Advertisement

ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಅವಶ್ಯ

10:44 AM Aug 23, 2019 | Naveen |

ಭಾಲ್ಕಿ: ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಅತ್ಯವಶ್ಯಕವಾಗಿದೆ ಎಂದು ಹುಗ್ಗೆಳ್ಳಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗದೇವರು ಹೇಳಿದರು.

Advertisement

ಖಟಕ ಚಿಂಚೋಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ನಡೆದ 2018-19ನೇ ಸಾಲಿನ ಎಸ್‌ಎಸ್‌ಎಲ್ಸಿ, ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಆದರ್ಶ ಶಿಕ್ಷಕರ ಸನ್ಮಾನ ಕಾರ್ಯಕರ್ಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ನಮ್ಮ ವಿದ್ಯಾರ್ಥಿಗಳು ಎಷ್ಟೇ ಪ್ರತಿಭಾವಂತರಾಗಿದ್ದರೂ, ಅವರಲ್ಲಿ ಮಾನವೀಯ ಮೌಲ್ಯಗಳು ಇರುವುದು ಅತ್ಯವಶ್ಯವಾಗಿದೆ. ವಿದ್ಯಾರ್ಥಿ ಉತ್ತಮ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆಯಲ್ಲಿರುವಾಗ ತಮ್ಮನ್ನು ಸಾಕಿ ಸಲುಹಿದ ತಂದೆ, ತಾಯಿ ಮತ್ತು ಗುರು, ಹಿರಿಯರನ್ನು ಮರೆಯಬಾರದು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ನಾ ರುದನೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸದಾ ಸಕಾರತ್ಮಕ ವಿಚಾರಗಳನ್ನು ಮಾಡಿ, ಗುರು ಹಿರಿಯರನ್ನು ಶ್ರದ್ಧೆ, ಭಕ್ತಿಯಿಂದ ಕಾಣಬೇಕು. ಅಂಕಗಳಿಕೆ ವ್ಯಕ್ತಿತ್ವ ವಿಕಾಸನದ ಒಂದು ಭಾಗ. ಪ್ರತಿಭೆಗೆ ಹಲವು ಮುಖಗಳಿವೆ. ಸಾಧನೆಗೆ ಬಡತನ ಅಡ್ಡಿಯಾಗದು. ಎಲ್ಲಿ ಶ್ರದ್ದೆ ಭಕ್ತಿ ಮತ್ತು ಶಿಸ್ತು ಇರುತ್ತದೆಯೊ ಅಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಗಬೇಕು ಎಂದು ಹೇಳಿದರು.

ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಿಂಗರಾಜ ಅರಸು ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಗುರುತಿಸುವಂತಾಗಬೇಕು. ಶಿಕ್ಷಕ ಎಂದರೆ ಅವರು ಮಕ್ಕಳ ಪಾಲಿನ ಶಿಲ್ಪಿ ಇದ್ದಂತೆ ಎಂದು ಹೇಳಿದರು.

Advertisement

ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸೂರ್ಯಕಾಂತ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವಿರಬೇಕು. ನಾನು ಸಾಧಿಸುವೆನು ಎನ್ನುವ ಛಲವಿರಬೇಕು. ಆಗ ಮಾತ್ರ ಅಂತಹ ವಿದ್ಯಾರ್ಥಿ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ಹೇಳಿದರು. ರೇವಣಸಿದ್ದ ಜಾಡರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಾತೋಶ್ರೀ ಗೋದಾವರಿ ತಾಯಿ ನೇತೃತ್ವ ವಹಿಸಿ ಮಾತನಾಡಿದರು. ಗ್ರಾಮ ಪಂಚಾಯತ ಉಪದ್ಯಾಕ್ಷ ಝೇರೆಪ್ಪಾ ಮುಡ್ಡರ, ಬಿಆರ್‌ಸಿ ನಾಗಭೂಷಣ ಮಾಮಡಿ, ರಾಮಚಂದ್ರ ಬೊಳಾ, ಸತಿಷ ಸಂಗನ್‌, ಯಶವಂತ ನಾಯಕ, ಶಣಮುಖಯ್ನಾ ಬಾಳೆಮಠ ವಿಜಯ ಕುಮಾರ, ಮುಖ್ಯಶಿಕ್ಷಕಿ ಗಂಗಮ್ಮಾ ಬಿರಾದಾರ, ಉಮೇಶ ತೆಲಂಗ, ಶಿವು ಮಡಿವಾಳ ರಾಮಲಿಂಗ ಮುಳಜಿ, ಮಹೇಶ ನಿಂಬುರೆ, ಲೋಕೆಶ ಮೌರೆ, ಮಾಳಗೊಂಡ ಕೊಳ್ಳೆ, ಗುರು ರೆಡ್ಡಿ, ಸುಮಿತ ಜಾಶೆಟ್ಟೆ ಇದ್ದರು.ನಾಗರಾಜ ಶೀಲವಂತ ಸ್ವಾಗತಿಸಿದರು. ಪರಶುರಾಮ ಪೂಜಾರಿ ನಿರೂಪಿಸಿದರು. ನಂದಿನಿ ಜಾಶೆಟ್ಟೆ ವಂದಿಸಿದರು

Advertisement

Udayavani is now on Telegram. Click here to join our channel and stay updated with the latest news.

Next