Advertisement

Bhalki: ಏ.10 ರಂದು ಮರಾಠಿಗರ ಹಕ್ಕಿಗಾಗಿ ಬೃಹತ್ ಸಮಾವಶ!

02:25 PM Apr 09, 2024 | Team Udayavani |

ಭಾಲ್ಕಿ: ಮರಾಠಿಗರ ಹಕ್ಕಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಸುಮಾರು ವರ್ಷಗಳಿಂದ ಪ್ರಜಾ ಪ್ರಭುತ್ವದ ಅಡಿಯಲ್ಲಿ ನಮಗೆ ಸಿಗಬೇಕಾದ ನ್ಯಾಯ ಸಿಗುತ್ತಿಲ್ಲ, ಈ ಭಾಗದಲ್ಲಿ ಅಲ್ಪ ಸಂಖ್ಯಾತರಾದ ಮರಾಠ ಸಮುದಾಯದವರಿಗೆ 2a ಮೀಸಲಾತಿ ಕೇಳುತ್ತಿದ್ದೇವೆ ಎಂದು ಮರಾಠ ಸಮುದಾಯದ ಮುಖಂಡ ಡಾ. ದಿನಕರ್ ಮೋರೆ ಹೇಳಿದರು.

Advertisement

ಪಟ್ಟಣದ ಅಡತ ಮಾರ್ಕೆಟ್ ಹತ್ತಿರದ ಜನಾರ್ದನ್ ಬಿರಾದಾರ್ ಕಚೇರಿಯಲ್ಲಿ ಕರೆದ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದರು. ರಾಜಕೀಯ ಪಕ್ಷದ ಮುಖಂಡರಿಗೆ ನಮ್ಮ ಮತ ಬೇಕು ಆದರೆ ನಮ್ಮ ಹಕ್ಕು ನಮಗೆ ನೀಡುತ್ತಿಲ್ಲ, ನಮ್ಮ ಜನರಿಗೆ ಜಾಗೃತ ಗೊಳಿಸುವ ನಿಟ್ಟಿನಲ್ಲಿ ಭಾಲ್ಕಿಯಲ್ಲಿ ದಿನಾಂಕ ಏಪ್ರಿಲ್ 10 ರಂದು, ಕಲವಾಡಿ ಹತ್ತಿರದ ರಾಮತೀರ್ಥ ವಾಡಿ ಕ್ರಾಸ್ ಸಮೀಪ ಬೃಹತ್ ವೇದಿಕೆ ನಿರ್ಮಿಸಿ ಸಕಲ ಮರಾಠ ಸಮಾವೇಶ ನಡೆಸುತ್ತಿದ್ದೇವೆ. ಸುಮಾರು 1ಲಕ್ಷ ಜನ ಸೇರುವ ನಿರೀಕ್ಷೆ ಇದೆ.

ಸಮಾವೇಶ ಉದ್ದೇಶಿಸಿ ಮರಾಠ ಗುರುಗಳಾದ ಬೆಂಗಳೂರಿನ ಗವಿಪುರಂ ಮಂಜುನಾಥ್ ಭಾರತಿ ಸ್ವಾಮೀಜಿ ಮತ್ತು ಮಹಾರಾಷ್ಟ್ರದ ನೇತಾ ಮನೋಜ್ ಜರಂಗೆ ದಾದಾ ಮಾತನಾಡುವಾರಿದ್ದಾರೆ ಎಂದು ತಿಳಿಸಿದರು.

ಜಿ. ಪಂ. ಮಾಜಿ ಅಧ್ಯಕ್ಷ ಪದ್ಮಾಕರ್ ಪಾಟೀಲ್ ಮಾತನಾಡಿ, ರಾಜ್ಯದ ಎಲ್ಲಾ ಪಕ್ಷದವರು ಮರಾಠಿಗರನ್ನು ಓಟಿಗಾಗಿ ಬಳಸಿಕೊಳ್ಳುತ್ತಿದ್ದಾರೆ, ಆದರೆ ಮರಾಠಿಗರ ಬೇಡಿಕೆಗೆ ಸ್ಪಂದಿಸುತ್ತಿಲ್ಲ, ಹೀಗಾಗಿ ಸರ್ಕಾರದ ಕಣ್ಣು ತೆರೆಸಲು ನಾವು ಹೋರಾಟ ಮಾಡುವುದು ಅನಿವಾರ್ಯ ವಾಗಿದೆ. ಪಕ್ಷತೀತ ವಾಗಿ ಎಲ್ಲಾ ಮರಾಠ ಮುಖಂಡರು ಈ ಸಮಾವೇಶ ದಲ್ಲಿ ಭಾಗವಹಿಸುತ್ತಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಜನಾರ್ಧನ್ ಬಿರಾದಾರ್, ಪಾಂಡುರಂಗ ಕನಸೇ, ರವಸಾಬ್ ಬಿರಾದಾರ್ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next