Advertisement

ಕಾಯಕ-ದಾಸೋಹ ಶರಣರ ಕೊಡುಗೆ: ಶ್ರೀ ಪ್ರಭುದೇವರು

11:56 AM Feb 15, 2020 | Naveen |

ಭಾಲ್ಕಿ: ನಡೆ-ನುಡಿ ಒಂದಾಗಿಸಿಕೊಂಡ ಬಸವಾದಿ ಶರಣರು 12ನೇ ಶತಮಾನದಲ್ಲಿ ಪ್ರತಿಪಾದಿಸಿದ ಕಾಯಕ ಮತ್ತು ದಾಸೋಹ ಮೌಲ್ಯ ಜಗತ್ತಿಗೆ ನೀಡಿದ ದೊಡ್ಡ ಕೊಡುಗೆಯಾಗಿದೆ ಎಂದು ಶ್ರೀ ಪ್ರಭುದೇವರು ಹೇಳಿದರು.

Advertisement

ಬಸವಕಲ್ಯಾಣ ತಾಲೂಕಿನ ಗೋರ್ಟಾ (ಬಿ) ಗ್ರಾಮದ ಲಿಂಗಾಯತ ಮಹಾಮಠದಲ್ಲಿ ಆಯೋಜಿಸಿದ್ದ ಶರಣ ಸಂಗಮ ಮತ್ತು ಯೋಗ ಶಿವಯೋಗ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಸಶಕ್ತ ಸಮಾಜವನ್ನು ಸತ್ಯ-ಶುದ್ಧ ಕಾಯಕದಿಂದ ಮಾತ್ರ ಕಟ್ಟಬಹುದಾಗಿದೆ ಎನ್ನುವ ವಾಸ್ತವ ಅರಿತ ಶರಣರು ಲಿಂಗ ಪೂಜೆಗಿಂತ ಕಾಯಕಕ್ಕೆ ಮಹತ್ವ ನೀಡಿದ್ದರು ಎಂದರು.

ಬಸವಕಲ್ಯಾಣದ ನಗರಸಭೆ ಮಾಜಿ ಸದಸ್ಯ ರವಿಂದ್ರ ಕೊಳಕೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಬೇರು ಬಿಟ್ಟಿದ್ದ ಮೂಢನಂಬಿಕೆ, ಅಂಧಶ್ರದ್ಧೆಗಳನ್ನು ಬೇರು ಸಮೇತ ಕಿತ್ತೂಗೆದರು. ಜಗತ್ತಿನಲ್ಲಿಯೇ ಸ್ತ್ರೀಯರಿಗೆ ಸಮಾನತೆ ತಂದು ಕೊಟ್ಟ ಶ್ರೇಯಸ್ಸು ಬಸವಣ್ಣಗೆ ಸಲ್ಲುತ್ತದೆ ಎಂದರು.

ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯದ ಪ್ರೊ| ಗೀತಾ ಪಾಟೀಲ್‌ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಕಲಿಸುವ ಜೊತೆಗೆ ಸಂಸ್ಕಾರ ಕಲಿಸುವುದು ಅಗತ್ಯ. ಇಂದಿನ ಸಮಾಜದಲ್ಲಿ ಅಕ್ಷರಸ್ಥರಿಂದಲೇ ಅನ್ಯಾಯ, ಮೋಸ ವಂಚನೆ ನಡೆಯುತ್ತಿವೆ. ಸುಂದರ ಸಮಾಜ ನಿರ್ಮಾಣಕ್ಕೆ ಇಂಥ ಶರಣ ಸಂಗಮದಂಥ ಧಾರ್ಮಿಕ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದರು.

ಭಾಲ್ಕಿಯ ಮಹಿಳಾ ಕದಳಿ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ ಶಿವಯೋಗ ಕುರಿತು ಮಾತನಾಡಿ, ಮನುಷ್ಯ ಒತ್ತಡಗಳ ನಡುವೆ ಜೀವನ ಸಾಗಿಸುತ್ತಿದ್ದಾನೆ. ಒತ್ತಡಗಳಿಂದ ಪಾರಾಗಬೇಕಾದರೆ ಶಿವಯೋಗ ಅಗತ್ಯ ಎಂದರು.

Advertisement

ಭಾಲ್ಕಿ ಶಿವಾಜಿ ಕಾಲೇಜಿನ ಪ್ರಾಚಾರ್ಯ ಚಂದ್ರಕಾಂತ ಬಿರಾದಾರ ಮಾತನಾಡಿದರು. ನಾಗರಾಜ ಮಡಿವಾಳಪ್ಪ ಮಾಶೆಟ್ಟೆ ಅಧ್ಯಕ್ಷತೆ ವಹಿಸಿದರು. ಕೌಠಾದ ಸಚ್ಚಿದಾನಂದ ಕೆಸರೊಟ್ಟೆ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.

ಪ್ರಕೃತಿ, ಸಂಗಮೇಶ ಗುರುಪೂಜೆ ನೆರವೇರಿಸಿದರು. ಶಿವಾನಂದ ಗುರಪ್ಪ ಹತ್ತೆ ಭಕ್ತಿ ದಾಸೋಹ ವಹಿಸಿದ್ದರು. ಚನ್ನಬಸಪ್ಪ ಪತಂಗೆ, ಗುರುಣ್ಣ ಹತ್ತೆ, ಬಾಬುರಾವ್‌ ರಾಜೋಳೆ, ಸೋಮನಾಥ ರಾಜೋಳೆ, ಶಿವಪುತ್ರಪ್ಪ ಕಣಜೆ, ಸುಭಾಷ ಪತಂಗೆ, ಈಶ್ವರ ಕಣಜೆ, ಬಾಬುರಾವ್‌ ಪಟೆ° ಇದ್ದರು. ಲೋಕೇಶ ವರವಟ್ಟೆ ನಿರೂಪಿಸಿದರು.

ಬಸವಣ್ಣನವರು ಎಲ್ಲ ಕಾಯಕ ಶರಣರನ್ನು ಒಟ್ಟಿಗೆ ಸೇರಿಸಿ ಅವರಲ್ಲಿಯ ಮೇಲು-ಕೀಳು ಭಾವ ಅಳಿಸಿ ಕಾಯಕಕ್ಕೆ ಮಹತ್ತರದ ಸ್ಥಾನ ತಂದುಕೊಟ್ಟರು. ಅಂತಹ ಶರಣರ ಆದರ್ಶ ಮೌಲ್ಯಗಳನ್ನು ಇಂದಿನ ಸಮಾಜ ಮೈಗೂಡಿಸಿಕೊಳ್ಳಬೇಕಾಗಿದೆ.
ಶ್ರೀ ಪ್ರಭುದೇವರು

Advertisement

Udayavani is now on Telegram. Click here to join our channel and stay updated with the latest news.

Next