Advertisement
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶನಿವಾರ ನೂತನ ನ್ಯಾಯಾಲಯದ ಕಟ್ಟಡದ ಅಡಿಗಲ್ಲು ಸಮಾರಂಭ ನೆರವೇರಿಸಿ ಅವರು ಮಾತನಾಡಿದರು. 10 ವರ್ಷ ಹಳೆಯ ಎಲ್ಲ ಪ್ರಕರಣಗಳನ್ನು 2019ರ ನವೆಂಬರ್ ಒಳಗಾಗಿ ಮುಗಿಸಲು ಎಲ್ಲ ಜಿಲ್ಲಾ ನ್ಯಾಯಾಲಯಗಳಿಗೆ ಸೂಚಿಸಲಾಗಿದೆ. ತುಂಬಾ ಹಳೆಯದಾಗಿರುವ ಪ್ರಕರಣಗಳನ್ನು ಮುಕ್ತಾಯಗೊಳಿಸಲು ರಾಷ್ಟ್ರೀಯ ಲೋಕ ಅದಾಲತ್‌ಗಳನ್ನು ನಡೆಸಲಾಗುತ್ತಿದೆ ಎಂದರು.
Related Articles
Advertisement
ನೂತನ ಕಟ್ಟಡದ ನಿರ್ಮಾಣದೊಂದಿಗೆ ವಕೀಲರ ಸಂಘದ ಪದಾಧಿಕಾರಿಗಳ ಜವಾಬ್ದಾರಿ ಕೂಡ ಹೆಚ್ಚಲಿದೆ. ಅವರು ಮತ್ತಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವ ಮೂಲಕ ಸಾಮಾನ್ಯ ಜನರಿಗೆ ವೇಗವಾಗಿ ಪ್ರಾಮಾಣಿಕ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕಾಗುತ್ತದೆ ಎಂದರು.
ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಹಾಗೂ ಹೈಕೋರ್ಟ್ ನ್ಯಾಯಮೂರ್ತಿ ಶಂಕರ ಗಣಪತಿ ಪಂಡಿತ ಮಾತನಾಡಿದರು. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರೇಮಾವತಿ ಮನಗೂಳಿ, ಹಿರಿಯ ಶ್ರೇಣಿ ನ್ಯಾಯಾಧೀಶ ಎಂ.ಮಲ್ಲಪ್ಪ, ಕಿರಿಯ ಶ್ರೇಣಿ ನ್ಯಾಯಾ ಧೀಶ ಈಶ್ವರ, ನ್ಯಾಯಮೂರ್ತಿ ಟಿ.ಪಿ. ಸಿದ್ರಾಮ, ನ್ಯಾಯಮೂರ್ತಿ ಶೇಷಾನಂದ, ನ್ಯಾಯಮೂರ್ತಿ ಶಿವಾನಂದ, ನ್ಯಾಯಮೂರ್ತಿ ಯಮುನಪ್ಪ, ಮಾಜಿ ಸಚಿವ ಭೀಮಣ್ಣ ಖಂಡ್ರೆ, ಕೇಶವರಾವ್ ನಿಟ್ಟೂರಕರ, ರಾಜಶೇಖರ ಅಷ್ಟೂರೆ, ವಕೀಲ ಸಂಘದ ಉಪಾಧ್ಯಕ್ಷ ರಾಹುಲ್ ಸಾವಳೆ, ಉಮಾಕಾಂತ ವಾರದ, ಸುರೇಶ ಬಿರಾದಾರ, ನ್ಯಾಯವಾದಿ ಶಿವಪುತ್ರ ದಾಬಶೆಟ್ಟಿ, ಓಂಕಾರ ಪಾಟೀಲ ಇದ್ದರು.
ವಕೀಲರ ಸಂಘದ ಅಧ್ಯಕ್ಷ ಎನ್.ಬಿ. ಪಾಟೀಲ ಸ್ವಾಗತಿಸಿದರು. ಬಾಬುರಾವ್ ಗಾಮಾ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಮಹೇಶ ರಾಚೋಟೆ ವಂದಿಸಿದರು.