Advertisement

ಪ್ರತಿಭೆಗೆ ಹಳ್ಳಿ-ಪಟ್ಟಣವೆಂಬ ಭೇದವಿಲ್ಲ

10:37 AM Jun 07, 2019 | Team Udayavani |

ಭಾಲ್ಕಿ: ಸಾಧನೆ ಮಾಡಬೇಕು ಎನ್ನುವ ಛಲವಿದ್ದಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬಹುದು. ಪ್ರತಿಭೆಗೆ ಹಳ್ಳಿ-ಪಟ್ಟಣ ಎಂಬ ಭೇದವಿಲ್ಲ ಎಂದು ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.

Advertisement

ಕರಡ್ಯಾಳ ಗ್ರಾಮದ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಕಾಲೇಜಿನಲ್ಲಿ ನೀಟ್ ಪರೀಕ್ಷೆಯಲ್ಲಿ 952ನೇ ರ್‍ಯಾಂಕ್‌ ಪಡೆದ ವಿದ್ಯಾರ್ಥಿ ಶಾಮ್‌ ಕಲ್ಯಾಣರಾವ್‌ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ನಿರಂತರ ಅಧ್ಯಯನ ಸಾಧನೆಗೆ ಸಹಕಾರಿ. ಹಾಗಾಗಿ ವಿದ್ಯಾರ್ಥಿಗಳು ಸಮಯವನ್ನು ಗೌರವಿಸಬೇಕು. ವಿದ್ಯಾರ್ಥಿಗಳ ಎತ್ತರದ ಸಾಧನೆಯಲ್ಲಿ ಉಪನ್ಯಾಸಕರ ಮಾರ್ಗದರ್ಶನ, ಸಹಕಾರ ಮಹತ್ವದ ಪಾತ್ರ ವಹಿಸುತ್ತದೆ. ಶಿಕ್ಷಕರು ವಿದ್ಯಾರ್ಥಿಗಳ ಸಣ್ಣ ಸಾಧನೆಗೂ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು ಎಂದು ಕಿವಿಮಾತು ಹೇಳಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಪಡೆಯಲು ವಿಷಯದ ಆಳವಾದ ಜ್ಞಾನ ಅಗತ್ಯ. ವಿವಿಧ ಮೂಲಗಳಿಂದ ಜ್ಞಾನ ಸಂಗ್ರಹಿಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಬೇಕು ಎಂದು ಹೇಳಿದರು.

ವಿದ್ಯಾರ್ಥಿ ಶಾಮ್‌ ಕಲ್ಯಾಣರಾವ್‌ ಮಾತನಾಡಿ, ಪ್ರತಿನಿತ್ಯ 6 ಗಂಟೆ ತುಂಬಾ ಏಕಾಗ್ರತೆ, ಆಸಕ್ತಿಯಿಂದ ಓದುತ್ತಿದ್ದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಎಲ್ಲ ಮ್ಯಾಗಜಿನ್‌, ಪುಸ್ತಕಗಳನ್ನು ಆಳವಾಗಿ ಅಭ್ಯಸಿಸುತ್ತಿದ್ದೆ. ಎಲ್ಲಕ್ಕಿಂತ ಮಿಗಿಲಾಗಿ ವರ್ಗಕೋಣೆಯಲ್ಲಿ ಉಪನ್ಯಾಸಕರು ಬೋಧಿಸುತ್ತಿದ್ದ ಪಾಠವನ್ನು ಚೆನ್ನಾಗಿ ಆಲಿಸುತ್ತಿದ್ದೆ ಎಂದು ತಮ್ಮ ಯಶಸ್ಸಿನ ಗುಟ್ಟ ವಿವರಿಸಿದರು.

ಶ್ರೀ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ರವಿ ಬಿರಾದರ, ಕಲ್ಯಾಣರಾವ್‌ ಪಾರಶೆಟ್ಟಿ, ಲಕ್ಷ್ಮಿಕಾಂತ ನಾಟೇಕರ್‌, ಶಿವಪ್ರಕಾಶ ಕುಂಬಾರ, ಸುಭಾಷ ಪೂಜಾರಿ, ಲಚಮಾರೆಡ್ಡಿ, ಅನಿಲ್ ಕಾರಾಮುಂಗೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next