ಅಪೂರ್ವಾ ಅವರ ಸೊಗಸಾದ ಕಂಠಸಿರಿಯಲ್ಲಿ “ಸೌರಾಷ್ಟ್ರ ದೇಶದಲಿ…’ ಈಶ್ವರ ಭಕ್ತಿಯ ಹಾಡು ಮೂಡಿ ಬಂದರೆ, ಸಮೂಹ ಗಾಯನದಲ್ಲಿ ಆದಿ ಶಂಕರಾಚಾರ್ಯರ “ಶಿವ ಮಾನಸ ಸ್ತೋತ್ರ’ ತಲ್ಲೀನರಾಗುವಂತೆ ಮಾಡಿತು. ಮುಂದೆ ಪುರಂದರ ದಾಸರ “ತಾರಕ್ಕ ಬಿಂದಿಗೆ…’ಯನ್ನು ಮಾ| ಶುಭಾಂಗ್ ಐತಾಳ್, ನರೇಂದ್ರ ಶರ್ಮರ “ಭಾಜೆ ಮುರಳೀಯ…’ವನ್ನು ಕು| ವರ್ಷಾ, ಪುರಂದರ ದಾಸರ “ಪವಮಾನ…’ವನ್ನು ಮತ್ತು “ಬಂದಾನೋ ಗೋವಿಂದ…’ ಹಾಗೂ “ನೋಡಿದ್ಯಾ ಸೀತಮ್ಮ…’ವನ್ನು ಮಾ| ಭಾರ್ಗವ್ ಹಾಗೂ ಅಪೂರ್ವಾ ಮತ್ತು ಕು| ಶರಣ್ಯಾ ಹಾಡಿರುವುದು ಖುಷಿ ನೀಡಿತು. ಅನಂತರ ಮೀರಾ ಭಜನ್‌ನ “ಪಾಯೋಜೆ ಮೈನೆ…’ ಇದನ್ನು ಸಮೂಹವಾಗಿ ಹಾಡಿರುವುದು ಚೇತೋಹಾರಿಯಾಗಿತ್ತು. ಮುಂದೆ “ಕವನ ಸುಖ ಪಾಯೋ…’ ವನ್ನು ಹಿರಿಯರಾದ ಡಾ| ಎಚ್. ಆರ್. ಹೆಬ್ಟಾರ್ ಮತ್ತು ಮೀರಾ ಭಜನ್‌ನ “ಮೇ ಗಿರಿದಾರಿ …’ಯನ್ನು ಕು| ವರ್ಷಾ ಹಾಡಿದ್ದು ಮೆಚ್ಚುಗೆಗೆ ಪಾತ್ರವಾಯಿತು. ಕೊನೆಯಲ್ಲಿ ಸಮೂಹವಾಗಿ “ಮಂತ್ರ ಪುಷ್ಪ’ ಹಾಡಿನೊಂದಿಗೆ ಕಾರ್ಯಕ್ರಮಕ್ಕೆ ಮಂಗಳವನ್ನಿತ್ತರು. ತಬಲಾದಲ್ಲಿ ರಾಘವೇಂದ್ರ ಹೆಗಡೆ ಭಟ್ಕಳ್ ಮತ್ತು ಪೂರ್ಣಾನಂದ ಬಸ್ರೂರ್, ಕೀ ಬೋರ್ಡ್‌ನಲ್ಲಿ ಭಾಸ್ಕರ್ ಆಚಾರ್ ಬಸ್ರೂರು, ಕೊಳಲಿನಲ್ಲಿ ಕಿರಣ್ ಹೊಳ್ಳ ವಡ್ಡರ್ಸೆ ಸಹಕರಿಸಿದ್ದರು. ಈ ವಿದ್ಯಾರ್ಥಿಗಳು ಗುರುಗಳಾದ ವಿ| ಗಜಾನನ ಹೆಬ್ಟಾರ್ ಹಾಗೂ ಸುಗಮ ಸಂಗೀತ ಗುರುಗಳಾದ ಸುರೇಖಾ ಕೆ. ಎಸ್. ಬೆಂಗಳೂರು ಇವರ ಶಿಷ್ಯಂದಿರು.
Advertisement
ಕೆ. ದಿನಮಣಿ ಶಾಸ್ತ್ರಿ