Advertisement

ಆತ್ಮ ವಿಶ್ವಾಸದ ಅಧ್ಯಯನ ಸಾಧನೆಗೆ ಸಹಕಾರಿ: ಪಟ್ಟದ್ದೇವರು

04:46 PM Apr 18, 2019 | Team Udayavani |

ಭಾಲ್ಕಿ: ವಿದ್ಯಾರ್ಥಿಗಳು ಆತ್ಮವಿಶ್ವಾಸ, ಧನಾತ್ಮಕ
ಮನೋಭಾವದಿಂದ ಅಧ್ಯಯನ ಮಾಡಿದಲ್ಲಿ ಎತ್ತರದ ಸಾಧನೆ
ಸುಲಭವಾಗಿ ಮಾಡಬಹುದು ಎಂದು ಅನುಭವ ಮಂಟಪದ
ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.

Advertisement

ತಾಲೂಕಿನ ಕರಡ್ಯಾಳ ಗ್ರಾಮದ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಕಾಲೇಜಿನಲ್ಲಿ ಪಿಯು ಪರೀಕ್ಷೆ ಗಣಿತ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ವ್ಯರ್ಥವಾಗಿ ಸಮಯ ಹಾಳು ಮಾಡದೆ
ಜೀವನದಲ್ಲಿ ಇಟ್ಟುಕೊಂಡು ಗುರಿಯನ್ನು ಸಾ ಧಿಸಲು
ಅವಿರತವಾಗಿ ಶ್ರಮಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಪಠ್ಯ ವಿಷಯವನ್ನು ಆಸಕ್ತಿಯಿಂದ ಓದಬೇಕು ಎಂದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕ್ಲಿಷ್ಟಕರ ವಿಷಯವಾದ
ಗಣಿತದಲ್ಲಿ ಪ್ರತಿಶತ ಅಂಕ ಪಡೆದಿರುವುದು ಹೆಮ್ಮೆಯ ಸಂಗತಿ.
ಸಾ ಧಿಸುವ ಛಲವುಳ್ಳವರಿಗೆ ಎಲ್ಲವೂ ಸಾಧ್ಯ ಎನ್ನುವುದಕ್ಕೆ ಈ
ವಿದ್ಯಾರ್ಥಿಗಳ ಸಾಧನೆಯೇ ತಾಜಾ ಉದಾಹರಣೆ ಎಂದು ಹೇಳಿದರು.

ವಿದ್ಯಾರ್ಥಿಗಳಾದ ಮಹೇಶ ತಪಸ್ಯಾಳೆ, ಆಶೀಶ ಶಿವರಾಜ,
ರಕ್ಷಿತ ಕುಲಕರ್ಣಿ, ಕಿಶೋರ ಜನಾರ್ಧನ ಗಣಿತ ವಿಷಯದಲ್ಲಿ
100ಕ್ಕೆ 100, ರಸಾಯನ ವಿಜ್ಞಾನದಲ್ಲಿ ಸೌಂದರ್ಯ ಭಾಲ್ಕೆ
ಪ್ರತಿಶತ ಅಂಕ ಪಡೆದುದ್ದಕ್ಕಾಗಿ ಸನ್ಮಾನಕ್ಕೆ ಭಾಜನರಾದರು.
ಕಾರ್ಯಕ್ರಮದಲ್ಲಿ ಬಸವಲಿಂಗ ಸ್ವಾಮೀಜಿ, ಪ್ರಾಚಾರ್ಯ
ಬಸವರಾಜ ಮೊಳಕೀರೆ, ಸಂಯೋಜಕ ರವಿ ಬಿರಾದರ,
ಹಣಮಂತ ಜ್ಯಾಂತಿಕರ್‌, ಲಕ್ಷ್ಮೀ ಕಾಂತ, ಸುಭಾಷ ಪೂಜಾರಿ,
ಸಂಗಪ್ಪ ಸೊಲಮಲ್‌, ಶಿವಪ್ರಕಾಶ ಕುಂಬಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next