Advertisement

ಮಾನವಂತ ಬದುಕಿಗೆ ಹೃದಯ ವೈಶಾಲ್ಯ ಬೇಕು

02:51 PM Apr 14, 2019 | Naveen |

ಭಾಲ್ಕಿ: ಮನುಷ್ಯ ಸದಾಕಾಲ ಮಾನವಂತನಾಗಿ ಬದುಕಲು ಅಪೇಕ್ಷಿಸುತ್ತಾನೆ. ಮಾನವಂತನಾಗಿ ಬದುಕಬೇಕಾದರೆ ಹೃದಯ ವೈಶಾಲ್ಯತೆ ಹೊಂದಿರಬೇಕು ಎಂದು ಚಿದಂಬರಾಶ್ರಮ ಬೀದರಿನ ಡಾ|ಶಿವಕುಮಾರ ಸ್ವಾಮಿಗಳು ಹೇಳಿದರು.

Advertisement

ಚಳಕಾಪೂರ ಗ್ರಾಮದ ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ಧಾರೂಢ ಮಠದಲ್ಲಿ ನಡೆದ ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ 183ನೇ ಜಯಂತಿ ಮಹೋತ್ಸವದ 6ನೇ ದಿನದ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಎಲ್ಲರೂ ಮಾನವಂತರಾಗಿ ಬದಕಬೇಕು ಎನ್ನುವ ಆಶಯ ಹೊಂದಿರುತ್ತಾರೆ. ಆದರೆ ಕೆಲವರು ಮಾನಕ್ಕಿಂತ ಮುಖ್ಯ ಧನಕ್ಕೆ ಆದ್ಯತೆ ಕೊಡುತ್ತಾರೆ.

ಇಂಥವರಿಗೆ ಶಾಸ್ತ್ರದಲ್ಲಿ ಅಧಮರು ಎನ್ನುವರು. ಇನ್ನೂ ಕೆಲವರು ಎಲ್ಲವನ್ನೂ ಕಳೆದುಕೊಂಡರೂ ಮಾನ ಕಳೆದುಕೊಳ್ಳುವುದಿಲ್ಲ. ಇಂತಹವರು ಶ್ರೇಷ್ಠರು. ಸತ್ಯ ಹರಿಶ್ಚಂದ್ರ ಮಹಾರಾಜ ತನ್ನ ಮಾನಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ಉದಾಹರಣೆ ನಮ್ಮ ಮುಂದಿದೆ. ನಾವು ಧರಿಸುವ ವಸ್ತ್ರ, ಪರಿಶುದ್ಧ ಶರೀರ, ಉತ್ತಮ ಮನಸ್ಸು, ನಮ್ಮಲ್ಲಿರುವ ವಿದ್ಯೆ ಇವೆಲ್ಲವೂ ನಮ್ಮನ್ನು ಮಾನವಂತರಾಗಿ ಬದುಕಲು ಸಹಕಾರಿಯಾಗಿವೆ ಎಂದು ಹೇಳಿದರು.

ಮುಚಳಂಬಿಯ ನಾಗಭೂಷಣ ಶಿವಯೋಗಿ ಮಠದ ಶ್ರೀ ಪ್ರಣವಾನಂದ ಮಹಾಸ್ವಾಮಿಗಳು ಮಾತನಾಡಿ, ಗೌರವ ನಮ್ಮ ವ್ಯಕ್ತಿತ್ವವನ್ನು ಆಶ್ರಯಿಸಿದೆ. ಮನಸ್ಸು ಸ್ವಚ್ಚವಾಗಿದ್ದು, ಹೃದಯ
ವೈಶಾಲತೆ ಹೊಂದಿದ್ದರೆ ನಮಗೆ ಗೌರವ ಸಿಗುತ್ತದೆ ಎಂದು ಹೇಳಿದರು.

ಜಡಿಸಿದ್ಧ ಮಹಾಸ್ವಾಮಿಗಳು, ಶ್ರದ್ಧಾನಂದ ಸ್ವಾಮಿಗಳು, ಗುರುಲಿಂಗ ಸ್ವಾಮಿಗಳು, ಶಂಕರಾನಂದ ಸ್ವಾಮಿಗಳು, ಡಾ|ಸ್ವರೂಪಾನಂದ ಸ್ವಾಮಿಗಳು, ದಯಾನಂದ ಸ್ವಾಮಿಗಳು, ಅದ್ವೈತಾನಂದ ಸ್ವಾಮಿಗಳು, ಪರಮಾನಂದ ಸ್ವಾಮಿಗಳು, ಸೋಮೇಶ್ವರಾನಂದ ಸ್ವಾಮಿಗಳು, ಸದ್ರೂಪಾನಂದ ಸ್ವಾಮಿಗಳು, ಮಾತೋಶ್ರೀ ಲಕ್ಷ್ಮೀದೇವಿತಾಯಿ, ಮಾತೋಶ್ರೀ ಸಿದ್ದೇಶ್ವರಿ ತಾಯಿ, ಮಾತೋಶ್ರೀ ಆನಂದಮಯಿತಾಯಿ, ಸುಶಾಂತಾ ತಾಯಿ, ಶಶಿಕಲಾ ತಾಯಿ, ವಿದ್ಯಾವತಿ ತಾಯಿ ಪ್ರಸ್ತುತ ವಿಷಯ ಕುರಿತು ಮಾತನಾಡಿದರು.

Advertisement

ಇದೇ ವೇಳೇ ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಮೂರ್ತಿ ತುಲಾಭಾರ, ಸದ್ಗುರು ಶ್ರೀ ಶಿವಕುಮಾರ ಮಹಾಸ್ವಾಮಿಗಳ ತುಲಾಭಾರ ಸೇವೆ ಹಾಗೂ ವೈಭವ ಆರತಿ ಪೂಜೆ ನಡೆಯಿತು. ಬೆಳಗ್ಗೆ ಸಾವಿರಾರು ಭಕ್ತಾದಿಗಳಿಂದ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಸಾಮೂಹಿಕ ಗ್ರಂಥ ಪಾರಾಯಣ ನಡೆಯಿತು. ಮತ್ತು ವಿವಿಧ ಸಂಗೀತ ಕಲಾವಿದರಿಂದ ಸಂಗೀತ ಸೇವೆ ನಡೆಯಿತು. ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಶ್ರೀಮಠದಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಂಜು ಐಹೊಳೆ, ಜೈಶ್ರೀ ಶಿವರಾಜ ಭೀಮಶೆಟ್ಟಿ, ಕಸಾಪ ಮಾಜಿ ಅಧ್ಯಕ್ಷ ವಸಂತ ಹುಣಸನಾಳೆ, ವಿಜಯಕುಮಾರ ಗೌಡಗಾವೆ, ವೈಜಿನಾಥಪ್ಪ ದಾಬಶೆಟ್ಟೆ, ಡಾ| ಬಸವರಾಜ ಎಲ್ಲಡಗಿ, ನಾಗಯ್ನಾ ಸ್ವಾಮಿ, ಮಠ್ ಸೋಮಯ್ನಾ, ಚಿದಂಬರ ಶಿಕ್ಷಣ ಸಂಸ್ಥೆಯ ನಿರ್ದೇಶ ಶಿವಶರಣಪ್ಪಾ ಸಾವಳಗಿ, ರಮೇಶ ಮಠಪತಿ ಉಪಸ್ಥಿತರಿದ್ದರು. ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ಧಾರೂಢ ಮಠ ಚಳಕಾಪೂರದ ಶ್ರೀ ಶಂಕರಾನಂದ ಮಹಾಸ್ವಾಮಿಗಳು ಸ್ವಾಗತಿಸಿದರು. ಶ್ರೀ ಗಣೇಶಾನಂದ ಮಹಾರಾಜರು ನಿರೂಪಿಸಿದರು. ಹುಮನಾಪಾದಿನ ಪ್ರಾಂಶುಪಾಲ ಶಿವಾನಂದ ಮಠಪತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next