Advertisement

ಸ್ಥಳಾವಕಾಶ ಇರುವೆಡೆ ಸಸಿ ನೆಡಿ

03:48 PM Sep 04, 2019 | Team Udayavani |

ಭಾಲ್ಕಿ: ಪರಿಸರ ಅಸಮತೋಲನದಿಂದ ಕೆಲವು ಕಡೆ ಅತಿವೃಷ್ಟಿ ಇನ್ನು ಕೆಲವು ಕಡೆ ಅನಾವೃಷ್ಟಿ ಉಂಟಾಗುತ್ತಿದೆ. ಇದರಿಂದ ಜನಜೀವನ ಕಷ್ಟಮಯವಾಗಿದ್ದು, ಪರಿಸರ ಸಮತೋಲನ ಕಾಯ್ದುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.

Advertisement

ಭಾಗ್ಯನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವನ ಮಹೋತ್ಸವ ಮತ್ತು ಸೈಕಲ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ಸಂರಕ್ಷಣೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಸ್ಥಳಾವಕಾಶ ಇದ್ದಕಡೆ ಸಸಿಗಳನ್ನು ನೆಟ್ಟು ಕಾಪಾಡುವ ಕಾರ್ಯ ನಮ್ಮದಾಗಿದೆ. ಭಾಗ್ಯನಗರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸುಂದರವಾದ ತೋಟ ನಿರ್ಮಿಸಿ, ಉತ್ತಮ ಪರಿಸರ ನಿರ್ಮಾಣ ಮಾಡಿರುವುದು ಮೆಚ್ಚುವಂತಹ ಕಾರ್ಯವಾಗಿದೆ ಎಂದರು.

ವಿದ್ಯಾರ್ಥಿಗಳು ಸರ್ಕಾರದಿಂದ ಕೊಡುವ ಸೈಕಲ್ಗಳ ಸದ್ಬಳಕೆ ಮಾಡಿಕೊಳ್ಳಬೇಕು. ಗ್ರಾಮದ ಮಧ್ಯಭಾಗದಲ್ಲಿ ಸ್ಥಳಾವಕಾಶ ಇಲ್ಲದ ಕಾರಣ ಪ್ರತಿಯೊಂದು ಗ್ರಾಮಗಳ ಹೊರವಲಯದಲ್ಲಿ ಸರ್ಕಾರಿ ಶಾಲೆಗಳನ್ನು ಕಟ್ಟಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಶಾಲೆಗೆ ಸರಿಯಾದ ಸಮಯಕ್ಕೆ ಆಗಮಿಸಲು ಉಚಿತ ಸೈಕಲ್ ನೀಡಲಾಗುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೈಲಾರ ಮಲ್ಲಣ್ಣಾ ದೇವಸ್ಥಾನದ ಟ್ರಸ್ಟಿ ಕೆ.ಡಿ.ಗಣೇಶ ಮಾತನಾಡಿ, ಭಾಗ್ಯನಗರ ಗ್ರಾಮದ ಎಲ್ಲಾ ಜನರು ಒಗ್ಗಟ್ಟಿನಿಂದ ಎಲ್ಲ ಕಾರ್ಯ ಮಾಡುವುದರಿಂದ ತಾಲೂಕಿನಲ್ಲಿಯೇ ಈ ಗ್ರಾಮ ಮಾದರಿ ಗ್ರಾಮವಾಗಿ ನಿರ್ಮಾಣವಾಗಿದೆ. ಇದಕ್ಕೆ ಶಾಸಕರ ಸಹಕಾರ ಮತ್ತು ಸಹಾಯ ತುಂಬಾ ಇದೆ. ಇನ್ನು ಮುಂದೆಯೂ ಶಾಸಕರು ಈ ಗ್ರಾಮಕ್ಕೆ ಇದೇರೀತಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

Advertisement

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತ ಚಿದ್ರಿ ಮಾತನಾಡಿ, ಶಾಲೆಗೆ ಬೇಕಾಗುವ ಸೌಕರ್ಯವನ್ನು ಜಿಲ್ಲಾ ಪಂಚಾಯಿತಿಯಿಂದ ಕಲ್ಪಿಸಲಾಗುವುದು. ಸರಕಾರ ವಿದ್ಯಾರ್ಥಿಗಳಿಗೆ ನೀಡುವ ಸೈಕಲ್ ಸದ್ಬಳಕೆಯಾದಾಗ ಸರಕಾರದ ಯೋಜನೆ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷೆ ಅಂಜಲಿ ಗಣೇಶ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯಶಿಕ್ಷಕ ಷಡಕ್ಷರಿ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ, ಶಿಕ್ಷಣ ಸಂಯೋಜಕ ನಾಗಭೂಷಣ ಮಾಮಡಿ, ದೈಹಿಕ ಶಿಕ್ಷಣಾಧಿಕಾರಿ ನಾಗನಾಥ ದುಬಳಗುಂಡೆ, ಭೀಮರಾವ್‌ ಪಾಟೀಲ ಕುಂಟೆಸಿರ್ಸಿ, ಪಂಡಿತ ಬಿರಾದಾರ, ಮಾರುತಿ ಬಂಗಾರೆ, ಲೋಕೇಶ ಕುಮಾರಚಿಂಚೋಳಿ, ದತ್ತು ಮುದಾಳೆ, ವೆಂಕಟ ಹಿಪ್ಪಳಗಾಂವೆ, ಶ್ರೀನಿವಾಸ ಹೀಲಾಲಪೂರೆ, ಗೋಕರ್ಣ ಬಿರಾದಾ, ಖಾಜಾ ಪಟೇಲ, ಮಲ್ಲಿಕಾರ್ಜುನ ಮೊಳಕೇರೆ, ಮಲ್ಲಿಕಾರ್ಜುನ ಮೇತ್ರೆ, ಬಲಭೀಮ ಮೆಹಕರ್‌, ಮಲ್ಲಿಕಾರ್ಜುನ ಮುದಾಳೆ ಉಪಸ್ಥಿತರಿದ್ದರು. ಶಿಕ್ಷಕ ಸಂಜೀವಕುಮಾರ ಸೊನಕಾಂಬಳೆ ಸ್ವಾಗತಿಸಿದರು. ಶಿಕ್ಷಕಿ ಸುಮಾವತಿ ನಿರೂಪಿಸಿದರು. ಕಮಲಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next