀಶರು, ಕಲಾವಿದರು ಸೇರಿದಂತೆ ಎಲ್ಲರೂ ಪರಿಸರ ರಕ್ಷಣೆಗೆ ಮುಂದಾಗಬೇಕಿದೆ ಎಂದು ಹುಗ್ಗೆಳ್ಳಿ ಹಿರೇಮಠದ ಶ್ರೀ ಬಸವಲಿಂಗ ದೇವರು ಕರೆ ನೀಡಿದರು.
ಖಟಕಚಿಂಚೋಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಖೀಲ ಭಾರತ ವಿದ್ಯಾರ್ಥಿ ಪರಿಷತ್ ಹಾಗೂ ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪರಿಸರ ಉಳಿದರ ಜೀವ ಸಂಕುಲ ಉಳಿಯುತ್ತದೆ. ಜೀವ ಸಂಕುಲದ ಬದುಕಿಗೆ ಪರಿಸರ ಸಂರಕ್ಷಣೆ ಅತ್ಯಗತ್ಯವಾಗಿದೆ. ಮಠಾಧೀಶರು ಪರಿಸರದ ಭಾಗವಾಗಿದ್ದಾರೆ. ಅವರು ಪ್ರತಿಯೊಂದು ಪ್ರವಚನದಲ್ಲಿ ಪರಿಸರ ರಕ್ಷಣೆಯ ಬಗ್ಗೆ ಭಕ್ತಾದಿಗಳಿಗೆ ತಿಳಿಸಬೇಕು. ಅಲ್ಲದೇ ಕಲಾವಿದರು ಮತ್ತು ಸೆಲೆಬ್ರಿಟಿಗಳು ತಾವು ಮಾಡುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಪರಿಸರ ರಕ್ಷಣೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಪರಿಸರ ವಾಹಿನಿಯ ಅಧಕ್ಷ ಶೈಲೇಂದ್ರ ಕಾವಡಿ ಮಾತನಾಡಿ, ಪರಿಸವ ಉಳಿದಲ್ಲಿ ನಾವೆಲ್ಲರೂ ಉಳಿಯುತ್ತೇವೆ. ಪರಿಸರ ನಾಶವಾದಲ್ಲಿ ನಮ್ಮ ನಾಶ ಖಂಡಿತ. ಹಾಗಾಗಿ ಪ್ರತಿಯೊಬ್ಬ ಪ್ರಜೆ ಪರಿಸರ ರಕ್ಷಣೆಯ ಬಗ್ಗೆ ಜಾಗೃತರಾಗಬೇಕು. ದಿನೆ ದಿನೆ ಪರಿಸರ ನಾಶದಿಂದ ಮಳೆಯ ಅಭಾವ, ಬರಗಾಲ, ಕುಡಿಯುವ ನೀರಿಗಾಗಿ ಹಾಹಾಕಾರ ಕಾಣುತ್ತಿದ್ದೇವೆ. ಈಗಲಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಯ ಗತಿ ಏನು, ಎನ್ನುವ ಪ್ರಶ್ನೆ ಕಾಡುತ್ತಿದೆ. ಪ್ರತಿಯೊಬ್ಬರೂ ಜಾಗ್ರತರಾಗಿ ಪರಿಸರವನ್ನು ತಾಯಿಯಂತೆ ಪೋಷಿಸೋಣ. ಎಲ್ಲ ಶುಭಸಮಾರಂಭಗಳಲ್ಲಿ ಉಡುಗೊರೆಯಾಗಿ ಸಸಿ ನೀಡುವುದರ ಮೂಲಕ ಪರಿಸರ ಬೆಳೆಸೋಣ ಎಂದು ಹೇಳಿದರು.
ವಲಯ ಅರಣ್ಯಾಧಿಕಾರಿ ಪ್ರಕಾಶ ನಿಪ್ಪಾಣಿ ಮಾತನಾಡಿ, ಅರಣ್ಯ ಇಲಾಖೆಯಡಿ ಪ್ರತಿ ವರ್ಷ ಸಾವಿರಾರು ಗಿಡಗಳನ್ನು ನೆಡುತ್ತಿದ್ದೆವೆ. ಆದರೆ ಅವುಗಳನ್ನು ಪೋಷಿಸಲಾಗುತ್ತಿಲ್ಲ. ಅದಕ್ಕೆ ಸಾರ್ವಜನಿಕರ ನೆರವು ಅಗತ್ಯ. ಪ್ರತಿಯೊಬ್ಬರೂ ಪರಿಸರ ರಕ್ಷಣೆಗೆ ಮುಂದಾದಲ್ಲಿ ಮಾತ್ರ ಪರಿಸರ ಉಳಿಸಿ ಬೆಳೆಸಲು ಸಾಧ್ಯ. ಈ ನಿಟ್ಟಿನಲ್ಲಿ ಇಲಾಖೆಯಡಿ ಅನೇಕ ಜಾಗ್ರತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಶಂಕರಯ್ನಾ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಬಿವಿಪಿ ರಾಜ್ಯಸಹ ಕಾರ್ಯದರ್ಶಿ ರೇವಣಸಿದ್ದ ಜಾಡರ ಪ್ರಾಸ್ತವಿಕವಾಗಿ ಮಾತನಾಡಿದರು. ಮಾತೋಶ್ರಿ ಗೋದಾವರಿತಾಯಿ, ಜಿಲ್ಲಾ ಪಂಚಾಯತ ಸದಸ್ಯ ರವಿರಡ್ಡಿ ಕೋತ್ತುರ, ಪಿಎಸ್‌ಐ ಸುದರ್ಶನ ರೆಡ್ಡಿ, ಉಪ ಅರಣ್ಯವಲಯಾಧಿಕಾರಿ ಸಂಜೀವ, ಅರಣ್ಯ ರಕ್ಷಕ ಶಿವಾನಂದ, ಶಣ್ಮುಖಯ್ನಾ ಬಾಳೆಮಠ, ಮುಖ್ಯಶಿಕ್ಷಕಿ ಗಂಗಮ್ಮಾ ಬೀರಾದಾರ, ಎಸ್‌ಡಿಎಂಸಿ ಅಧ್ಯಕ್ಷ ವಿಜಯಕುಮಾರ ಅಜ್ಜಾ, ಉಮೇಶ ತೆಲಂಗ, ದಶವಂತ ಡಾವರಗೆ, ಶಿವಪ್ಪಾ ದಿಂಡೆ, ಪ್ರದಿಪ ಉಂಬರಗೆ, ಸಾಗರ ಸಂಗೂಳಗೆ, ಗುಂಡು ಜ್ಯಾಶೆಟ್ಟೆ, ಆನಂದ ತಂಬಾಳೆ, ನಾಗರಾಜ ಶೀಲವಂತ, ಅಮಿತ, ಸುಮಿತ, ಗಣೇಶ ಉಪಸ್ಥಿರಿದ್ದರು. ರಕ್ಷಿತಾ ಸ್ವಾಗತ ಗೀತೆ ಹಾಡಿದರು. ನೇಹರು ಮುಗನೂರ ಸ್ವಾಗತಿಸಿದರು. ಮಂಜುಳಾ ನಿರೂಪಿಸಿದರು. ದೇವಿದಾಸ ಮೆತ್ರೆ ವಂದಿಸಿದರು.